ಬೆಂಗಳೂರು: ತ್ರಿವಿಧ ದಾಸೋಹಿ, ನಡೆದಾಡುವ ದೇವರಿಗೆ ಈ ಬಾರಿ “ಭಾರತ ರತ್ನ” ಸಲ್ಲುತ್ತೆ ಎಂದು ಎಲ್ಲರೂ ನಿರೀಕ್ಷೆಯಲ್ಲಿದ್ದರು. ಆದರೆ ಕನ್ನಡಿಗರ ದನಿ ಮೋದಿ ಅವರಿಗೆ ಕೇಳಿಸಲಿಲ್ಲ. ಇದೀಗ ಶ್ರೀಗಳಿಗೆ ಭಾರತ ರತ್ನ ಸಿಗದ್ದಕ್ಕೆ ಎಲ್ಲೆಡೆ ಆಕ್ರೋಶ ವ್ಯಕ್ತವಾಗುತ್ತಿದೆ.
ಈ ಬಗ್ಗೆ ಪಬ್ಲಿಕ್ ಟಿವಿ ಜೊತೆ ಮಾತನಾಡಿದ ಕಿರಿಯ ಶ್ರೀಗಳು, “ಸ್ವಾಮೀಜಿ ಅವರು ಇದುವರೆಗೂ ಯಾವುದೇ ಪ್ರಶಸ್ತಿಯನ್ನು ಅಪೇಕ್ಷಿಸಿರಲಿಲ್ಲ. ಇದು ಜನರ ಒತ್ತಾಸೆ ಆಗಿತ್ತು. ಆದರೆ ಅವರ ಒತ್ತಾಸೆ ಈಡೇರಲಿಲ್ಲ ಎಂದು ನಿರಾಶೆ ಪಡುವ ಅವಶ್ಯಕತೆ ಇಲ್ಲ. ಪ್ರಶಸ್ತಿಯನ್ನು ಯಾರಿಗೆ ಪ್ರಕಟ ಮಾಡಿದ್ದಾರೋ ಅವರಿಗೆ ಸ್ವಾಗತ ಮಾಡಿ ಸಂತೋಷಪಡೋಣ. ಪ್ರಶಸ್ತಿ ಸಿಕ್ಕಿಲ್ಲ ಎಂದು ಅಸಮಾಧಾನ ಹಾಗೂ ಪ್ರತಿಭಟನೆ ಮಾಡುವುದು ನಾಗರಿಕರ ಲಕ್ಷಣ ಅಲ್ಲ. ಪ್ರಶಸ್ತಿಯನ್ನು ಪ್ರೀತಿಯಿಂದ ಕೇಳುವುದು ತಪ್ಪಲ್ಲ. ಹಾಗಂತ ಪ್ರತಿಭಟನೆ ಮಾಡಿದರೆ ಅದು ತಪ್ಪು. ನಾವು ಪ್ರಶಸ್ತಿ ಕಡೆ ಗಮನಹರಿಸುವುದಿಲ್ಲ. ಪ್ರಶಸ್ತಿಯ ಇಚ್ಛೆ ಕೂಡ ನಮಗೆ ಇಲ್ಲ. ಅಂತದ್ದರಲ್ಲಿ ಅವರು ನಮಗೆ ಕೊಡುತ್ತಾರೆ ಎಂಬ ನಿರೀಕ್ಷೆ ಕೂಡ ಇಲ್ಲ ಎಂದು ಹೇಳಿದ್ದಾರೆ. ಇದನ್ನು ಓದಿ: ಸಾಲುಮರದ ತಿಮ್ಮಕ್ಕ ಸೇರಿ ರಾಜ್ಯದ ಐವರಿಗೆ ಪದ್ಮಶ್ರೀ ಗೌರವ
ಸಿಎಂ ಟ್ವೀಟ್:
ಭಾರತದ ಅತ್ಯುನ್ನತ ನಾಗರಿಕ ಪ್ರಶಸ್ತಿ ಭಾರತ ರತ್ನ ಹಾಗೂ ಪದ್ಮ ಪ್ರಶಸ್ತಿಗೆ ಆಯ್ಕೆಯಾದ ಗಣ್ಯರಿಗೆ ಸಿಎಂ ಕುಮಾರಸ್ವಾಮಿ ಶುಭ ಕೋರಿದ್ದಾರೆ. ರಾಜ್ಯದ ಐವರಿಗೆ ಪದ್ಮಶ್ರೀ ಪ್ರಶಸ್ತಿ ಒಲಿದಿರೋದು ಸಂತಸ ತಂದಿದೆ. ಆದರೆ ಸಿದ್ದಗಂಗಾ ಶ್ರೀಗಳಿಗೆ ಭಾರತ ರತ್ನ ಹಾಗೂ ಇನ್ನೂ ಹಲವು ಅರ್ಹ ಸಾಧಕರಿಗೆ ಪದ್ಮ ಪ್ರಶಸ್ತಿ ನಿರೀಕ್ಷಿಸಿದ್ದೆವು. ಇದು ಕೈಗೂಡದಿರುವುದು ನಿರಾಸೆ ತಂದಿದೆ ಎಂದು ಟ್ವೀಟ್ ಮಾಡಿದ್ದಾರೆ. ಇದನ್ನು ಓದಿ: ಸಿದ್ದಗಂಗಾ ಶ್ರೀಗಳಿಗೆ ಭಾರತ ರತ್ನ ಇಲ್ಲ – ಪ್ರಣಬ್ ಮುಖರ್ಜಿ ಸೇರಿ ಮೂವರಿಗೆ ಗೌರವ
ಕೆಲವು ಸಾಧಕರಿಗೆ ಮರಣೋತ್ತರವಾಗಿಯಾದರೂ ಈ ಪ್ರಶಸ್ತಿ ಘೋಷಣೆಯಾಗಿರುವುದು ಹರ್ಷ ತಂದಿದೆ.
