ಚಾಮರಾಜನಗರ: ನಮಗೆ ಸಿದ್ದರಾಮಯ್ಯ ಅಂಕಲ್ ಬಟ್ಟೆಗಳನ್ನು ಕೊಟ್ಟಿದ್ದಾರಲ್ಲ ಅದು ನಮಗೆ ಸರಿಯಾಗ್ತಿಲ್ಲ. ಟೈಲರ್‍ಗೆ ಕೊಟ್ರೆ ಇದು ಸಾಲಲ್ಲ ಅಂತಾರೆ. ಹೊರಗಡೆ ಹಾಕಿಕೊಂಡು ಹೋಗೋದಕ್ಕೆ ನಮಗೆ ಮುಜುಗರ ಆಗುತ್ತೆ. ಅವರು ನೀಡಿರುವ ಬಟ್ಟೆ ಸೊಳ್ಳೆ ಪರದೆ ಹಾಗೆ ಇದೆ. ಅದನ್ನು ಹಾಕಿಕೊಂಡು ಓಡಾಡಲು ನಮಗೆ ಆಗಲ್ಲ. ಹೀಗೆ ಹೇಳ್ತಾ ಇರೋದು ಸರ್ಕಾರಿ ಶಾಲೆಯ ವಿದ್ಯಾರ್ಥಿನಿ.
Advertisement
ಹೌದು. ಚಾಮರಾಜನಗರ ಜಿಲ್ಲೆಯ ಕೊಳ್ಳೆಗಾಲ ತಾಲೂಕು ವ್ಯಾಪ್ತಿಯಲ್ಲಿನ ಸರ್ಕಾರಿ ಶಾಲೆಗಳಿಗೆ ವಿತರಣೆ ಮಾಡಿರುವ ಸಮವಸ್ತ್ರಗಳ ಗುಣಮಟ್ಟವನ್ನು ನೋಡಿ ಇಲ್ಲಿನ ಸರ್ಕಾರಿ ಶಾಲೆಯ ಮಕ್ಕಳು ಈ ರೀತಿಯ ಮಾತುಗಳನ್ನು ಹೇಳುತ್ತಾ ಇದ್ದಾರೆ. ಶೈಕ್ಷಣಿಕ ವರ್ಷದಲ್ಲಿ ನೀಡಿರುವ ಶಾಲೆಯ ಸಮವಸ್ತ್ರ ಕಳಪೆ ಗುಣಮಟ್ಟದ್ದಿಂದ ಕೂಡಿದ್ದು, ಸೊಳ್ಳೆ ಪರದೆ ರೀತಿಯಲ್ಲಿ ಇವೆ ಎಂದಿದ್ದಾರೆ.
Advertisement
Advertisement
ಇದಲ್ಲದೇ ಒಂದು ಮಗುವಿಗೆ ಬಟ್ಟೆ ಹೊಲಿಯಲು ಬೇಕಾಗುವಷ್ಟು ಬಟ್ಟೆಯನ್ನು ಸಹ ನೀಡಿಲ್ಲ. ಇದರಿಂದ ಶಾಲಾ ಮಕ್ಕಳು ಈ ಬಟ್ಟೆ ಪೀಸ್ ಗಳನ್ನು ತೆಗೆದುಕೊಂಡು ಟೈಲರ್ ಬಳಿಗೆ ಹೋದ್ರೆ ಈ ಬಟ್ಟೆ ಹೊಲಿಯಲು ಸಾಧ್ಯವಿಲ್ಲ, ಹೊಲಿದರೂ ತುಂಡವಾಗುತ್ತೆ ಎನ್ನುತ್ತಿದ್ದಾರೆ.
Advertisement
ಇನ್ನೂ ಕೆಲವು ಮಕ್ಕಳು ಬಟ್ಟೆ ಹೊಲಿಸಿದ್ದರು ಸಹ ಅದನ್ನು ಹಾಕಿಕೊಳ್ಳೋಕೆ ಮುಜುಗರ ಪಡುತ್ತಿದ್ದಾರೆ. ಇದಕ್ಕೆ ಕಾರಣ ಬಟ್ಟೆ ಪೀಸ್‍ಗಳು ತೀರಾ ತೆಳುವಾಗಿ ಇರೋದು. ಇದರಿಂದ ಪೋಷಕರು ಕೂಡ ಅಸಮಾಧಾನ ವ್ಯಕ್ತಪಡಿಸಿದ್ದಾರೆ. ನಮಗೆ ಬೇರೆ ಬಟ್ಟೆಗಳನ್ನ ಕೊಡಿ ಎಂದು ವಿದ್ಯಾರ್ಥಿನಿಯರು ಕೇಳಿಕೊಂಡಿದ್ದಾರೆ.
https://www.youtube.com/watch?v=TRveSzpT_BA