Connect with us

Latest

ಸಾಕು ನಾಯಿಗೂ ಹೆಲ್ಮೆಟ್ ಹಾಕಿಸಿಕೊಂಡು ಬೈಕ್ ರೈಡ್- ವೀಡಿಯೋ ವೈರಲ್

Published

on

ಚೆನೈ: ದ್ವಿಚಕ್ರ ವಾಹನ ಸವಾರರರಿಗೆ ಹೆಲ್ಮೆಟ್ ಕಡ್ಡಾಯ ಮಾಡಿರೋದು ಎಲ್ಲಾರಿಗೂ ಗೊತ್ತಿರೋ ವಿಚಾರ. ಅದರಲ್ಲೂ ಬೈಕ್ ಸವಾರ ಮಾತ್ರ ಅಲ್ಲ ಹಿಂಬದಿ ಸೀಟಿನಲ್ಲಿ ಕೂರುವವರೂ ಹೆಲ್ಮೆಟ್ ಹಾಕಿಕೊಳ್ಳಬೇಕು ಅನ್ನೋ ಕಾನೂನಿದೆ. ಹೀಗೆ ಬೈಕ್ ಸವಾರರೊಬ್ಬರು ತನ್ನ ಹಿಂಬದಿಯಲ್ಲಿ ಕುಳಿತ ನಾಯಿಗೆ ಹೆಲ್ಮೆಟ್ ಹಾಕಿ ಇದೀಗ ಫುಲ್ ವೈರಲ್ ಆಗಿದ್ದಾರೆ.

ಹೌದು. ತಮಿಳಿನಾಡಿನಲ್ಲಿ ಸವಾರರೊಬ್ಬರು ತಾನು ಹೆಲ್ಮೆಟ್ ಧರಿಸಿ ಬೈಕ್ ಓಡಿಸಿದ್ದು, ಮಾತ್ರವಲ್ಲದೇ ತನ್ನ ಹಿಂಬದಿ ಕುಳಿತು ಪ್ರಯಾಣ ಮಾಡುತ್ತಿರುವ ಶ್ವಾನಕ್ಕೂ ಹೆಲ್ಮೆಟ್ ಹಾಕಿದ್ದಾರೆ. ಇದರ ವಿಡಿಯೋ ಇದೀಗ ಸಾಮಾಜಿಕ ಜಾಲತಾಣಗಳಲ್ಲಿ ಸಖತ್ ವೈರಲ್ ಆಗಿದೆ.

ವಿಡಿಯೋದಲ್ಲೇನಿದೆ..?
ಚೆನೈನಲ್ಲಿ ಬೈಕ್ ಸವಾರನೊಬ್ಬ ತಾನು ಹೆಲ್ಮೆಟ್ ಹಾಕಿಕೊಂಡು, ತನ್ನ ಸಾಕು ನಾಯಿಯನ್ನು ಹಿಂಬಂದಿ ಕುಳ್ಳಿರಿಸಿದ್ದಾರೆ. ಮಾತ್ರವಲ್ಲದೇ ಅದಕ್ಕೂ ಹೆಲ್ಮೆಟ್ ಹಾಕಿದ್ದಾರೆ. ನಾಯಿ ಕೂಡ ಮನುಷ್ಯರಂತೆ ಹೆಲ್ಮೆಟ್ ಹಾಕಿಕೊಂಡು ಬೈಕ್ ಸವಾರರನ್ನು ತನ್ನ ಎರಡೂ ಕೈಗಳಿಂದ ಹಿಡಿದುಕೊಂಡು ಹೋಗುತ್ತಿರುವುದನ್ನು ನಾವು ವೀಡಿಯೋದಲ್ಲಿ ಕಾಣಬಹುದಾಗಿದೆ.

ನಾಯಿ ಹೆಲ್ಮೆಟ್ ಧರಿಸಿ ಬೈಕ್ ನಲ್ಲಿ ಹೋಗುತ್ತಿರುವುದನ್ನು ಕೆಲ ಯುವಕರು ವೀಡಿಯೋ ಮಾಡಿದ್ದಾರೆ. ಅಲ್ಲದೆ ಈ ವಿಡಿಯೋವನ್ನು ಸಾಮಾಜಿಕ ಜಾಲತಾಣಗಳಲ್ಲಿ ಹರಿಯಬಿಟ್ಟಿದ್ದಾರೆ. ಸದ್ಯ ಈ ವಿಡಿಯೋ ಸೋಶಿಯಲ್ ಮೀಡಿಯಾದಲ್ಲಿ ಸಾಕಷ್ಟು ವೈರಲ್ ಆಗುತ್ತಿದೆ.

ಒಟ್ಟಿನಲ್ಲಿ ಒಂದೆಡೆ ಬೈಕ್ ಸವಾರನ ಕಾನೂನು ಪಾಲನೆಗೆ ಮೆಚ್ಚುಗೆ ವ್ಯಕ್ತವಾಗುತ್ತಿದ್ದರೆ, ಮತ್ತೊಂದೆಡೆ ಅದೇ ವಿಡಿಯೋದಲ್ಲಿ ಜನಸಮಾನ್ಯರು ಹೆಲ್ಮೆಟ್ ಇಲ್ಲದೆ ಹೋಗೋದು ಸಹ ಕಂಡುಬಂದಿದ್ದು, ಅದಕ್ಕೆ ವಿರೋಧಗಳು ವ್ಯಕ್ತವಾಗುತ್ತಿದೆ.

Click to comment

Leave a Reply

Your email address will not be published. Required fields are marked *

www.publictv.in