ಆದರೆ ಸಿದ್ದಗಂಗಾ ಶ್ರೀಗಳಿಗೆ ಭಾರತರತ್ನ ಹಾಗೂ ಇನ್ನೂ ಹಲವು ಅರ್ಹ ಸಾಧಕರಿಗೆ ಪದ್ಮ ಪ್ರಶಸ್ತಿ ನಿರೀಕ್ಷಿಸಿದ್ದೆವು. ಇದು ಕೈಗೂಡದಿರುವುದು ನಿರಾಸೆ ತಂದಿದೆ.#ShivakumaraSwamiji
— CM of Karnataka (@CMofKarnataka) January 25, 2019
ಶಾಸಕ ಸುರೇಶ್ ಕುಮಾರ್ ಅಸಮಾಧಾನ:
ಬಿಜೆಪಿ ಶಾಸಕ ಸುರೇಶ್ ಕುಮಾರ್ ತಮ್ಮ ಟ್ವಿಟ್ಟರಿನಲ್ಲಿ, “ಪ್ರಣಬ್ ಮುಖರ್ಜಿ, ಭೂಪೇನ್ ಹಜಾರಿಕಾ ಮತ್ತು ನಾನಾಜಿ ದೇಶ್‍ಮುಖ್‍ರಿಗೆ `ಭಾರತರತ್ನ’ ನೀಡಿರುವುದು ಅತ್ಯಂತ ಸೂಕ್ತ. ಇವರೊಂದಿಗೆ ಪರಮಪೂಜ್ಯ ಸಿದ್ದಗಂಗಾ ಶ್ರೀಗಳ ಹೆಸರು ಇದ್ದಿದ್ದರೆ `ಭಾರತರತ್ನ’ದ ಮೆರಗು ಬಹಳಷ್ಟು ಹೆಚ್ಚುತ್ತಿತ್ತು ಎಂಬುದು ಎಲ್ಲರ ಭಾವನೆ” ಎಂದು ಟ್ವೀಟ್ ಮಾಡಿದ್ದಾರೆ.
ಪ್ರಣಬ್ ಮುಖರ್ಜಿ, ಭೂಪೇನ್ ಹಜಾರಿಕಾ ಮತ್ತು ನಾನಾಜಿ ದೇಶ್ ಮುಖ್ ರಿಗೆ "ಭಾರತರತ್ನ" ನೀಡಿರುವುದು ಅತ್ಯಂತ ಸೂಕ್ತ.
ಇವರೊಂದಿಗೆ ಪರಮಪೂಜ್ಯ ಸಿದ್ದಗಂಗಾ ಶ್ರೀಗಳ ಹೆಸರೂ ಇದ್ದಿದ್ದರೆ "ಭಾರತರತ್ನ" ದ ಮೆರಗು ಬಹಳಷ್ಟು ಹೆಚ್ಚುತ್ತಿತ್ತು ಎಂಬುದು ಎಲ್ಲರ ಭಾವನೆ.
— S.Suresh Kumar (@nimmasuresh) January 25, 2019
ಇತ್ತ ಶ್ರೀಗಳಿಗೆ ಭಾರತ ರತ್ನ ನೀಡದ್ದಕ್ಕೆ ಭಕ್ತಗಣ ಆಕ್ರೋಶ ಹೊರಹಾಕುತ್ತಿದೆ. ಇನ್ನೊಮ್ಮೆ ಪರಿಶೀಲಿಸಿ ಶ್ರೀಗಳಿಗೆ ಭಾರತ ರತ್ನ ನೀಡಿ ಎಂದು ಭಕ್ತಾಧಿಗಳು ಮಠದ ಆವರಣದಲ್ಲಿ ಘೋಷಣೆ ಮಾಡಿ ಒತ್ತಾಯಿಸುತ್ತಿದ್ದಾರೆ.
ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv , ಪಬ್ಲಿಕ್ ಟಿವಿ ಆ್ಯಪ್ ಡೌನ್‍ಲೋಡ್ ಮಾಡಿ: play.google.com/publictv