ನವದೆಹಲಿ: ನಾಗರಿಕ ವಿಮಾನಯಾನ ಮಹಾನಿರ್ದೇಶನಾಲಯದ(ಡಿಜಿಸಿಎ) ಸೂಚನೆಯನ್ನು ನಾವು ಸ್ವಾಗತಿಸುತ್ತೇವೆ. ಇಂತಹ ಆತಂಕದ ಸಮಯದಲ್ಲಿ ನಾವು ಅವರೊಂದಿಗೆ ಕೆಲಸ ಮಾಡಲು ಸಂತೋಷಪಡುತ್ತೇವೆ ಎಂದು ಸ್ಪೈಸ್‌ಜೆಟ್ ಅಧ್ಯಕ್ಷ ಅಜಯ್ ಸಿಂಗ್ ತಿಳಿಸಿದ್ದಾರೆ.
ಕಳೆದ 18 ದಿನಗಳಲ್ಲಿ ಸ್ಪೈಸ್‌ಜೆಟ್ ಸಂಸ್ಥೆಯ ವಿಮಾನಗಳಲ್ಲಿ ನಿರಂತರವಾಗಿ ತಾಂತ್ರಿಕ ದೋಷಗಳು ಕಂಡುಬಂದಿದ್ದ ಹಿನ್ನೆಲೆ ಡಿಜಿಸಿಎ ಕಾರಣ ಕೇಳಿ ಶೋಕಾಸ್ ನೋಟಿಸ್ ನೀಡಿತ್ತು.
Advertisement
ಈ ಬಗ್ಗೆ ತಿಳಿಸಿದ ಅಜಯ್ ಸಿಂಗ್, ದೇಶದಲ್ಲಿ ಮಾತ್ರವಲ್ಲದೇ ಪ್ರಪಂಚದಾದ್ಯಂತ ನಾವು ಅತ್ಯುತ್ತಮ ಸುರಕ್ಷತಾ ದಾಖಲೆಗಳನ್ನು ಹೊಂದಿದ್ದೇವೆ. ನಾವು ಪ್ರತಿ ಸಂದರ್ಭದಲ್ಲೂ ಸುರಕ್ಷತೆಗೆ ಅತ್ಯಂತ ಪ್ರಮುಖ ಆದ್ಯತೆ ನೀಡುತ್ತೇವೆ ಹಾಗೂ ಈ ದಾಖಲೆಯನ್ನು ಉಳಿಸಿಕೊಂಡು ಹೋಗುತ್ತೇವೆ ಎಂದು ತಿಳಿಸಿದ್ದಾರೆ. ಇದನ್ನೂ ಓದಿ: ಕನ್ಹಯ್ಯ ಲಾಲ್ ಪುತ್ರರಿಗೆ ಸರ್ಕಾರಿ ನೌಕರಿ – ಗೆಹ್ಲೋಟ್ ನಿರ್ಧಾರ
Advertisement
Advertisement
ಭಾರತೀಯ ವಿಮಾನಯಾನದಲ್ಲಿ ಪ್ರತಿ ದಿನ ಸರಾಸರಿ 30 ರಷ್ಟು ತಾಂತ್ರಿಕ ದೋಷಗಳು ಕಂಡುಬರುತ್ತವೆ. ನಾವು ಇಂತಹ ಘಟನೆಗಳನ್ನು ಮರುಗಳಿಸದಂತೆ ಎಷ್ಟೇ ಪ್ರಯತ್ನ ಪಟ್ಟರೂ ಅವು ಮತ್ತೆ ಮತ್ತೆ ಸಂಭವಿಸುತ್ತದೆ. ಆದರೆ ಅವು ಅಷ್ಟೊಂದು ಗಂಭೀರವಾಗಿಲ್ಲ. ಈ ಬಗ್ಗೆ ಚಿಂತಿಸುವ ಅಗತ್ಯವಿಲ್ಲ ಎಂದಿದ್ದಾರೆ. ಇದನ್ನೂ ಓದಿ: ಬೂಸ್ಟರ್ ಡೋಸ್ ನಡುವಿನ ಅಂತರ 9 ರಿಂದ 6 ತಿಂಗಳಿಗೆ ಇಳಿಕೆ
Advertisement
ಮಂಗಳವಾರ ದೆಹಲಿಯಿಂದ ದುಬೈಗೆ ಪ್ರಯಾಣಿಸುತ್ತಿದ್ದ ವಿಮಾನ ಅಸಮರ್ಪಕ ಇಂಧನದ ಸೂಚಕದ ಕಾರಣ ಕರಾಚಿಗೆ ತಿರುಗಿಸಲಾಯಿತು. ವಿಮಾನದ ಎಂಜಿನ್ ಹೆಚ್ಚು ಇಂಧನವನ್ನು ಬಳಸುತ್ತಿದೆ ಎಂದು ಭಾವಿಸಿ, ಹತ್ತಿರದ ವಿಮಾನ ನಿಲ್ದಾಣದಲ್ಲಿ ಇಳಿಸಲಾಗಿತ್ತು. ಇದು ತುರ್ತು ಲ್ಯಾಂಡಿಂಗ್ ಆಗಿರಲಿಲ್ಲ. ಪ್ರಯಾಣಿಕರ ಸುರಕ್ಷತೆ ನಮಗೆ ಅತ್ಯಂತ ಮುಖ್ಯ. ಕರಾಚಿಯಲ್ಲಿ ಇಳಿಸಿದ ನಿರ್ಧಾರ ಸರಿಯಾಗಿಯೇ ಇತ್ತು. ಈ ಬಗ್ಗೆ ನಾವೇ ಪರಿಶೀಲನೆ ನಡೆಸಿದ್ದೇವೆ. ಇದು ಗಂಭೀರ ಘಟನೆಯಲ್ಲ ಎಂದು ತಿಳಿಸಿದ್ದಾರೆ.