ಪ್ಯಾರಿಸ್: ಇತ್ತೀಚೆಗಷ್ಟೇ ಇಟಲಿ ಪ್ರಧಾನಿ ಜಾರ್ಜಿಯಾ ಮೆಲೋನಿ (Giorgia Meloni) ಅವರಿಗೆ ಪ್ರಧಾನಿ ಮೋದಿ ‘ಮೆಲೋಡಿʼ ಚಾಕೊಲೇಟ್ (Melody Chocolate) ಗಿಫ್ಟ್ ಕೊಟ್ಟ ವಿಡಿಯೋ ಸೋಷಿಯಲ್ ಮೀಡಿಯಾದಲ್ಲಿ ಭಾರೀ ಸದ್ದು ಮಾಡಿತ್ತು. ಇದೀಗ ಜಾಗತಿಕ ನಾಯಕರು ಮತ್ತೊಮ್ಮೆ ಒಂದೇ ವೇದಿಕೆಯಲ್ಲಿ ಕಾಣಿಸಿಕೊಂಡಿದ್ದಾರೆ.
Modiji and meloni 😍 pic.twitter.com/6iWmtkCIUN
— Jash (@jeetcasm) June 16, 2026
ಫ್ರಾನ್ಸ್‌ನ ಏವಿಯನ್-ಲೆ-ಬೈನ್ಸ್‌ನಲ್ಲಿ (France’s Evian-les-Bains) ನಡೆಯುತ್ತಿರುವ ಜಿ7 ಶೃಂಗಸಭೆಯಲ್ಲಿ ಪ್ರಧಾನಿ ಮೋದಿ ಹಾಗೂ ಜಾರ್ಜಿಯಾ ಮೆಲೋನಿ ಭೇಟಿಯಾಗಿ ಮಾತುಕತೆ ನಡೆಸಿದ್ದಾರೆ. ಇದೇ ವೇಳೆ ಮೆಲೋನಿ ಅವರು ʻನಾವು ಇನ್‌ಸ್ಟಾಗ್ರಾಮ್‌ನಲ್ಲಿ ಫೇಮಸ್ ಕಪಲ್ʼ ಅಂತ ಹೇಳಿದ್ದಾರೆ. ಅದಕ್ಕೆ ಮೋದಿ ನಗುತ್ತಾ ಪ್ರತಿಕ್ರಿಯಿಸಿರುವ ವಿಡಿಯೋ ʻಮೆಲೋಡಿ ಬಝ್ʼ ಎಂದು ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದೆ.
ಅಮೆರಿಕ – ಇರಾನ್ ನಡುವಿನ ಮಹತ್ವದ ಒಪ್ಪಂದ ಸ್ವಾಗತಿಸಲು ಫ್ರಾನ್ಸ್‌ನ ಎವಿಯನ್-ಲೆಸ್-ಬೇನ್ಸ್‌ನಲ್ಲಿ 7 ರಾಷ್ಟ್ರಗಳ ಒಕ್ಕೂಟ (ಜಿ7) ನಾಯಕರು ಒಂದೆಡೆ ಸೇರಿದ್ದಾರೆ. ಈ ಮಧ್ಯೆ ಮೆಲೋನಿ – ಮೋದಿ (Narendra Modi) ನಡುವಿನ ಸಂಕ್ಷಿಪ್ತ ಮಾತುಕತೆ ಸಖತ್ ವೈರಲ್ ಆಗಿದೆ.

ಜಿ-7 ನಾಯಕರೊಂದಿಗೆ ಫೋಟೋ ಸೆಷನ್‌ಗೆ ನಿಲ್ಲಲು ಬಂದ ವೇಳೆ, ಪ್ರಧಾನಿ ಮೋದಿ – ಮೆಲೋನಿ ಮುಖಾಮುಖಿಯಾಗಿ ಪರಸ್ಪರ ಶುಭಾಶಯ ಕೋರಿದರು. ಮೋದಿ ಸೋಷಿಯಲ್ ಮೀಡಿಯಾದಲ್ಲಿ ತಮ್ಮ ಜನಪ್ರಿಯತೆ ಬಗ್ಗೆ ಮೆಲೋನಿಗೆ ತಿಳಿಸುತ್ತಿದ್ರು. ಇದಕ್ಕೆ ಪ್ರತಿಕ್ರಿಯಿಸಿದ ಮೆಲೋನಿ, ʻಹೌದು. ನಾವು ಇನ್‌ಸ್ಟಾಗ್ರಾಮ್‌ನಲ್ಲಿ ಫೇಮಸ್ ಕಪಲ್ʼ ಎಂದು ಹಾಸ್ಯ ಮಾಡಿದರು.
ರೋಮ್ ಪ್ರವಾಸದ ವೇಳೆ ʻಮೆಲೋಡಿʼ ಚಾಕೊಲೇಟ್ ಗಿಫ್ಟ್ ಕೊಟ್ಟು ಸುದ್ದಿಯಾಗಿದ್ದ 1 ತಿಂಗಳ ಬಳಿಕ ಈ ಘಟನೆ ಸಂಭವಿಸಿದೆ.
16 ತಿಂಗಳ ಬಳಿಕ ಮೋದಿ- ಟ್ರಂಪ್ ಮುಖಾಮುಖಿ
ಇದಕ್ಕೂ ಮುನ್ನ ಫ್ರಾನ್ಸ್‌ನ ಏವಿಯನ್-ಲೆ-ಬೈನ್ಸ್‌ನಲ್ಲಿ ನಡೆಯುತ್ತಿರುವ ಜಿ7 ಶೃಂಗಸಭೆಯಲ್ಲಿ ಭಾರತ ಪ್ರಧಾನಿ ನರೇಂದ್ರ ಮೋದಿ ಮತ್ತು ಅಮೆರಿಕದ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಭೇಟಿಯಾಗಿ, ಪರಸ್ಪರ ಕುಶಲೋಪರಿ ವಿಚಾರಿಸಿದರು. 16 ತಿಂಗಳ ವಿರಾಮದ ಬಳಿಕ ಉಭಯ ನಾಯಕರ ನೇರ ಮುಖಾಮುಖಿ ಇದಾಗಿದೆ. ಶೃಂಗಸಭೆಯ ಪ್ರಮುಖ ಅಧಿವೇಶನದಲ್ಲಿ ಟ್ರಂಪ್ ಅವರ ಪಕ್ಕದಲ್ಲೇ ಆಸೀನರಾಗಿದ್ದ ಪ್ರಧಾನಿ ಮೋದಿ ಅವರು, ಪ್ರಸ್ತುತ ಜಗತ್ತು ಎದುರಿಸುತ್ತಿರುವ ಅತಿ ದೊಡ್ಡ ಸವಾಲುಗಳ ಕುರಿತು ಅತ್ಯಂತ ಮಾರ್ಮಿಕ ಸಂದೇಶ ನೀಡಿದ್ದು ವಿಶೇಷವಾಗಿತ್ತು.
