ರಾಮನಗರ: ಚನ್ನಪಟ್ಟಣದಲ್ಲಿ ಕ್ಷುಲ್ಲಕ ಕಾರಣಕ್ಕೆ ಗಾಂಜಾ ಮತ್ತಿನಲ್ಲಿದ್ದ ಮೂವರು ಯುವಕರು ಪೇಂಟಿಂಗ್ (Painting) ಕೆಲಸ ಮಾಡುವ ವ್ಯಕ್ತಿಗೆ ಚಾಕುವಿನಿಂದ ಇರಿದ ಘಟನೆ ಚನ್ನಪಟ್ಟಣದ ಇಂದಿರಾ ಕಾಟೇಜ್‍ನಲ್ಲಿ ನಡೆದಿದೆ.
ಪಟ್ಟಣದ ಆನಂದಪುರದ ಪೇಂಟರ್ ವಡಿವೇಲು (34) ಚಾಕು ಇರಿತಕ್ಕೆ ಒಳಗಾಗಿದ್ದು, ಈತ ಇಂದಿರಾ ಕಾಟೇಜ್‍ನಲ್ಲಿನ ಮುಸ್ಲಿಂ ಸಮುದಾಯದ ಮನೆಯಲ್ಲಿ ಬಣ್ಣ ಹೊಡೆಯುವ ವೇಳೆ ಮಧ್ಯಾಹ್ನದ ಊಟದ ಬಳಿಕ ಕವರ್ ಬಿಸಾಡಿದ ವಿಚಾರಕ್ಕೆ ಮುಸ್ಲಿಂ ಯುವಕರು ಮತ್ತು ವಡಿವೇಲು ನಡುವೆ ಮಾತಿನ ಚಕಮಕಿ ನಡೆಯಿತು ಎಂದು ಹೇಳಲಾಗಿದ್ದು, ಸಂಜೆ ಕೆಲಸ ಮುಗಿಸಿ ಮನೆಗೆ ತೆರಳುತ್ತಿದ್ದ ವಡಿವೇಲುಗೆ ಹಿಂಬದಿಯಿಂದ ಬಂದ ಮುಸ್ಲಿಂ ಯುವಕರು ಚಾಕುವಿನಿಂದ ಬೆನ್ನಿಗೆ ಇರಿದು ಪರಾರಿಯಾಗಿದ್ದಾರೆ. ಇದನ್ನೂ ಓದಿ: ಕ್ರೈಸ್ತ ಧರ್ಮಕ್ಕೆ ಮತಾಂತರವಾಗುವಂತೆ ಒತ್ತಾಯ – 9 ಮಂದಿ ವಿರುದ್ಧ ಕೇಸ್, ಮೂವರು ಅರೆಸ್ಟ್
ರಕ್ತದ ಮಡುವಿನಲ್ಲಿ ಬಿದ್ದಿದ್ದ ವಡಿವೇಲನ್ನು ಇಂದಿರಾ ಕಾಟೇಜ್‍ನ ಯುವಕರು ಆಸ್ಪತ್ರೆಗೆ ದಾಖಲಿಸಿ ಆತನ ಸ್ನೇಹಿತರಿಗೆ ಫೋನ್ ಮೂಲಕ ಮಾಹಿತಿ ನೀಡಿದ್ದಾರೆ. ಬಳಿಕ ಚನ್ನಪಟ್ಟಣದ ಖಾಸಗಿ ಆಸ್ಪತ್ರೆಯಲ್ಲಿ (Hospital) ಚಿಕಿತ್ಸೆ ನೀಡಿ ಹೆಚ್ಚಿನ ಚಿಕಿತ್ಸೆಗಾಗಿ ಮಂಡ್ಯ ಮಿಮ್ಸ್ ಆಸ್ಪತ್ರೆಗೆ ರವಾನಿಸಲಾಗಿದೆ. ವಿಷಯ ತಿಳಿದು ಆಸ್ಪತ್ರೆಗೆ ಭೇಟಿ ನೀಡಿದ ಮಾಜಿ ಸಚಿವ ಸಿ.ಪಿ.ಯೋಗೇಶ್ವರ್ (C.P Yogeshwar) ಗಾಯಗೊಂಡ ವ್ಯಕ್ತಿಯ ಆರೋಗ್ಯ ವಿಚಾರಿಸಿದ್ದಾರೆ. ಘಟನೆಗೆ ಕಾರಣವಾದ ಯುವಕರನ್ನು ಕೂಡಲೇ ಬಂಧಿಸುವಂತೆ ಪೊಲೀಸರಿಗೆ ಸೂಚಿಸಿದ್ದಾರೆ. ಇದನ್ನೂ ಓದಿ: ತಾಯಿಯೊಂದಿಗೆ ಮಲಗಿದ್ದಾಗ ರೆಡ್‍ಹ್ಯಾಂಡ್ ಆಗಿ ಸಿಕ್ಕಿಬಿದ್ದ ವ್ಯಕ್ತಿಯ ಕೊಲೆ!