LatestLeading NewsMain PostNational

ಕನ್ಹಯ್ಯ ಲಾಲ್ ಪುತ್ರರಿಗೆ ಸರ್ಕಾರಿ ನೌಕರಿ – ಗೆಹ್ಲೋಟ್ ನಿರ್ಧಾರ

Advertisements

ಜೈಪುರ: ಇಸ್ಲಾಂ ಮತಾಂಧರ ಕೈಯಲ್ಲಿ ಭೀಕರವಾಗಿ ಹತ್ಯೆಯಾದ ಉದಯಪುರದ ಟೈಲರ್ ಕನ್ಹಯ್ಯ ಲಾಲ್ ಅವರ ಪುತ್ರರಿಗೆ ಸರ್ಕಾರಿ ಕೆಲಸ ನೀಡಲು ರಾಜಸ್ಥಾನ ಕ್ಯಾಬಿನೆಟ್ ತೀರ್ಮಾನಿಸಿದೆ.

ಜೂನ್ 28ರಂದು ಇಬ್ಬರು ಭಯೋತ್ಪಾದಕರಿಂದ ಹತ್ಯೆಯಾದ ಕನ್ಹಯ್ಯ ಲಾಲ್ ತೇಲಿ ಅವರ ಪುತ್ರರಾದ ಯಶ್ ತೇಲಿ ಹಾಗೂ ತರುಣ್ ತೇಲಿ ಅವರನ್ನು ಸರ್ಕಾರಿ ಕೆಲಸಕ್ಕೆ ನೇಮಿಸಲು ಸಂಪುಟ ನಿರ್ಧರಿಸಿದೆ ಎಂದು ಗೆಹ್ಲೋಟ್ ಟ್ವೀಟ್‌ನಲ್ಲಿ ತಿಳಿಸಿದ್ದಾರೆ.

ಈ ನೇಮಕಾತಿಯನ್ನು 2008 ಹಾಗೂ 2009ರ ರಾಜಸ್ಥಾನ ಅಧೀನ ಕಚೇರಿ ಕ್ಲರ್ಕ್ ಸೇವಾ ನಿಯಮಗಳ ಅಡಿಯಲ್ಲಿ ಮಾಡಲಾಗಿದೆ ಎಂದು ಗೆಹ್ಲೋಟ್ ತಿಳಿಸಿದ್ದಾರೆ. ಇದನ್ನೂ ಓದಿ: ನಡೆದುಕೊಂಡು ಹೋಗ್ತಿದ್ದಾಗ ಚೂರಿ ಇರಿತ – ಕೆರೂರು ಪಟ್ಟಣದಲ್ಲಿ ಗುಂಪು ಘರ್ಷಣೆ, 144 ಸೆಕ್ಷನ್ ಜಾರಿ

ಕನ್ಹಯ್ಯ ಲಾಲ್ ತಮ್ಮ ಕುಟುಂಬದಲ್ಲಿ ತಾವೊಬ್ಬರೇ ದುಡಿಯುತ್ತಿದ್ದ ವ್ಯಕ್ತಿಯಾಗಿದ್ದು, ತಮ್ಮಿಬ್ಬರು ಮಕ್ಕಳೂ ವಿದ್ಯಾಭ್ಯಾಸ ಮಾಡುತ್ತಿದ್ದರು. ಇದೀಗ ಕುಟುಂಬ ತನ್ನ ಆಸರೆಯನ್ನು ಕಳೆದುಕೊಂಡಿದ್ದು, ಸರ್ಕಾರ ಕನ್ಹಯ್ಯ ಕುಟುಂಬದ ಕಂಬನಿಗೆ ನೆರವು ನೀಡಲು ಮುಂದಾಗಿದೆ. ಕನ್ಹಯ್ಯ ಮಕ್ಕಳಿಗೆ ಸರ್ಕಾರಿ ಕೆಲಸಗಳನ್ನು ಒದಗಿಸಲು ಮುಂದಾಗುವ ಮೂಲಕ ಸಹಾಯ ಮಾಡಿದೆ.

ಪ್ರವಾದಿ ಮೊಹಮ್ಮದ್ ಬಗ್ಗೆ ಅವಹೇಳನಕಾರಿ ಹೇಳಿಕೆ ನೀಡಿದ ಮಾಜಿ ಬಿಜೆಪಿ ವಕ್ತಾರೆ ನೂಪುರ್ ಶರ್ಮಾ ಅವರನ್ನು ಬೆಂಬಲಿಸಿ ಕನ್ಹಯ್ಯ ಲಾಲ್ ಪೋಸ್ಟ್ ಮಾಡಿದ್ದಕ್ಕೆ ಧರ್ಮಾಂಧರು ಕನ್ಹಯ್ಯ ಅವರ ಶಿರಚ್ಛೇದನ ನಡೆಸಿ ಭೀಕರವಾಗಿ ಹತ್ಯೆಗೈದಿದ್ದರು. ಜೊತೆಗೆ ಹತ್ಯೆಯ ವೀಡಿಯೋವನ್ನು ಮಾಡಿ ಪ್ರಧಾನ ಮಂತ್ರಿ ನರೇಂದ್ರ ಮೋದಿಯವರ ಹತ್ಯೆಯನ್ನೂ ಇದೇ ರೀತಿ ನಡೆಸುವುದಾಗಿ ಬೆದರಿಕೆ ಹಾಕಿದ್ದರು. ಇದನ್ನೂ ಓದಿ: ಬೂಸ್ಟರ್ ಡೋಸ್ ನಡುವಿನ ಅಂತರ 9 ರಿಂದ 6 ತಿಂಗಳಿಗೆ ಇಳಿಕೆ

ಘಟನೆಯ ವೀಡಿಯೋ ಸಾಮಾಜಿಕ ಮಾಧ್ಯಮಗಳಲ್ಲಿ ಹರಿದಾಡಲು ಪ್ರಾರಂಭವಾಗುತ್ತಿದ್ದಂತೆ ದೇಶಾದ್ಯಂತ ಈ ಬಗ್ಗೆ ತೀವ್ರ ಆಕ್ರೋಶ ವ್ಯಕ್ತವಾಗಿದ್ದು, ಕೆಲವೇ ಗಂಟೆಗಳಲ್ಲಿ ಆರೋಪಿಗಳನ್ನು ಪೊಲೀಸರು ಬಂಧಿಸಿದ್ದರು.

Live Tv

Leave a Reply

Your email address will not be published.

Back to top button