ಬೆಂಗಳೂರು: ಸತತ 13 ವರ್ಷಗಳಿಂದ ಗಣರಾಜ್ಯೋತ್ಸವ (Republic Day) ಪರೇಡ್‍ನಲ್ಲಿ ರಾಜ್ಯದ ಸಂಸ್ಕೃತಿ ಮತ್ತು ಪರಂಪರೆಯನ್ನು ಸ್ತಬ್ಧಚಿತ್ರದಲ್ಲಿ (Tableau) ಪ್ರದರ್ಶಿಸುತ್ತಿದ್ದ ಕರ್ನಾಟಕವು (Karnataka) ಈ ಬಾರಿ ಅವಕಾಶವನ್ನು ಕಳೆದುಕೊಂಡಿದೆ.
ಸಿರಿಧಾನ್ಯ ರೇಷ್ಮೆ, ನಾರಿಶಕ್ತಿ ಸೇರಿ ನಾಲ್ಕು ವಿಷಯಗಳನ್ನ ಕೊಟ್ಟಿತ್ತು. ಅದರಲ್ಲಿ ನಾರಿಶಕ್ತಿ ಥೀಮ್ ಗೆ ಮೆಚ್ಚುಗೆ ವ್ಯಕ್ತವಾಗಿ ಅವಕಾಶ ಕೊಡುವ ಸಾಧ್ಯತೆ ಇತ್ತು. ಆದರೆ ಕೇಂದ್ರದಿಂದ (Central Government) ರಾಜ್ಯದ ಸ್ತಬ್ದ ಚಿತ್ರಕ್ಕೆ ಅನುಮತಿ ನಿರಾಕರಿಸಲಾಗಿದೆ. ಇದರ ಪರಿಣಾಮವಾಗಿ ಜನವರಿ 26ರಂದು ನವದೆಹಲಿಯ ಕರ್ತವ್ಯ ಪಥದಲ್ಲಿ ನಡೆಯುವ ವರ್ಣರಂಜಿತ ಗಣರಾಜ್ಯೋತ್ಸವ ದಿನದಂದು ಪರೇಡ್‍ನಲ್ಲಿ ಕರ್ನಾಟಕ 13 ವರ್ಷಗಳ ನಂತರ ಪ್ರತಿನಿಧಿಸುತ್ತಿಲ್ಲ. ಆದರೆ ನೆರೆಯ ರಾಜ್ಯ ತಮಿಳುನಾಡು ಮತ್ತು ಕೇರಳಕ್ಕೆ ಈ ಬಾರಿ ಅವಕಾಶ ಕೊಟ್ಟಿದ್ದಾರೆ. ಈ ಬಾರಿ ಗಣರಾಜ್ಯೋತದಲ್ಲಿ ಒಟ್ಟು 13 ರಾಜ್ಯಗಳ ಸ್ತಬ್ಧಚಿತ್ರಗಳಿಗೆ ಅವಕಾಶ ಕೊಡಲಾಗಿದ್ದು ರಾಜ್ಯಕ್ಕೆ ಮಾತ್ರ ಮಣೆ ಹಾಕಿಲ್ಲ.
Advertisement
Advertisement
ತಜ್ಞರ ಸಮಿತಿಯ ಮೊದಲ ಕೆಲವು ಸುತ್ತಿನ ಮೌಲ್ಯಮಾಪನದಲ್ಲಿ ಕರ್ನಾಟಕ ಪ್ರತಿನಿಧಿಸಿದ್ದ ವಿಷಯಾಧಾರಿತ ವಿನ್ಯಾಸ ಹಾಗೂ ಸಂಗೀತವು ಮೆಚ್ಚುಗೆಯನ್ನು ಪಡೆದಿತ್ತು. ಆದರೆ ಕೊನೆಯ ಸುತ್ತಿನಲ್ಲಿ ಕರ್ನಾಟಕದ ಸ್ತಬ್ಧಚಿತ್ರನ್ನು ತಿರಸ್ಕರಿಸಲಾಗಿದೆ. ಅಲ್ಲದೇ ಇತರ ರಾಜ್ಯಗಳು ತಮ್ಮನ್ನು ನಿರ್ಲಕ್ಷಿಸುತ್ತಿದ್ದಾರೆ. ಹಲವು ವರ್ಷಗಳಿಂದ ಕೆಲವೇ ರಾಜ್ಯಗಳಿಗೆ ಅವಕಾಶವನ್ನು ನೀಡುತ್ತಿದ್ದಾರೆ ಎಂದು ಆಕ್ಷೇಪವನ್ನು ವ್ಯಕ್ತಪಡಿಸಿದ್ದಾರೆ ಎಂದು ಮೂಲಗಳು ಮಾಹಿತಿ ನೀಡಿದೆ.
