ಬೆಂಗಳೂರು: ಕಳೆದ 6 ತಿಂಗಳಲ್ಲಿ ನೀವು ಏನು ಮಾಡಿದ್ದೀರಿ ಎಂದು ಅಧಿಕಾರಿಗಳನ್ನು ನೂತನ ಮುಖ್ಯಮಂತ್ರಿ ಸಿದ್ದರಾಮಯ್ಯ (Siddaramaiah) ಪ್ರಶ್ನಿಸಿದರು.
ವಿಧಾನಸೌಧ (Vidhanasoudha) ದ ಸಮ್ಮೇಳನ ಸಭಾಂಗಣದಲ್ಲಿ ನಡೆದ ಸರ್ಕಾರದ ಮುಖ್ಯ ಕಾರ್ಯದರ್ಶಿಗಳು, ಪ್ರಧಾನ ಕಾರ್ಯದರ್ಶಿಳು ಹಾಗೂ ಕಾರ್ಯದರ್ಶಿಗಳ ಸಭೆಯಲ್ಲಿ ಮೊದಲು ಸಿಎಂ ಅವರು 6 ತಿಂಗಳ ಪ್ರೊಗ್ರೆಸ್ ರಿಪೋರ್ಟ್ ಕೇಳಿದರು. ಇದನ್ನೂ ಓದಿ: ಮೃತ ಹಸುವಿನ ಪೋಸ್ಟ್ ಮಾರ್ಟಂ ರಿಪೋರ್ಟ್ ನೀಡಲು ಲಂಚ ಕೇಳಿದ ಪಶುವೈದ್ಯಾಧಿಕಾರಿ!
ಕಳೆದ ಸರ್ಕಾರದಲ್ಲಿ ಸಿಎಂ ಸಚಿವರು ಎಲ್ಲಾ 6 ತಿಂಗಳಿನಿಂದ ಎಲೆಕ್ಷನ್ ಮೂಡ್ ನಲ್ಲಿ ಇದ್ದರು. ಆಡಳಿತದ ಕಡೆ ಯಾರು ಜಾಸ್ತಿ ಆಸಕ್ತಿ ತೋರಿಸಿಲ್ಲ. ಆಗ ನೀವುಗಳು ಏನು ಮಾಡಿದ್ದೀರಿ 6 ತಿಂಗಳಲ್ಲಿ?. ಇಲಾಖಾವಾರು ಪ್ರೊಗ್ರೆಸ್ ರಿಪೋರ್ಟ್ ಏನಿದೆ ಅಂತ ಹೇಳ್ತೀರಾ?. ಅಧಿಕಾರಿಗಳಾಗಿ ನೀವು 6 ತಿಂಗಳು ಏನು ಕೆಲಸ ಮಾಡಿದ್ದೀರಿ ಅನ್ನೋದು ಮುಖ್ಯ ಅಲ್ವಾ ಎಂದು ಅಧಿಕಾರಗಳನ್ನ ಸಿಎಂ ಪ್ರಶ್ನಿಸಿದರು.
ಸಭೆ ಬಳಿಕ ಸಿಎಂ ಸಿದ್ದರಾಮಯ್ಯ ಸುದ್ದಿಗಾರರೊಂದಿಗೆ ಮಾತನಾಡಿ, ಆಡಳಿತದಲ್ಲಿ ಸುಧಾರಣೆ, ಪಾರದರ್ಶಕ ಆಡಳಿತ ನೀಡಲು ಅಧಿಕಾರಿಗಳ ಸಹಕಾರ ಕೋರಿದ್ದೇವೆ. ಉತ್ತಮ ಆಡಳಿತ ನೀಡಲು ತ್ವರಿತವಾಗಿ ಕಡತ ವಿಲೇವಾರಿ ಮಾಡಿ. ಟೈಂ ಬಾಂಡ್‍ನೊಳಗೆ ಕಡತ ವಿಲೇವಾರಿ ಮಾಡಿ. ಜನರಿಗೆ ಸರ್ಕಾರಿ ಯೋಜನೆಗಳನ್ನ ತಲುಪಿಸಲು ಕ್ರಮವಹಿಸಿ. ಸರ್ಕಾರದ ಯೋಜನೆಗಳನ್ನ ನಿಗಧಿತ ಕಾಲಾವಧಿಯೊಳಗೆ ಅನುಷ್ಠಾನಗೊಳಿಸಿ. ತಡವಾದರೆ ಭ್ರಷ್ಟಾಚಾರಕ್ಕೆ ಆಸ್ಪದವಾಗುತ್ತೆ. ಜೊತೆಗೆ ಯೋಜನೆ ಅನುಧಾನ ವೆಚ್ಚ ಹೆಚ್ಚಳವಾಗುತ್ತೆ ಹಾಗಾಗಿ ಸೂಕ್ತ ಸಮಯಕ್ಕೆ ಯೋಜನೆಯನ್ನ ಜನರಿಗೆ ತಲುಪಿಸಿ. ಆಡಳಿತದಲ್ಲಿ ಪಾರದರ್ಶಕತೆ ತಂದು ಉತ್ತಮ ಆಡಳಿತ ನೀಡಲು ಕ್ರಮವಹಿಸಿ ಎಂದು ಸೂಚನೆ ನೀಡಿದ್ದೇನೆ ಎಂದರು.
ಇದೇ ವೇಳೆ ಬಿಜೆಪಿ (BJP) ಆಡಳಿತದಲ್ಲಿ ಆಗಿರುವ ಪಠ್ಯ ಪುಸ್ತಕ ಪರಿಷ್ಕರಣೆ ಮಾಡುವ ವಿಚಾರದ ಕುರಿತು ಪ್ರಶ್ನಿಸಿದಾಗ ಕ್ಯಾಬಿನೆಟ್ ನಲ್ಲಿ ತೀರ್ಮಾನ ಮಾಡ್ತೇವೆ ಅಂತ ಸಿದ್ದರಾಮಯ್ಯ ಹೇಳಿದರು. ಇದನ್ನೂ ಓದಿ: ಅರಬ್ಬೀ ಸಮುದ್ರದಲ್ಲಿ ದೋಣಿ ಮುಳುಗಡೆ – 12 ಮೀನುಗಾರರ ರಕ್ಷಣೆ