ನವದೆಹಲಿ: 22 ರಾಜ್ಯಗಳಲ್ಲಿ ಬಿಸಿನೆಸ್ (Business) ಮಾಡುತ್ತಿದ್ದೇವೆ. ಎಲ್ಲವನ್ನೂ ಬಿಜೆಪಿ (BJP) ಜೊತೆ ಮಾಡುತ್ತಿಲ್ಲ ಎಂದು ಕೈಗಾರಿಕೋದ್ಯಮಿ ಗೌತಮ್ ಅದಾನಿ (Gautam Adani) ತಿಳಿಸಿದ್ದಾರೆ.
ನಾವು ದೇಶದ ಪ್ರತಿ ರಾಜ್ಯದಲ್ಲೂ ಗರಿಷ್ಠ ಹೂಡಿಕೆ ಮಾಡಲು ಬಯಸುತ್ತೇವೆ. ಅದಾನಿ ಗುಂಪು ಇಂದು 22 ರಾಜ್ಯಗಳಲ್ಲಿ ಕಾರ್ಯನಿರ್ವಹಿಸುತ್ತಿರುವುದಕ್ಕೆ ನಿಜವಾಗಿಯೂ ಸಂತೋಷವಾಗಿದೆ. ಈ ಎಲ್ಲಾ ರಾಜ್ಯಗಳು ಬಿಜೆಪಿ ಆಡಳಿತದಲ್ಲಿಲ್ಲ. ಬಿಜೆಪಿಯೇತರ ಪಕ್ಷಗಳು ಆಡಳಿತದಲ್ಲಿರುವ ರಾಜ್ಯಗಳಿಂದ ನಮಗೆ ಯಾವುದೇ ಸಮಸ್ಯೆ ಇಲ್ಲ. ಎಡಪಕ್ಷಗಳ ಆಡಳಿತವಿರುವ ಕೇರಳ, ಮಮತಾ ದೀದಿಯವರ ಪಶ್ಚಿಮ ಬಂಗಾಳ, ನವೀನ್ ಪಟ್ನಾಯಕ್ ಅವರ ಒಡಿಶಾ, ಜಗನ್‌ಮೋಹನ್ ರೆಡ್ಡಿ ಅವರ ಆಂಧ್ರಪ್ರದೇಶ, ಕೆಸಿಆರ್ ರಾಜ್ಯದಲ್ಲಿಯೂ ನಾವು ಕೆಲಸ ಮಾಡುತ್ತಿದ್ದೇವೆ ಎಂದು ಹೇಳಿದ್ದಾರೆ. ಇದನ್ನೂ ಓದಿ: 13 ವರ್ಷಗಳ ಬಳಿಕ ಗಣರಾಜ್ಯೋತ್ಸವ ಪರೇಡ್‍ನಲ್ಲಿ ಕರ್ನಾಟಕದ ಟ್ಯಾಬ್ಲೋಗಿಲ್ಲ ಅವಕಾಶ
Advertisement
Advertisement
ಹೂಡಿಕೆ ನಮ್ಮ ಸಾಮಾನ್ಯ ಕಾರ್ಯಕ್ರಮವಾಗಿದೆ. ಮುಖ್ಯಮಂತ್ರಿ ಅಶೋಕ್ ಗೆಹ್ಲೋಟ್ ಅವರ ಆಹ್ವಾನದ ಮೇರೆಗೆ ನಾನು ರಾಜಸ್ಥಾನ ಹೂಡಿಕೆದಾರರ ಶೃಂಗಸಭೆಗೆ ಹೋಗಿದ್ದೆ. ನಂತರ ರಾಹುಲ್ ಗಾಂಧಿ ಅವರು ಕೂಡ ರಾಜಸ್ಥಾನದಲ್ಲಿ ನಮ್ಮ ಹೂಡಿಕೆಯನ್ನು ಶ್ಲಾಘಿಸಿದ್ದಾರೆ. ರಾಹುಲ್ ಅವರ ನೀತಿಗಳು ಅಭಿವೃದ್ಧಿ ವಿರೋಧಿ ಅಲ್ಲ ಎಂದು ನನಗೆ ತಿಳಿದಿದೆ. ಕಾಂಗ್ರೆಸ್ ಆಡಳಿತದ ರಾಜ್ಯದಲ್ಲಿ 68,000 ಕೋಟಿ ರೂ. ಹೂಡಿಕೆ ಮಾಡಲಾಗಿದೆ ಎಂದು ಮಾತನಾಡಿದ್ದಾರೆ.
Advertisement
Advertisement
ಗುಜರಾತ್ ಸರ್ಕಾರ ಉದ್ಯಮ ಸ್ನೇಹಿಯಾಗಿದೆ. ಹಾಗೆಂದ ಮಾತ್ರಕ್ಕೆ ಅವರು ಅದಾನಿಗೆ ವಿಶೇಷ ಉಪಕಾರ ಮಾಡಿದಂತಲ್ಲ. ಪ್ರಧಾನಿ ಮೋದಿಯವರೊಂದಿಗಿನ ನನ್ನ ಬಾಂಧವ್ಯವನ್ನು ಟೀಕಿಸುವ ಕಾರ್ಯ ಸುಮಾರು 4 ದಶಕಗಳಿಂದ ಪ್ರಾರಂಭವಾಗಿದೆ ಎಂದು ಹೇಳಿದ್ದಾರೆ. ಇದನ್ನೂ ಓದಿ: ಬೆಂಗಳೂರು ವ್ಯಕ್ತಿ ಬಳಿಯಿದ್ದ Caucasian Shepherd ಶ್ವಾನಕ್ಕೆ ಬರೋಬ್ಬರಿ 20 ಕೋಟಿ ಆಫರ್
Live Tv
[brid partner=56869869 player=32851 video=960834 autoplay=true]
Join our Whatsapp group by clicking the below link
https://chat.whatsapp.com/E6YVEDajTzH06LOh77r25k