ಬೆಂಗಳೂರು: ಹಿರಿಯ ನಟಿ ವೈಜಯಂತಿಮಾಲಾ, ನಟ ಚಿರಂಜೀವಿ ಸೇರಿದಂತೆ ಹಲವು ಸಾಧಕರಿಗೆ ರಾಷ್ಟ್ರಪತಿ ದ್ರೌಪದಿ ಮುರ್ಮು ಇಂದು ಪದ್ಮ ಪ್ರಶಸ್ತಿ ಪ್ರದಾನ ಮಾಡಿದರು. ಈ ವೇಳೆಯ ಹೃದಯಸ್ಪರ್ಶಿ ವೀಡಿಯೋವೊಂದನ್ನು ಕೇಂದ್ರ ಸಚಿವೆ ಶೋಭಾ ಕರಂದ್ಲಾಜೆ (Shobh Karandlaje) ಶೇರ್ ಮಾಡಿಕೊಂಡಿದ್ದಾರೆ.
ತಮ್ಮ ಎಕ್ಸ್ ಖಾತೆಯಲ್ಲಿ ಸಮಾಜ ಸೇವೆಗೆ ಡಾ. ಕೆ.ಎಸ್ ರಾಜಣ್ಣ (Dr. K.S Rajanna) ಅವರು ಪದ್ಮಶ್ರೀ (PadmaShree) ಪ್ರಶಸ್ತಿ ಸ್ವೀಕಾರ ಮಾಡುತ್ತಿರುವ ವೀಡಿಯೋ ಹಂಚಿಕೊಂಡ ಶೋಭಾ ಅವರು, ಎಂಥಹ ಹೃದಯಶ್ಪರ್ಶಿ ವೀಡಿಯೋ ಇದಾಗಿದೆ ಎಂದಿದ್ದಾರೆ. ಅಲ್ಲದೇ ನರೇಂದ್ರ ಮೋದಿಯವರ (Narendra Modi) ಭಾರತ, ಪ್ರತಿ ನಿಸ್ವಾರ್ಥ ಕಾರ್ಯವನ್ನು ಗೌರವಿಸುತ್ತದೆ. ಇದು ನಿಜವಾಗಿಯೂ ನವಚೈತನ್ಯ ತುಂಬಿದ ಭಾರತ ಎಂದು ಬರೆದುಕೊಂಡಿದ್ದಾರೆ.
Advertisement
Advertisement
ರಾಷ್ಟ್ರಪತಿ ದ್ರೌಪದಿ ಮುರ್ಮು (Droupadi Murmu) ಅವರು ಒಟ್ಟು 132 ಜನರನ್ನು ಸನ್ಮಾನಿಸಿದರು. ಇದರಲ್ಲಿ ವಿಕಲಚೇತನ ಸಮಾಜ ಸೇವಕ ಡಾ.ಕೆ.ಎಸ್.ರಾಜಣ್ಣ ಅವರೂ ಒಬ್ಬರಾಗಿದ್ದು, ಪ್ರಶಸ್ತಿ ಸ್ವೀಕರಿಸಲು ಬಂದಾಗ ಎಲ್ಲರೂ ಅವರನ್ನೇ ನೋಡುತ್ತಿದ್ದರು. ಡಾ.ರಾಜಣ್ಣ ಅವರು ಮೊದಲು ಪ್ರಧಾನಿ ನರೇಂದ್ರ ಮೋದಿ ಅವರಿಗೆ ಶೇಕ್ ಹ್ಯಾಂಡ್ ಕೊಟ್ಟರು. ಬಳಿಕ ರಾಷ್ಟ್ರಪತಿ ದ್ರೌಪದಿ ಮುರ್ಮು ಅವರತ್ತ ತೆರಳಿ ಸನ್ಮಾನ ಸ್ವೀಕರಿಸಿದರು. ಸನ್ಮಾನ ಸ್ವೀಕರಿಸಿದ ಬಳಿಕ ಸಮಸ್ತ ಜನತೆಯ ಶುಭಾಶಯಗಳನ್ನು ಸ್ವೀಕರಿಸಿದರು. ಈ ವೇಳೆ ಯೋಧರೊಬ್ಬರು ಸಹಾಯ ಮಾಡಲು ಮುಂದಾದರು. ಆದರೆ ಡಾ.ರಾಜಣ್ಣ ಅವರು ಸಹಾಯ ಪಡೆಯಲು ನಿರಾಕರಿಸಿದರು. ಇದನ್ನೂ ಓದಿ: ಹಿರಿಯ ನಟಿ ವೈಜಯಂತಿಮಾಲಾ, ಚಿರಂಜೀವಿ ಸೇರಿದಂತೆ ಹಲವು ಸಾಧಕರಿಗೆ ಪದ್ಮ ಪ್ರಶಸ್ತಿ ಪ್ರದಾನ
Advertisement
What a heartwarming video..!!
Overjoyed to see deserving individuals like social worker Dr. K.S. Rajanna being recognized with the prestigious Padma Shri Award. In @narendramodi ji' s New India, every selfless deed is acknowledged and celebrated.
A truly rejuvenated Bharat. pic.twitter.com/kbnmXASrkM
— Shobha Karandlaje (Modi Ka Parivar) (@ShobhaBJP) May 9, 2024
Advertisement
ಕರ್ನಾಟಕ ಮೂಲದ ಡಾ.ರಾಜಣ್ಣ ಅವರು ಚಿಕ್ಕ ವಯಸ್ಸಿನಲ್ಲಿ ಪೋಲಿಯೊದಿಂದ ಕೈ-ಕಾಲುಗಳನ್ನು ಕಳೆದುಕೊಂಡರು. ಬಳಿಕ ಅವರು ತನ್ನ ಮೊಣಕಾಲುಗಳ ಸಹಾಯದಿಂದ ನಡೆಯಲು ಆರಂಭಿಸಿದರು. ಆದರೂ ಎದೆಗುಂದದ ರಾಜಣ್ಣ ಅವರು ತಾನು ಯಾರಿಗಿಂತ ಕಡಿಮೆ ಇಲ್ಲ ಎನ್ನುವಂತೆ ಛಲದಿಂದ ಕೆಲಸ ಮಾಡಲು ನಿರ್ಧರಿಸಿದರು. ಇದರ ಫಲವಾಗಿ ಇಂದು ದೇಶದ ಅತ್ಯುನ್ನತ ಪ್ರಶಸ್ತಿಯನ್ನು ಪಡೆಯುವ ಮೂಲಕ ಮೆಚ್ಚುಗೆಗೆ ಪಾತ್ರರಾಗಿದ್ದಾರೆ.