LatestMain PostSmartphonesTech

ನೋಟಿಫಿಕೇಶನ್‌ನಲ್ಲಿ ಪ್ರೊಫೈಲ್ ಫೋಟೋ – ಐಒಎಸ್‌ಗೂ ಬರಲಿದೆ ವಾಟ್ಸಪ್‌ನ ಹೊಸ ಫೀಚರ್

ವಾಷಿಂಗ್ಟನ್: ಇಲ್ಲಿಯವರೆಗೆ ನಿಮ್ಮ ಐಒಎಸ್ ಫೋನ್‌ನಲ್ಲಿ ವಾಟ್ಸಪ್ ಸಂದೇಶಗಳು ಬಂದಾಗ ನೋಟಿಫಿಕೇಶನ್‌ನಲ್ಲಿ ಕೇವಲ ಹೆಸರು ಮಾತ್ರ ಗೋಚರಿಸುತ್ತಿತ್ತು. ಇನ್ನು ಮುಂದೆ ವಾಟ್ಸಪ್ ಸಂದೇಶದ ನೋಟಿಫಿಕೇಶನ್‌ನಲ್ಲಿ ಸಂದೇಶ ಕಳುಹಿಸಿದವರ ಪ್ರೊಫೈಲ್ ಫೋಟೋ ಕೂಡಾ ಕಾಣಿಸಲಿದೆ.

ಹೌದು, ಈ ಫೀಚರ್ ಆ್ಯಂಡ್ರಾಯ್ಡ್ ಫೋನ್‌ಗಳಲ್ಲಿ ವರ್ಷಗಳಿಂದಲೂ ಬಳಕೆಯಲ್ಲಿದೆ. ಆದರೆ ಐಒಎಸ್ ಬಳಕೆದಾರರಿಗೆ ಈ ಫೀಚರ್‌ನ ಭಾಗ್ಯ ಇಲ್ಲಿಯವರೆಗೂ ಸಿಕ್ಕಿಲ್ಲ. ಕೊನೆಗೂ ವಾಟ್ಸಪ್ ಈ ಫೀಚರ್ ಅನ್ನು ಐಒಎಸ್‌ಗಳಿಗೂ ತರಲಿರುವ ಸುಳಿವು ನೀಡಿದೆ. ಇದನ್ನೂ ಓದಿ: ಬಿಎಸ್‌ಎನ್‌ಎಲ್ ಹೊಸ ಬಳಕೆದಾರರಿಗೆ 5ಜಿಬಿ ಉಚಿತ ಡೇಟಾ

whatsapp

ಸದ್ಯ ಈ ಫೀಚರ್ ವಾಟ್ಸಪ್‌ನ 2.22.1.1ಗೆ ಅಪ್ಡೇಟ್ ಮಾಡಿರುವ ಐಒಎಸ್ ಬೀಟಾ ಬಳಕೆದಾರರಿಗೆ ಮಾತ್ರವೇ ಪರೀಕ್ಷಿಸಲು ಸಾಧ್ಯವಾಗುತ್ತಿದೆ. ಇದು ವಾಟ್ಸಪ್‌ನ ಈ ವರ್ಷದ ಮೊದಲ ಬೀಟಾ ಟೆಸ್ಟಿಂಗ್ ಕೂಡಾ ಹೌದು.

ಈ ಫೀಚರ್‌ನಿಂದ ಬಳಕೆದಾರರು ನೋಟಿಫಿಕೇಶನ್‌ನಲ್ಲಿ ಸಂದೇಶ ಕಳುಹಿಸಿದವರ ಹೆಸರನ್ನು ಓದುವ ಅಗತ್ಯ ಬೀಳುವುದಿಲ್ಲ. ಬದಲಾಗಿ ಪ್ರೊಫೈಲ್ ಫೋಟೋ ನೋಡುತ್ತಿದ್ದಂತೆ ಸಂದೇಶ ಕಳುಹಿಸಿದವರನ್ನು ಗುರುತು ಹಿಡಿಯಬಹುದು. ಇದನ್ನೂ ಓದಿ: ಬಟನ್ ಒತ್ತಿದ್ರೆ ಕಾರಿನ ಬಣ್ಣವೇ ಬದಲಾಗುತ್ತೆ

ವಾಟ್ಸಪ್‌ನ ಬಹುನಿರೀಕ್ಷಿತ ಇನ್ನೊಂದು ಹೊಸ ಫೀಚರ್ ಬಿಸಿನೆಸ್ ನಿಯರ್‌ಬೈ. ಈ ಫೀಚರ್‌ನಿಂದ ಬಳಕೆದಾದರು ಹತ್ತಿರದ ರೆಸ್ಟೋರೆಂಟ್, ಕಿರಾಣಿ ಅಂಗಡಿಗಳು, ಬಟ್ಟೆ ಅಂಗಡಿಗಳು ಹೀಗೆ ಹಲವು ವ್ಯಾಪಾರಗಳನ್ನು ಹುಡುಕಲು ಸಹಾಯ ಮಾಡಲಿದೆ.

Leave a Reply

Your email address will not be published.

Back to top button