ವಾಷಿಂಗ್ಟನ್: ಮೆಟಾ ಮಾಲಿಕತ್ವದ ಫೇಸ್‌ಬುಕ್ ಓಮಿಕ್ರಾನ್ ಭೀತಿಯಿಂದಾಗಿ ತನ್ನ ಉದ್ಯೋಗಿಗಳನ್ನು ಕಂಪನಿಗೆ ಕರೆಸಿಕೊಳ್ಳುವ ಯೋಜನೆಯನ್ನು ವಿಳಂಬ ಮಾಡಿದೆ. ಮಾತ್ರವಲ್ಲದೇ ಕಂಪನಿಗೆ ಮರಳುವ ಉದ್ಯೋಗಿಗಳಿಗೆ ಬೂಸ್ಟರ್ ಡೋಸ್ ಕಡ್ಡಾಯಗೊಳಿಸದೆ.
ಈ ಹಿಂದೆ ಫೇಸ್‌ಬುಕ್ ಜನವರಿ 31ರ ಒಳಗಾಗಿ ತನ್ನ ಉದ್ಯೋಗಿಗಳನ್ನು ವರ್ಕ್ ಫ್ರಮ್ ಹೋಮ್ ಕೊನೆಗೊಳಿಸಿ ಕಂಪನಿಗೆ ಕರೆಸಿಕೊಳ್ಳುವ ಯೋಜನೆ ಮಾಡಿತ್ತು. ಆದರೆ ಪ್ರಪಂಚದಾದ್ಯಂತ ಓಮಿಕ್ರಾನ್ ಪ್ರಕರಣಗಳ ಏರಿಕೆಯಿಂದಾಗಿ ಈ ದಿನಾಂಕವನ್ನು ಮಾರ್ಚ್ 28ಕ್ಕೆ ಮುಂದೂಡಿದೆ.
Advertisement
Advertisement
ನಮ್ಮ ಕಂಪನಿಯ ಹಲವು ಉದ್ಯೋಗಿಗಳು ಕಂಪನಿಗೆ ಮರಳಲು ಸಿದ್ಧರಾಗಿಲ್ಲದಿರುವುದನ್ನು ನಾವು ಗಮನಿಸಿದ್ದೇವೆ. ಹೀಗಾಗಿ ಅವರಿಗೆ ನಾವು ಕೆಲವು ಆಯ್ಕೆಗಳನ್ನು ನೀಡಲು ಮುಂದಾಗಿದ್ದೇವೆ. ಉದ್ಯೋಗಿಗಳು ತಾವು ಎಲ್ಲಿ ಕೆಲಸ ಮಾಡಲು ಬಯಸುತ್ತಾರೆ ಎಂಬುದರ ನಿರ್ಧಾರವನ್ನು ಕಂಪನಿಗೆ ತಿಳಿಸಬೇಕು ಎಂದು ಫೇಸ್‌ಬುಕ್ ಉಪಾಧ್ಯಕ್ಷ ಜಾನೆಲ್ ಗೇಲ್ ತಿಳಿಸಿದ್ದಾರೆ. ಇದನ್ನೂ ಓದಿ: ವಿವೋ ಐಪಿಎಲ್ ಅಂತ್ಯ ಇನ್ಮುಂದೆ ಟಾಟಾ ಐಪಿಎಲ್
Advertisement
ಉದ್ಯೋಗಿಗಳು ತಮಗೆ ಅನುಕೂಲವಾಗುವಂತೆ ಮನೆಯಿಂದ ಅಥವಾ ಕಂಪನಿಯಲ್ಲಿಯೇ ಕೆಲಸ ಮಾಡುವ ಆಯ್ಕೆಯನ್ನು ಫೇಸ್‌ಬುಕ್ ನೀಡಿದೆ. ತಮ್ಮ ನಿರ್ಧಾರವನ್ನು ಕಂಪನಿಗೆ ತಿಳಿಸಲು ಮಾರ್ಚ್ 14ರವರೆಗೆ ಸಮಯಾವಕಾಶವನ್ನು ನೀಡಿದೆ. ಉದ್ಯೋಗಿಗಳು ಕಂಪನಿಯನ್ನು ಪ್ರವೇಶಿಸುವುದಾದರೆ ಅವರು ಬೂಸ್ಟರ್ ಡೋಸ್ ಪಡೆದಿರುವ ಪುರಾವೆಯನ್ನು ತೋರಿಸಬೇಕಾಗುತ್ತದೆ.
Advertisement
ಆರೋಗ್ಯಕ್ಕೆ ಸಂಬಂಧಪಟ್ಟ ಅಥವಾ ಧಾರ್ಮಿಕ ಕಾರಣಕ್ಕೆ ಲಸಿಕೆಗಳನ್ನು ತೆಗೆದುಕೊಳ್ಳಲು ಸಾಧ್ಯವಾಗದವರು ಮನೆಯಲ್ಲಿಯೇ ಕೆಲಸ ಮಾಡುವ ಅವಕಾಶ ಫೇಸ್‌ಬುಕ್ ನೀಡಿದೆ. ಆದರೆ ನಿಗದಿತ ಸಮಯದ ಒಳಗಾಗಿ ತಮ್ಮ ನಿರ್ಧಾರವನ್ನು ತಿಳಿಸದೇ ಹೋದಲ್ಲಿ ಕಂಪನಿ ಅವರನ್ನು ವಜಾಗೊಳಿಸುವ ಸಾಧ್ಯತೆಯೂ ಇದೆ. ಇದನ್ನೂ ಓದಿ: ಏಷ್ಯಾ ಸ್ಟಾರ್ ಗಾಲಾದಲ್ಲಿ ಭಾರತವನ್ನು ಪ್ರತಿನಿಧಿಸಿದ ಸ್ಟಾರ್ ಡಿಸೈನರ್ ಫಾರೆವರ್ ನವೀನ್ ಕುಮಾರ್