ಕಲಬುರಗಿ: ನಾವು ಮನಸ್ಸು ಮಾಡಿದರೆ ಎರಡೇ ದಿನಕ್ಕೆ ಪಾಕಿಸ್ತಾನ (Pakistan) ನಿರ್ನಾಮ ಮಾಡಬಹುದು ಎಂದು ಸಚಿವ ಜಮೀರ್ ಅಹ್ಮದ್ (Zameer Ahmed Khan) ಹೇಳಿದ್ದಾರೆ.
ಕಲಬುರಗಿಯಲ್ಲಿ (Kalaburagi) ಮಾಧ್ಯಮದವರೊಂದಿಗೆ ಮಾತನಾಡಿದ ಅವರು, ಆಪರೇಷನ್ ಸಿಂಧೂರ (Operation Sindoor) ಯಶಸ್ವಿಯಾಗಲಿ ಎಂದು ಶುಕ್ರವಾರ ನಾವು ಪ್ರಾರ್ಥನೆ ಮಾಡಿದ್ದೇವೆ. ಪಾಕಿಸ್ತಾನ ಬಳಿ ಏನೇನೂ ಇಲ್ಲ, ಕೇಂದ್ರ ಸರ್ಕಾರ ಉತ್ತಮ ನಿಧಾರ ಕೈಗೊಂಡಿದೆ ಎಂದರು. ಇದನ್ನೂ ಓದಿ: Vijayapura | ತೆರೆದ ಬಾವಿಗೆ ಬಿದ್ದು ಮಗು ಸಾವು
ಪ್ರಧಾನಮಂತ್ರಿ ಹೇಳಿದರೆ ನಾನು ಸೂಸೈಡ್ ಬಾಂಬ್ ಹಾಕಿಕೊಂಡು ಪಾಕಿಸ್ತಾನಕ್ಕೆ ಹೋಗಲು ಸಿದ್ಧ. ಪಾಕಿಸ್ತಾನ ಒಂದು ಖಾಲಿ ಡಬ್ಬಾ ಇದ್ದಂತೆ. ಪಾಕಿಸ್ತಾನ ಒಂದು ಠುಸ್ ಪಟಾಕಿಯಂತಿದೆ. ನಮ್ಮ ದೇಶಕ್ಕಾಗಿ ನಾನು ಏನು ಮಾಡಲು ಸಹ ಸಿದ್ಧ ಎಂದು ಹೇಳಿದರು. ಇದನ್ನೂ ಓದಿ: ಬೆಂಗಳೂರು ಪೋರ್ಟ್ ಧ್ವಂಸ ಮಾಡಿದ್ದೇವೆ – ಮತ್ತೆ ಪಾಕ್ ಫುಲ್ ಟ್ರೋಲ್