Advertisement
Advertisement
ಈ ಹಿಂದೆ ಕರ್ನಾಟಕವು ಸ್ತಬ್ಧಚಿತ್ರಕ್ಕಾಗಿ ಹಲವಾರು ಪ್ರಶಸ್ತಿಗಳನ್ನು ಗೆದ್ದಿತ್ತು. ಅಷ್ಟೇ ಅಲ್ಲದೇ ಕೆಲವು ಸೃಜನಶೀಲ ಹಾಗೂ ವರ್ಣರಂಜಿತ ಸ್ಥಬ್ಧಚಿತ್ರಕ್ಕಾಗಿ ವ್ಯಾಪಕ ಮೆಚ್ಚುಗೆಯನ್ನು ಪಡೆದಿದೆ. 2022ರ ಗಣರಾಜ್ಯೋತ್ಸವದಂದು ಕರ್ನಾಟಕ ಪ್ರದರ್ಶಿಸಿದ್ದ ಸ್ಥಬ್ಧ ಚಿತ್ರಕ್ಕೆ 2ನೇ ಸ್ಥಾನ ಪಡೆದಿತ್ತು. ರಾಜ್ಯವು ಹೆಚ್ಚಾಗಿ ಜಾನಪದ, ಜೀವವೈವಿಧ್ಯ, ಕರಕುಶಲ ಈ ರೀತಿಯ ವಿಷಯವನ್ನೆ ಹೆಚ್ಚು ಕೇಂದ್ರಿಕರಿಸುತ್ತಾ ಬಂದಿದೆ. ಇದನ್ನೂ ಓದಿ: ಮಂಡ್ಯ ಗೆಲ್ಲಲು ಬಿಜೆಪಿಯಿಂದ ಹಿಂದುತ್ವದ ಅಜೆಂಡಾ
2022ರ ಗಣರಾಜ್ಯೋತ್ಸವದಲ್ಲಿ ಕೇರಳ ಸಲ್ಲಿಸಿದ್ದ ನಾರಾಯಣಗುರು ಸ್ತಬ್ಧಚಿತ್ರಕ್ಕೆ ಕೇಂದ್ರ ಸರ್ಕಾರ ಅವಕಾಶ ನೀಡಿರಲಿಲ್ಲ. ಇದರಿಂದಾಗಿ ನಾರಾಯಣಗುರು ಅನುಯಾಯಿಗಳ ಕೆಂಗಣ್ಣಿಗೆ ಕೇಂದ್ರ ಸರ್ಕಾರ ಗುರಿಯಾಗಿತ್ತು. ಇದೀಗ ಆದರೆ ಪ್ರತಿಬಾರಿ ಗಣರಾಜ್ಯೋತ್ಸವ ಪೆರೇಡ್‍ನಲ್ಲಿ ಉತ್ತಮ ಪ್ರದರ್ಶನ ನೀಡುತ್ತಾ ಬಂದಿದ್ದ ರಾಜ್ಯದ ಸ್ತಬ್ಧಚಿತ್ರಕ್ಕೆ ಈ ಬಾರಿ ಅವಕಾಶ ತಪ್ಪಿರುವುದಕ್ಕೆ ತೀವ್ರ ಆಕ್ರೋಶ ವ್ಯಕ್ತವಾಗುತ್ತಿದೆ. ಇದನ್ನೂ ಓದಿ: ಬೆಂಗ್ಳೂರಿನ ರಸ್ತೆಗಳನ್ನು ಗುಂಡಿಮುಕ್ತ ಮಾಡಲು ಆಗಲ್ಲ – ಜಲ್ಲಿ ಕೊರತೆ ಇದೆ: BBMP
Live Tv
[brid partner=56869869 player=32851 video=960834 autoplay=true]
Join our Whatsapp group by clicking the below link
https://chat.whatsapp.com/E6YVEDajTzH06LOh77r25k