ಮೆಲ್ಬರ್ನ್: ಆಸ್ಟ್ರೇಲಿಯಾದ ಆಟಗಾರ ಡೇವಿಡ್ ವಾರ್ನರ್ ಸೋಶಿಯಲ್ ಮೀಡಿಯಾದಲ್ಲಿ ಬೇರೆ ಬೇರೆ ಅವತಾರದಲ್ಲಿ ಕಾಣಿಸಿಕೊಳ್ಳುವುದು ತಿಳಿದಿರುವಂತಹ ವಿಷಯ. ಇದೀಗ ವಾರ್ನರ್ ಅಲ್ಲು ಅರ್ಜುನ್ ಅಭಿನಯದ ಪುಷ್ಪ ಫಿಲಂನಲ್ಲಿ ಅಲ್ಲು ಅವರ ಬಿಡ್ಡನ ಅಡ್ಡಾದಲ್ಲಿ ಅಬ್ಬರಿಸಿರುವ ಲುಕ್‍ನ್ನು ವಾರ್ನರ್ ಇನ್ಸ್ಟಾಗ್ರಾಂನಲ್ಲಿ ಹಾಕಿರುವ ವಿಡಿಯೋ ವೈರಲ್ ಆಗಿದೆ.
ವಿಡಿಯೋವನ್ನು ವಾರ್ನರ್ ಇನ್ಸ್ಟಾದಲ್ಲಿ ಹಾಕುತ್ತಿದ್ದಂತೆ ನೆಟ್ಟಿಗರ ಗಮನ ಸೆಳೆದಿದ್ದು ಅನೇಕ ಕಾಮೆಂಟ್‍ಗಳ ಸುರಿಮಳೆ ಹರಿದು ಬಂದಿದೆ. 7 ಲಕ್ಷಕ್ಕೂ ಅಧಿಕ ನೆಟ್ಟಿಗರು ಈ ವಿಡಿಯೋವನ್ನು ವೀಕ್ಷಿಸಿದ್ದಾರೆ. ಇತ್ತ ಈ ವಿಡಿಯೋ ವೈರಲ್ ಆಗುತ್ತಿದ್ದಂತೆ ಟೀಮ್ ಇಂಡಿಯಾದ ಮಾಜಿ ನಾಯಕ ವಿರಾಟ್ ಕೊಹ್ಲಿ “ಗೆಳೆಯ ನೀನು ಚೆನ್ನಾಗಿದ್ದೀಯಾ ತಾನೇ?” ಎಂದು ಕಾಮೆಂಟ್ ಮಾಡಿದ್ದಾರೆ. ಆಸ್ಟ್ರೇಲಿಯಾದ ಮಾಜಿ ಆಟಗಾರ ಮಿಚೆಲ್ ಜಾನ್ಸನ್ ಕೂಡ ಪ್ರತಿಕ್ರಿಯಿಸಿದ್ದು, ಒಂದ್ಸಲ ನಿಲ್ಲಿಸಪ್ಪಾ ಎಂಬಾರ್ಥದಲ್ಲಿ ಕಾಮೆಂಟ್ ಮಾಡಿದ್ದಾರೆ. ಇದನ್ನೂ ಓದಿ: ಯುಪಿಯಲ್ಲಿ ಕಾಣೆಯಾಗಿದ್ದ ಯೋಗಿನಿ ವಿಗ್ರಹ ಯುಕೆಯಲ್ಲಿ ಪತ್ತೆ
View this post on Instagram
ಸದ್ಯ ಡೇವಿಡ್ ವಾರ್ನರ್ ಇಂಗ್ಲೆಂಡ್ ವಿರುದ್ಧ ಆ್ಯಶಸ್ ಸರಣಿ ಆಡುತ್ತಿದ್ದು, ಇದರ ನಡುವೆಯೂ ವಿಡಿಯೋ ಮೂಲಕ ಅಭಿಮಾನಿಗಳನ್ನು ರಂಜಿಸುತ್ತಿರುವುದು ವಿಶೇಷ. ಸರಣಿಯ ಮೊದಲ ಪಂದ್ಯದ ಮೊದಲ ಇನಿಂಗ್ಸ್ ನಲ್ಲಿ ವಾರ್ನರ್ 94 ರನ್ ಗಳಿಸಿದ್ದರು. ಎರಡನೇ ಪಂದ್ಯಕ್ಕೆ ವಾರ್ನರ್ ಅಲಭ್ಯರಾಗುವ ಸಾಧ್ಯತೆಯಿದೆ. ಮೊದಲ ಪಂದ್ಯದಲ್ಲಿ ವಾರ್ನರ್ ಗಾಯಗೊಂಡಿದ್ದು, 3ನೇ ದಿನದಂದು ಮೈದಾನಕ್ಕೆ ಕಣಕ್ಕಿಳಿದಿರಲಿಲ್ಲ.