ಡೆಹ್ರಾಡೂನ್: ಉತ್ತರಾಖಂಡ್‍ದ ಬಿಜೆಪಿ ಶಾಸಕರೊಬ್ಬರು ಮಹಿಳಾ ಸಬ್‍ಇನ್ಸ್‌ಪೆಕ್ಟರ್ ಗೆ ಬೆದರಿಕೆ ಹಾಕಿರುವ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ.
ರುದ್ರಪುರ್ ಕ್ಷೇತ್ರದ ಶಾಸಕ ರಾಜ್‍ಕುಮಾರ್ ತುಕ್ರಾಲ್ ಅವರ ಇಬ್ಬರು ಸಹಚರರು ಸಂಚಾರ ನಿಯಮ ಉಲ್ಲಂಘಿಸಿದ್ದರು. ಹೀಗಾಗಿ ಅವರನ್ನು ರುದ್ರಪುರ್ ಸಂಚಾರ ಠಾಣೆಯ ಪೊಲೀಸರು ಬಂಧಿಸಿದ್ದರು. ಈ ಕುರಿತು ಮಾಹಿತಿ ತಿಳಿಯುತ್ತಿದ್ದಂತೆ ಪೊಲೀಸ್ ಠಾಣೆಗೆ ಬಂದ ಶಾಸಕರು ಸಬ್‍ಇನ್ಸ್‌ಪೆಕ್ಟರ್ ಅನಿತಾ ಗೈರೊಲಾ ಜೊತೆಗೆ ವಾಗ್ವಾದಕ್ಕೆ ಇಳಿದಿದ್ದಾರೆ.
Advertisement
ಬಂಧನಕ್ಕೆ ಕಾರಣ ತಿಳಿಸುತ್ತಿದ್ದರೂ ಕೇಳದ ಶಾಸಕ, ಅನಿತಾ ಗೈರೊಲಾ ಅವರ ಮೇಲೆ ಹರಿಹಾಯ್ದು, ಬೆದರಿಕೆ ಒಡ್ಡಿದ್ದಾರೆ. ಬಳಿಕ ಹಿಂಬಾಲಕರು ಹೇಳಿದ್ದರಿಂದ ಮತ್ತೇ ಠಾಣೆ ಬಾಗಿಲ ಬಳಿ ನಿಂತು, ಬಂಧಿತರನ್ನು ಬಿಡುವಂತೆ ಒತ್ತಾಯಿಸಿದ್ದಾರೆ.
Advertisement
#WATCH Uttarakhand: Video of BJP MLA from Rudrapur Rajkumar Thukral goes viral. In the video the MLA is seen threatening Sub Inspector of City Patrol Unit Anita Gairola over detention of two people over traffic violations. (7.9.18) pic.twitter.com/2q2ADCU07G
— ANI (@ANI) September 9, 2018
Advertisement
ಸ್ಥಳದಲ್ಲಿಯೇ ಇದ್ದ ವ್ಯಕ್ತಿಯೊಬರು ತಮ್ಮ ಮೊಬೈಲ್‍ನಲ್ಲಿ ದೃಶ್ಯ ಸೆರೆ ಹಿಡಿದು ಸಾಮಾಜಿಕ ಜಾಲತಾಣದಲ್ಲಿ ಹರಿಬಿಟ್ಟಿದ್ದಾರೆ. ಈ ವಿಡಿಯೋ ವೈರಲ್ ಆಗಿದ್ದು, ಭಾರೀ ಟೀಕೆ ವ್ಯಕ್ತವಾಗಿದೆ.
Advertisement
ಇದೇ ಮೊದಲಲ್ಲ, ಈ ಹಿಂದೆಯೂ ಯುವಕನೊಬ್ಬ ಪರಿಶಿಷ್ಟ ಜಾತಿಯ ಯುವತಿಯ ಜೊತೆಗೆ ಓಡಿ ಹೋಗಿದ್ದನು. ಹೀಗಾಗಿ ಯುವತಿಯ ಕುಟುಂಬದ ಮೂರು ಜನ ಮಹಿಳೆಯರ ಮೇಲೆ ಶಾಸಕರು ಹಲ್ಲೆ ಮಾಡಿದ್ದಾರೆ. ನಡು ರಸ್ತೆಯಲ್ಲಿಯೇ ಯುವತಿಯ ತಾಯಿ ಸೇರಿದಂತೆ ಇಬ್ಬರು ಸಹೋದರಿಯರನ್ನು ಥಳಿಸಿದ್ದರು.
ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv