1 ತಿಂಗಳ ಹಿಂದೆ ಪಿಯೂಷ್ ಗೋಯಲ್ ಹೇಳಿದ್ದ ಭವಿಷ್ಯ ನಿಜವಾಯ್ತು – ವೀಡಿಯೋ ವೈರಲ್

Public TV
2 Min Read
Piyush Goyal

ಗಾಂಧಿನಗರ: ತೀವ್ರ ಕುತೂಹಲ ಕೆರಳಿಸಿದ್ದ ಗುಜರಾತ್ ಚುನಾವಣೆಯಲ್ಲಿ (Gujarat Election) ಬಿಜೆಪಿ (BJP) 150ಕ್ಕೂ ಹೆಚ್ಚು ಸ್ಥಾನಗಳನ್ನು ತನ್ನ ತೆಕ್ಕೆಗೆ ತೆಗೆದುಕೊಂಡಿದ್ದು, ಪ್ರತಿಪಕ್ಷಗಳನ್ನ ಧೂಳೀಪಟ ಮಾಡಿದೆ.

ELECTION RESULT

ಈ ನಡುವೆ ಗುಜರಾತ್ ವಿಧಾನಸಭಾ ಚುನಾವಣೆಗೂ ಮುನ್ನ ಬಿಜೆಪಿ ಗೆಲುವಿನ ಭವಿಷ್ಯ ನುಡಿದಿದ್ದ ಕೇಂದ್ರ ಸಚಿವ ಪಿಯೂಷ್ ಗೋಯಲ್ (Piyush Goyal) ಅವರ ವೀಡಿಯೋ ಇದೀಗ ಸಾಮಾಜಿಕ ಜಾಲತಾಣದಲ್ಲಿ (Social Media) ಸದ್ದು ಮಾಡುತ್ತಿದೆ. ಇದನ್ನೂ ಓದಿ: ಮೋರ್ಬಿ ಸೇತುವೆ ದುರಂತದ ವೇಳೆ ರಕ್ಷಣೆ ಮಾಡಿದ್ದ ಕಾಂತಿಲಾಲ್‌ಗೆ ಭರ್ಜರಿ ಜಯ

ಖಾಸಗಿ ವಾಹಿನಿಯ ಕಾರ್ಯಕ್ರಮವೊಂದರಲ್ಲಿ ಪಿಯೂಷ್ ಗೋಯಲ್ ಅವರು, ಗುಜರಾತ್‌ನಲ್ಲಿ ಬಿಜೆಪಿಗೆ (BJP) ಯಾವುದೇ ಪ್ರತಿ ಸ್ಪರ್ಧಿಯಿಲ್ಲ. ನಾವು ಈ ಬಾರಿ ಗುಜರಾತ್ ಅನ್ನು ದಾಖಲೆಯ ಸ್ಥಾನಗಳೊಂದಿಗೆ ಗೆಲ್ಲೋದು ಖಚಿತ ಎಂದು ವಿಶ್ವಾಸ ವ್ಯಕ್ತಪಡಿಸಿದ್ದರು. ಇದನ್ನೂ ಓದಿ: ಆಪ್‌, ಓವೈಸಿ ಪಕ್ಷ ಕೊಟ್ಟ ಹೊಡೆತಕ್ಕೆ ಕಾಂಗ್ರೆಸ್‌ ಪಲ್ಟಿ

Gujarat Elections

ಗುಜರಾತ್ ಚುನಾವಣಾ ಇತಿಹಾಸದಲ್ಲಿ ಕಾಂಗ್ರೆಸ್ 149 ಸ್ಥಾನಗಳನ್ನು ಗೆದ್ದಿರುವುದು ಇದುವೆರಗಿನ ದಾಖಲೆ. ಆದರೆ ಬಿಜೆಪಿ ಈ ಬಾರಿ 150ಕ್ಕಿಂತಲೂ ಹೆಚ್ಚಿನ ಸ್ಥಾನಗಳನ್ನ ಗೆದ್ದು ದಾಖಲೆ ಬರೆಯುತ್ತೆ. ನಾನು ಅಹಂಕಾರದಿಂದ ಈ ಮಾತನ್ನು ಹೇಳುತ್ತಿಲ್ಲ. ಗುಜರಾತ್ ಒಳಾಂಗಣ ಪ್ರವೇಶಿಸಿದ್ದೇನೆ. ಅಲ್ಲಿನ ಜನರ ಮನಸ್ಥಿತಿಯು ಮೋದಿ (Narendra Modi) ಅವರಿಗೆ ಸಂಪೂರ್ಣ ಮೆಚ್ಚುಗೆಯಾಗಿದೆ. ಬಿಜೆಪಿ ಅಧಿಕಾರದಲ್ಲಿ ಮುಂದುವರಿಯೋದನ್ನು ಅಲ್ಲಿನ ಜನರೂ ಎದುರು ನೋಡ್ತಿದ್ದಾರೆ ಎಂದು ಹೇಳಿದ್ದರು.

ELECTION RESULT 3

ಇದೀಗ ಕಾರ್ಯಕ್ರಮದಲ್ಲಿ ಗೋಯಲ್ ಮಾತನಾಡಿದ್ದ ವೀಡಿಯೋವನ್ನು ಟ್ವೀಟ್ ಮೂಲಕ ಹಂಚಿಕೊಂಡಿದ್ದು, ಪ್ರಧಾನಿ ಮೋದಿ ಅವರಿಗೆ ಜನ ಮತ ಹಾಕಿದ್ದಾರೆ ಎಂದು ಬರೆದುಕೊಂಡಿದ್ದಾರೆ.

ಈ ವೀಡಿಯೋ ಜಾಲತಾಣದಲ್ಲಿ ಭಾರೀ ಸದ್ದು ಮಾಡುತ್ತಿದೆ. ಸುಮಾರ 1 ಲಕ್ಷಕ್ಕೂ ಅಧಿಕ ಮಂದಿ ವೀಡಿಯೋ ವೀಕ್ಷಣೆ ಮಾಡಿದ್ದಾರೆ. ಸಾವಿರಾರು ಮಂದಿ ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ.

Live Tv
[brid partner=56869869 player=32851 video=960834 autoplay=true]

Share This Article
Leave a Comment

Leave a Reply

Your email address will not be published. Required fields are marked *