ಬೆಂಗಳೂರು: ರಾಜ್ಯದಲ್ಲಿ ಕೊರೊನಾ ಮೂರನೇ ಅಲೆ ವ್ಯಾಪಕವಾಗಿ ಹರಡುತ್ತಿದ್ದು, ನಿಯಂತ್ರಣಕ್ಕಾಗಿ ವೀಕೆಂಡ್ ಕರ್ಫ್ಯೂ ಜಾರಿಗೊಳಿಸಲಾಗಿದೆ. ಅನಗತ್ಯವಾಗಿ ಜನರು ಹೊರಗಡೆ ಓಡಾಡದಂತೆ ಟಫ್ ರೂಲ್ಸ್ ವಿಧಿಸಿ ಎಲ್ಲಾ ಕಡೆ ಪೊಲೀಸ್ ಕಣ್ಗಾವಲಿಸಿರಿದೆ. ಆದರೂ ಜನ ನಿಯಮ ಉಲ್ಲಂಘಿಸಿ ಹೊರಗಡೆ ಓಡಾಡುತ್ತಿರುವ ಚಿತ್ರಣಗಳು ಕಂಡುಬಂದಿವೆ. ಕೆಲವೆಡೆ ನಿಯಮ ಉಲ್ಲಂಘಿಸಿದವರಿಗೆ ಪೊಲೀಸರು ಕ್ಲಾಸ್ ತೆಗೆದುಕೊಂಡರೆ, ಇನ್ನೂ ಕೆಲವೆಡೆ ಶಿಸ್ತು ಕ್ರಮ ಜರುಗಿಸಿದ್ದಾರೆ.
Advertisement
ಕೋವಿಡ್ ನಿಯಮ ಉಲ್ಲಂಘನೆಗೆ ಸಾಕ್ಷಿ ಎಂಬಂತೆ ನಗರದಲ್ಲಿ ವೀಕೆಂಡ್ ಕರ್ಫ್ಯೂ ದಿನವಾದ ಶನಿವಾರ ಘಟನೆಯೊಂದು ನಡೆದಿದೆ. ನೆಂಟರ ಮನೆಗೆ ಹೋಗಲು ಒಂದೇ ಆಟೋದಲ್ಲಿ ಐವರು ಮಹಿಳೆಯರು ಪ್ರಯಾಣ ಬೆಳೆಸಿದ್ದರು. ವಾಹನ ತಪಾಸಣೆ ವೇಳೆ ಇದನ್ನು ಗಮನಿಸಿದ ಪೊಲೀಸರು, ಆಟೋ ಚಾಲಕನಿಗೆ ಫುಲ್ ಕ್ಲಾಸ್ ತೆಗೆದುಕೊಂಡರು. ಇದನ್ನೂ ಓದಿ: ಕೆಲಸಕ್ಕಿದ್ದ ಅಂಗಡಿಯಲ್ಲೇ 30 ಲಕ್ಷ ದೋಚಿದ ಖತರ್ನಾಕ್ – ಮಾಲೀಕನಿಗೆ ಪಂಗನಾಮ
Advertisement
ಕೆಆರ್ ಮಾರ್ಕೆಟ್‌ನಲ್ಲಿ ಆಟೋವನ್ನು ತಡೆದ ಪೊಲೀಸರು, ವೀಕೆಂಡ್ ಕರ್ಫ್ಯೂ ಇದೆ ಗೊತ್ತಿಲ್ವ ಎಂದು ಪ್ರಶ್ನಿಸಿದ್ದಾರೆ. ಅದಕ್ಕೆ ಆಟೋದಲ್ಲಿದ್ದ ಮಹಿಳೆಯರು, ಇದೊಂದು ಬಾರಿ ಬಿಟ್ಟು ಬಿಡಿ ಸರ್, ನಾಳೆಯಿಂದ ಬರಲ್ಲ ಎಂದು ಸಬೂಬು ಹೇಳಿದ್ದಾರೆ. ಕೋವಿಡ್ ನಿಯಮ ಉಲ್ಲಂಘಿಸಿದ ಕಾರಣ ಪೊಲೀಸರು ಆಟೋವನ್ನು ವಶಕ್ಕೆ ಪಡೆದಿದ್ದಾರೆ. ನಂತರ ಎಲ್ಲರಿಗೂ ಕೊರೊನಾ ಪರೀಕ್ಷೆ ಮಾಡಿಸಿದ್ದಾರೆ.
Advertisement
Advertisement
ರಾಜ್ಯದಲ್ಲಿ ಕೊರೊನಾ ಪ್ರಕರಣಗಳು ದಿನೇ ದಿನೆ ಏರಿಕೆ ಕಾಣುತ್ತಿವೆ. ಇದರಿಂದಾಗಿ ರಾಜ್ಯ ಸರ್ಕಾರ ಕಠಿಣ ನಿಯಮಗಳನ್ನು ಜಾರಿಗೊಳಿಸಲು ಮುಂದಾಗಿದೆ. ಈ ಹಿನ್ನೆಲೆಯಲ್ಲಿ ರಾಜ್ಯಾದ್ಯಂತ ವೀಕೆಂಡ್ ಕರ್ಫ್ಯೂ ಜಾರಿಗೊಳಿಸಿದೆ. ಇದನ್ನೂ ಓದಿ: ಕಾರಿಗೆ ಕ್ಯಾಂಟರ್ ಡಿಕ್ಕಿ – ಅಯ್ಯಪ್ಪ ಭಕ್ತರು ಸ್ಥಳದಲ್ಲೇ ಸಾವು