Bengaluru CityBollywoodCinemaDistrictsKarnatakaLatestMain PostSandalwoodSouth cinema

`ಪುಷ್ಪ’ ಬೆಡಗಿ ರಶ್ಮಿಕಾ ಒಂದೇ ದಿನ ಏನೆಲ್ಲಾ ತಿಂತಾರೆ ಗೊತ್ತಾ? ರಶ್ಮು ವಿಡಿಯೋ ವೈರಲ್

ನ್ಯಾಷನಲ್ ಕ್ರಶ್ ರಶ್ಮಿಕಾ ಮಂದಣ್ಣ ಬಾಲಿವುಡ್ ಮತ್ತು ಟಾಲಿವುಡ್‌ನಲ್ಲಿ ಸಿಕ್ಕಾಪಟ್ಟೆ ಬ್ಯುಸಿ ನಟಿ. ಸೌತ್‌ನಿಂದ ನಾರ್ತ್ವರೆಗೂ ಕೊಡಗಿನ ಕುವರಿಯದ್ದೇ ಕಾರುಬಾರು. ಇದೀಗ ಒಂದೇ ದಿನದಲ್ಲಿ ರಶ್ಮಿಕಾ ಏನೆಲ್ಲ ತಿಂಡಿ ತಿನ್ನುತ್ತಾರೆ. ಮತ್ಯಾವ ತಂಪು ಪಾನೀ ಕುಡಿಯುತ್ತಾರೆ ಅಂತಾ ಪೋಸ್ಟ್ ಮಾಡಿದ್ದಾರೆ.

ಸೌತ್ ಸಿನಿ ಅಂಗಳದಲ್ಲಿ ಸದ್ಯ ಟಾಪ್‌ನಲ್ಲಿರೋ ರಶ್ಮಿಕಾ ಕುಂತ್ರು ಸುದ್ದಿ ನಿಂತ್ರು ಸುದ್ದಿ. ಇನ್ನು ಸಿನಿಮಾಗಳ ಜೊತೆಗೆ ಸಾಮಾಜಿಕ ಜಾಲತಾಣದಲ್ಲೂ ಆಕ್ಟೀವ್‌ಯಿರೋ ಕೊಡಗಿನ ಕುವರಿ ರಶ್ಮಿಕಾ, ದಿನನಿತ್ಯ ತಮ್ಮ ದಿನಚರಿ ಹೇಗಿರುತ್ತೆ. ಬೆಳಗಿನ ಉಪಹಾರದವರೆಗೂ ಊಟದವರೆಗೂ ರಶ್ಮಿಕಾ ಏನೆಲ್ಲಾ ತಿಂತಾರೆ ಅನ್ನೋ ಕಿರು ನೋಟವಿರೋ ವಿಡಿಯೋವನ್ನ ಸಾಮಾಜಿಕ ಜಾಲತಾಣದಲ್ಲಿ ರಶ್ಮಿಕಾ ರಿವೀಲ್ ಮಾಡಿದ್ದಾರೆ. ನಾನು ಖುಷಿಯಾಗಿರುತ್ತೇನೆ ತಾನು ಇಷ್ಟಪಟ್ಟ ಊಟ ಸಿಕ್ಕಾಗ ಎಂದು ಬರೆದುಕೊಂಡಿದ್ದಾರೆ.

ರಶ್ಮಿಕಾ ಲೇಟೆಸ್ಟ್ ವಿಡಿಯೋದಲ್ಲಿ ಶೂಟಿಂಗ್ ಮಧ್ಯೆ ಏನೆಲ್ಲಾ ತಿಂತಾರೆ ಮತ್ತೆ ತಿನೋ ವಿಚಾರ ಎಷ್ಟು ಖುಷಿ ಕೊಡುತ್ತೆ ಅನ್ನೋದನ್ನ ಈ ವಿಡಿಯೋ ಮೂಲಕ ರಿವೀಲ್ ಮಾಡಿದ್ದಾರೆ. ಸದ್ಯ ಪುಷ್ಪ ನಟಿಯ ಈ ವಿಡಿಯೋ ಭಾರೀ ವೈರಲ್ ಆಗುತ್ತಿದೆ. ಇದನ್ನೂ ಓದಿ: `ಪುಷ್ಪ’ -2ಗೆ ಐಕಾನ್ ಸ್ಟಾರ್ ಸಂಭಾವನೆ ಕೇಳಿದ್ರೆ ಶಾಕ್ ಆಗೋದು ಗ್ಯಾರೆಂಟಿ

ಸದ್ಯ `ಪುಷ್ಪ 2′, `ಅನಿಮಲ್’, `ಮಿಷನ್ ಮಜ್ನು’, `ಗುಡ್ ಬೈ’, ವಿಜಯ್ ದಳಪತಿ ಜತೆಗಿನ ಚಿತ್ರ, ಜ್ಯೂ.ಎನ್‌ಟಿಆರ್ ಜತೆಗಿನ ಚಿತ್ರಗಳು ರಶ್ಮಿಕಾ ಕೈಯಲ್ಲಿವೆ. ಶ್ರೀವಲ್ಲಿಯ ಸಿನಿಮಾಗಾಗಿ ಫ್ಯಾನ್ಸ್ ಕಾಯ್ತಿದ್ದಾರೆ.

Leave a Reply

Your email address will not be published.

Back to top button