– 1.50 ಕೋಟಿ ರೂ. ಹಾನಿ
ಕಾರವಾರ: ಅರಬ್ಬೀ ಸಮುದ್ರದಲ್ಲಿ (Arabian Sea) ಅಬ್ಬರದ ಗಾಳಿ ಹಾಗೂ ಅಲೆಗಳ ಹೊಡೆತಕ್ಕೆ ಮೀನುಗಾರಿಕೆಗೆ ತೆರಳಿದ್ದ ದೋಣಿ ಮುಳುಗಡೆಯಾಗಿದ್ದು (Boat Sinking) 12 ಮೀನುಗಾರರನ್ನು ಸ್ಥಳೀಯ ಮೀನುಗಾರರು ರಕ್ಷಿಸಿದ ಘಟನೆ ಉತ್ತರ ಕನ್ನಡ (Uttara Kannada) ಜಿಲ್ಲೆಯ ಅಂಕೋಲ (Ankola) ತಾಲೂಕಿನಲ್ಲಿ ನಡೆದಿದೆ.
Advertisement
Advertisement
ಮಂಗಳವಾರ ಅಂಕೋಲದ ಬೆಳ್ಳಂಬಾರಿನ ಕಡಲ ತೀರದಿಂದ ಅರಬ್ಬೀ ಸಮುದ್ರಕ್ಕೆ ಚಂದ್ರಾವತಿ ಹೆಸರಿನ ಬೋಟ್ ಮೀನುಗಾರಿಕೆಗೆ ತೆರಳಿತ್ತು. ಸುಭಾಷ್ ಖಾರ್ವಿ ಎಂಬವರಿಗೆ ಸೇರಿದ ಪರ್ಶಿಯನ್ ಬೋಟ್ ಇದಾಗಿತ್ತು. ಹವಾಮಾನ ವೈಪರಿತ್ಯದಿಂದಾಗಿ ಸಮುದ್ರದಲ್ಲಿ ಹೆಚ್ಚಿನ ಗಾಳಿ ಹಾಗೂ ದೊಡ್ಡ ಅಲೆಗೆ ಬೋಟ್‌ನ ತಳಭಾಗದ ಫೈಬರ್ ಕಿತ್ತು ಹೋಗಿದ್ದು ಬಳಿಕ ಬೋಟ್‌ನ ಒಳಭಾಗಕ್ಕೆ ನೀರು ನುಗ್ಗಿ ಮುಳುಗಲು ಪ್ರಾರಂಭಿಸಿತು. ಇದನ್ನೂ ಓದಿ: ಕೆಮ್ಮಿನ ಸಿರಪ್ ರಫ್ತಿಗೂ ಮುನ್ನ ಪರೀಕ್ಷೆ ಕಡ್ಡಾಯಗೊಳಿಸಿದ ಕೇಂದ್ರ
Advertisement
Advertisement
ತಕ್ಷಣ ಹತ್ತಿರದಲ್ಲಿದ್ದ ಇನ್ನೊಂದು ಬೋಟ್‌ನಲ್ಲಿದ್ದವರು ಮುಳುಗುತ್ತಿದ್ದ ಬೋಟ್‌ನಿಂದ 12 ಮೀನುಗಾರರನ್ನು ರಕ್ಷಣೆ ಮಾಡಿದ್ದಾರೆ. ಬೋಟ್ ಮುಳುಗಡೆಯಿಂದಾಗಿ ಅಂದಾಜು 1.50 ಕೋಟಿ ರೂ. ಹಾನಿಯಾಗಿದೆ. ಇದನ್ನೂ ಓದಿ: ಯುಪಿಎಸ್‍ಸಿ ಫಲಿತಾಂಶ ಪ್ರಕಟ – ಲೇಡಿಸ್‍ಗೆ ಫಸ್ಟ್ 4 ರ‍್ಯಾಂಕ್