ಚಿಕ್ಕಮಗಳೂರು: ಈ ಹಿಂದೆ ಕಬಡ್ಡಿ, ವಾಲಿಬಾಲ್ ಆಡುವ ಮೂಲಕ ಜನರನ್ನು ಮನರಂಜಿಸಿದ್ದ ಶಾಸಕ ಸಿ.ಟಿ ರವಿ, ಇದೀಗ ಗ್ರಾಮಸ್ಥರೊಂದಿಗೆ ವೇದಿಕೆಯೇರಿ ಸಖತ್ತಾಗಿ ಸ್ಟೆಪ್ ಹಾಕೋ ಮೂಲಕ ಡ್ಯಾನ್ಸ್ ಗೂ ಸೈ ಎಂದಿದ್ದಾರೆ.
ಚಿಕ್ಕಮಗಳೂರು ತಾಲೂಕಿನ ಗಾಳಿಪೂಜೆಯಲ್ಲಿ ಶನಿವಾರ ಗ್ರಾಮ ವಾಸ್ತವ್ಯದ ವೇಳೆ ಗ್ರಾಮಸ್ಥರೊಂದಿಗೆ ವೇದಿಕೆ ಮೇಲೆಯೇರಿ ಕುಣಿದು ಕುಪ್ಪಳಿಸಿದ್ದಾರೆ. ಗ್ರಾಮ ವಾಸ್ತವ್ಯದಲ್ಲಿ ಗ್ರಾಮಸ್ಥರ ಸಮಸ್ಯೆಯನ್ನು ಆಲಿಸಿದ ಬಳಿಕ ಸಿಟಿ ರವಿ ವೇದಿಕೆಯೇರಿದ್ದಾರೆ ಎನ್ನಲಾಗಿದೆ.
Advertisement
ಈ ಹಿಂದೆ ಬೂಲನಹಳ್ಳಿ ಗ್ರಾಮದಲ್ಲಿ ಗ್ರಾಮ ವಾಸ್ತವ್ಯ ಮಾಡಿದ ಶಾಸಕ ಸಿ ಟಿ ರವಿ ಅವರು ಗ್ರಾಮ ಸಭೆಯ ಬಳಿಕ ಚಡ್ಡಿ ಹಾಗೂ ಟೀ ಶರ್ಟ್ ತೊಟ್ಟು ಸ್ಥಳೀಯ ಯುವಕರೊಂದಿಗೆ ಕಬಡ್ಡಿ ಆಡುವ ಮೂಲಕ ತಮ್ಮ ಹಳೆಯ ದಿನಗಳನ್ನು ಮೆಲುಕು ಹಾಕಿಕೊಂಡಿದ್ದರು.
Advertisement
ಇದನ್ನೂ ಓದಿ: ಶಾಸಕ ಸಿ.ಟಿ ರವಿಯಿಂದ ಕಬಡ್ಡಿ, ವಾಲಿಬಾಲ್ ಮೋಡಿ-ಫೋಟೋಗಳಲ್ಲಿ ನೋಡಿ
Advertisement
ಕ್ರೀಡಾಂಗಣಕ್ಕಿಳಿದ ಬಳಿಕ ಪ್ರೋಫೆಷನಲ್ ಆಟಗಾರನಂತೆ ಮೈದಾನದಲ್ಲಿದ್ದ ಕಲ್ಲುಗಳನ್ನ ಆಯ್ದು ಗ್ರೌಂಡ್ ಗೆ ನಮಸ್ಕರಿಸಿ ಕೋರ್ಟ್ ಒಳಗೆ ಪ್ರವೇಶಿಸಿದ್ದರು. ಶಾಸಕರು ಕಬಡ್ಡಿ ಆಡುವುದನ್ನು ನೋಡಲು ಗ್ರಾಮದ ಜನರೆಲ್ಲಾ ಆಸೀನರಾಗಿದ್ದರು. ಮಹಿಳೆಯರು ಕೂಡ ಮಕ್ಕಳ ಸಮೇತ ಗ್ರೌಂಡ್ ಸುತ್ತಲೂ ಕಿಕ್ಕಿರಿದು ಸೇರಿದ್ರು. ಶಾಸಕ ರವಿ ರೈಡ್ ಗೆ ಇಳಿಯುತ್ತಿದ್ದಂತೆ ಕೂಗುತ್ತಾ ಬೆಂಬಲಿಸಿದ್ದರು. ನಾನು ವಿಧಾನಸೌಧದ ಶಾಸಕನಲ್ಲ, ಜನಸಾಮಾನ್ಯರ ಶಾಸಕ ಎಂದು ಹೇಳ್ತಿದ್ದ ರವಿ ಅದೇ ರೀತಿ ನಡೆದುಕೊಂಡ್ರು ಅಂತ ಗ್ರಾಮಸ್ಥರು ಹರ್ಷ ವ್ಯಕ್ತಪಡಿಸಿದ್ದರು.
Advertisement
ಕಬಡ್ಡಿಯ ಬಳಿಕ ಗ್ರಾಮೀಣ ಕ್ರೀಡಾಕೂಟವಾದ ಹಗ್ಗಜಗ್ಗಾಟದಲ್ಲೂ ಭಾಗವಹಿಸಿ, ವಾಲಿಬಾಲ್ ಆಡುವ ಮೂಲಕ ಎಲ್ಲರ ಮನರಂಜಿಸಿದ್ದರು.