ಬೆಂಗಳೂರು: ಸಾರಿಗೆ ಇಲಾಖೆ ನೌಕರರಿಗೆ ಯಾವುದೇ ಸಮಸ್ಯೆ ಆಗದಂತೆ ಸರಿಯಾದ ಸಮಯಕ್ಕೆ ಸಂಬಳ ಕೊಡುತ್ತೇವೆ ಎಂದು ಸಾರಿಗೆ ಸಚಿವ ರಾಮಲಿಂಗಾರೆಡ್ಡಿ (Ramalinga Reddy) ಸ್ಪಷ್ಟಪಡಿಸಿದ್ದಾರೆ.
ಸರ್ಕಾರ ಹಣ ಕೊಡದೇ ಹೋದರೆ ಮುಂದಿನ ತಿಂಗಳು ಸಾರಿಗೆ ಇಲಾಖೆಯಲ್ಲಿ ಸಂಬಳ ಕೊಡಲು ಹಣವಿಲ್ಲ ಎಂಬ ವಿಚಾರಕ್ಕೆ ವಿಧಾನಸೌಧದಲ್ಲಿ ಪ್ರತಿಕ್ರಿಯೆ ನೀಡಿದ ಅವರು, ನಾವು ಸಂಬಳ ಕೊಡದೇ ಇದ್ದಾಗ ಕೊಡೊಲ್ಲ ಅಂತ ಹೇಳಿ. ನಾವು ಸರಿಯಾದ ಸಮಯಕ್ಕೆ ಸಂಬಳ ಕೊಡುತ್ತೇವೆ ಎಂದು ತಿಳಿಸಿದರು.
Advertisement
Advertisement
ಸರ್ಕಾರದಿಂದ ನಮಗೆ ಹಣ ಕೊಡುತ್ತಾರೆ. ನಮ್ಮ ಸಂಪನ್ಮೂಲಗಳಿಂದಲೂ ಹಣ ಸಂಗ್ರಹ ಆಗುತ್ತಿದೆ. 4 ನಿಗಮಗಳು ಉತ್ತಮವಾಗಿ ಕೆಲಸ ಮಾಡುತ್ತಿವೆ. ಸಂಬಳ ಕೊಡಲ್ಲ ಎಂದು ಊಹೆ ಮಾಡಿಕೊಂಡು ಹೇಳಲು ಆಗಲ್ಲ. ಸರಿಯಾದ ಸಮಯಕ್ಕೆ ಸಂಬಳ ಕೊಡುತ್ತೇವೆ ಎಂದು ಸ್ಪಷ್ಟನೆ ನೀಡಿದರು. ಇದನ್ನೂ ಓದಿ: ದುಬಾರಿಯಾಯ್ತು ಚಿಕನ್- ಒಂದು ಮೊಟ್ಟೆಗೆ ಬರೋಬ್ಬರಿ 7 ರೂ.
Advertisement
Advertisement
ಶಕ್ತಿ ಯೋಜನೆಯಿಂದ ನಿಗಮಕ್ಕೆ ಲಾಭ ಆಗುತ್ತಿದೆಯಾ ಎಂಬ ವಿಚಾರಕ್ಕೆ ಪ್ರತಿಕ್ರಿಯೆ ನೀಡಿದ ಅವರು, ಇಲ್ಲಿ ಲಾಭ ನಷ್ಟದ ಪ್ರಶ್ನೆ ಬರಲ್ಲ. ಮಹಿಳೆಯರು ಉಚಿತ ಪ್ರಯಾಣ ಮಾಡುತ್ತಾರೆ ಎಂಬುದೇ ಮುಖ್ಯ. ಸಾರಿಗೆ ಸಂಸ್ಥೆಗೆ ಯಾವುದೇ ನಷ್ಟ ಇಲ್ಲ. ಸರ್ಕಾರ ಹಣ ಕೊಡುತ್ತದೆ. ನಮಗೆ ಯಾವುದೇ ಲಾಸ್ ಇಲ್ಲ ಎಂದು ತಿಳಿಸಿದರು. ಇದನ್ನೂ ಓದಿ: ಇನ್ಮುಂದೆ ಖಾಸಗಿ ಶಾಲಾ ಶಿಕ್ಷಕರಿಗೂ ರಾಷ್ಟ್ರೀಯ ಪ್ರಶಸ್ತಿ ನೀಡಲು ಕೇಂದ್ರ ನಿರ್ಧಾರ