Connect with us

Chikkamagaluru

ಶಾಸಕ ಸಿ.ಟಿ ರವಿಯಿಂದ ಕಬಡ್ಡಿ, ವಾಲಿಬಾಲ್ ಮೋಡಿ!

Published

on

ಚಿಕ್ಕಮಗಳೂರು: ಬಿಜೆಪಿ ಮುಖಂಡ, ಶಾಸಕ ಸಿ.ಟಿ.ರವಿ ಒಳ್ಳೆ ಕಬಡ್ಡಿ ಆಟಗಾರ ಅನ್ನೋದು ಎಲ್ಲರಿಗೂ ಗೊತ್ತು. ಆದ್ರೆ ಅವರ ಕಬಡ್ಡಿ ಆಟವನ್ನ ನೋಡ್ದೋರು ತುಂಬಾ ವಿರಳ. ಆದ್ರೆ, ಇಂದು ಚಿಕ್ಕಮಗಳೂರು ತಾಲೂಕಿನ ಸಖರಾಯಪಟ್ಟಣ ಹೋಬಳಿಯ ಬೂಲನಹಳ್ಳಿ ತಾಂಡ್ಯದ ಜನರಿಗೆ ಅದನ್ನ ನೋಡೋ ಭಾಗ್ಯ ಸಿಕ್ತು.

ಇಂದು ಬೂಲನಹಳ್ಳಿ ಗ್ರಾಮದಲ್ಲಿ ಗ್ರಾಮ ವಾಸ್ತವ್ಯ ಮಾಡಿದ ಶಾಸಕ ಸಿ.ಟಿ.ರವಿ ಗ್ರಾಮ ಸಭೆಯ ಬಳಿಕ ಚೆಡ್ಡಿ ಹಾಗೂ ಟೀ ಶರ್ಟ್ ತೊಟ್ಟು ಸ್ಥಳಿಯ ಯುವಕರೊಂದಿಗೆ ಕಬಡ್ಡಿ ಆಡಿ ತಮ್ಮ ಹಳೆಯ ದಿನಗಳನ್ನ ನೆನಪಿಸಿಕೊಂಡ್ರು.

ಕ್ರೀಡಾಂಗಣಕ್ಕಿಳಿದ ಬಳಿಕ ಪ್ರೋಫೆಷನಲ್ ಆಟಗಾರನಂತೆ ಮೈದಾನದಲ್ಲಿದ್ದ ಕಲ್ಲುಗಳನ್ನ ಆಯ್ದು ಗ್ರೌಂಡ್ ಗೆ ನಮಸ್ಕರಿಸಿ ಕೋರ್ಟ್ ಒಳಗೆ ಪ್ರವೇಶಿಸಿದ್ರು. ಶಾಸಕ ರವಿ ಕಬಡ್ಡಿ ಆಡುವುದನ್ನು ನೋಡಲು ಗ್ರಾಮದ ಜನರೆಲ್ಲಾ ಆಸೀನರಾಗಿದ್ರು. ಮಹಿಳೆಯರು ಕೂಡ ಮಕ್ಕಳ ಸಮೇತ ಗ್ರೌಂಡ್ ಸುತ್ತಲೂ ಕಿಕ್ಕಿರಿದು ಸೇರಿದ್ರು. ಶಾಸಕ ರವಿ ರೈಡ್ ಗೆ ಇಳಿಯುತ್ತಿದ್ದಂತೆ ಕೂಗುತ್ತಾ ಬೆಂಬಲಿಸಿದ್ರು. ನಾನು ವಿಧಾನಸೌಧದ ಶಾಸಕನಲ್ಲ, ಜನಸಾಮಾನ್ಯರ ಶಾಸಕ ಎಂದು ಹೇಳ್ತಿದ್ದ ರವಿ ಅದೇ ರೀತಿ ನಡೆದುಕೊಂಡ್ರು ಎನ್ನುವುದು ಗ್ರಾಮಸ್ಥರ ಮಾತು.

ಕಬಡ್ಡಿಯ ಬಳಿಕ ಗ್ರಾಮೀಣ ಕ್ರೀಡಾಕೂಟವಾದ ಹಗ್ಗಜಗ್ಗಾಟದಲ್ಲೂ ಭಾಗವಹಿಸಿ, ವಾಲಿಬಾಲ್ ಆಡುವ ಮೂಲಕ ಎಲ್ಲರ ಮನರಂಜಿಸಿದರು.

 

 

Click to comment

Leave a Reply

Your email address will not be published. Required fields are marked *