ಲಕ್ನೋ: ಲಾಕ್‌ಡೌನ್ (LockDown) ಸಂದರ್ಭದಲ್ಲಿ ಮಾಡಿದ ಸಹಾಯಕ್ಕಾಗಿ ಉತ್ತರಪ್ರದೇಶ (UttarPradesh) ಮೀರತ್‌ನಲ್ಲಿ ಕೆಲವರಿಗೆ ಮತಾಂತರಗೊಳ್ಳುವಂತೆ (Religious Conversion) ಒತ್ತಡ ಹೇರಲಾಗುತ್ತಿದೆ ಎನ್ನುವ ಆರೋಪದ ಮೇಲೆ ಮೂವರು ಮಹಿಳೆಯರು ಸೇರಿದಂತೆ 9 ಮಂದಿ ವಿರುದ್ಧ ಕೇಸ್ (FIR) ದಾಖಲಿಸಲಾಗಿದೆ.
Advertisement
ಮೀರತ್‌ನ ಬ್ರಹ್ಮಪುರಿ ಪೊಲೀಸ್ (Police) ಠಾಣಾ ವ್ಯಾಪ್ತಿಯಲ್ಲಿ ಘಟನೆ ನಡೆದಿದ್ದು, ಆರೋಪಿಗಳನ್ನು ಛಬಿಲಿ ಅಲಿಯಾಸ್ ಶಿವ, ಬಿನ್ವಾ, ಅನಿಲ್, ಸರ್ದಾರ್, ನಿಕ್ಕು, ಬಸಂತ್, ಪ್ರೇಮಾ, ತಿತ್ಲಿ ಮತ್ತು ರೀನಾ ಎಂದು ಗುರುತಿಸಲಾಗಿದೆ. ಅವರ ವಿರುದ್ಧ ಮತಾಂತರ ನಿಷೇಧ ಕಾಯ್ದೆಯ (Religious Conversion Act) ಸೆಕ್ಷನ್ 3, 5(1) ಅಡಿಯಲ್ಲಿ ಪ್ರಕರಣ ದಾಖಲಿಸಲಾಗಿದೆ. ಈಗಾಗಲೇ ಮೂವರನ್ನು ಬಂಧಿಸಲಾಗಿದ್ದು, ಉಳಿದ 6 ಮಂದಿಗಾಗಿ ಬಲೆ ಬೀಸಲಾಗಿದೆ ಎಂದು ಮೀರತ್ ಎಸ್ಪಿ ಪಿಯೂಷ್ ಕುಮಾರ್ ಸಿಂಗ್ ತಿಳಿಸಿದ್ದಾರೆ. ಇದನ್ನೂ ಓದಿ: ಪುನೀತ್ ಜೀವನ ಪಠ್ಯಪುಸ್ತಕಕ್ಕೆ ಸೇರಿಸಿ ಬೇಡಿಕೆಗೆ ಸಚಿವ ಆರ್.ಅಶೋಕ್ ಪ್ರತಿಕ್ರಿಯೆ
Advertisement
Advertisement
ಪ್ರಾಥಮಿಕ ತನಿಖಾ ವರದಿಯ ಪ್ರಕಾರ, ಆರೋಪಿಗಳು ಈ ಪ್ರದೇಶ ವ್ಯಾಪ್ತಿಯಲ್ಲಿರುವ ಬಡವರಿಗೆ ಕೋವಿಡ್ (Covid) ಸಂದರ್ಭದಲ್ಲಿ ಆಹಾರ (Food) ಹಾಗೂ ಆರ್ಥಿಕ ನೆರವು ನೀಡಿದ್ದರು. ಅದಕ್ಕೆ ಪ್ರತಿಯಾಗಿ ಅವರನ್ನು ಕ್ರೈಸ್ತ ಧರ್ಮಕ್ಕೆ ಮತಾಂತರಗೊಳ್ಳುವಂತೆ ಒತ್ತಾಯಿಸುತ್ತಿದ್ದರು. ಅಷ್ಟೇ ಅಲ್ಲದೇ ಕಾಲೋನಿ ಜನರ ಮನೆಗಳಲ್ಲಿರುವ ಹಿಂದೂ ದೇವರ ಫೋಟೋಗಳನ್ನು ಕಿತ್ತೆಸೆಯುತ್ತಿದ್ದರು. ಘಟನೆ ಬಗ್ಗೆ ಪೊಲೀಸರಿಗೆ ತಿಳಿಸಿದ್ರೆ ಕೊಲ್ಲುವುದಾಗಿ ಬೆದರಿಕೆ ಹಾಕಿದ್ದರು ಎಂದು ಸ್ಥಳೀಯ ಪೊಲೀಸ್ ಅಧಿಕಾರಿ ರೋಹಿತ್ ಸಿಂಗ್ ಸಜ್ವಾನ್ ಹೇಳಿದ್ದಾರೆ. ಇದನ್ನೂ ಓದಿ: ನಾನ್ ಸ್ಟ್ರೈಕರ್ ರನೌಟ್‍ನಿಂದ ಪಾರಾಗಲು ಹೊಸ ಐಡಿಯ ಹುಡುಕಿದ ಗ್ಲೆನ್ ಫಿಲಿಪ್ಸ್
Advertisement
ಇದಕ್ಕೆ ಪ್ರತಿಕ್ರಿಯಿಸಿರುವ ಬಿಜೆಪಿ (BJP) ನಾಯಕ ದೀಪಕ್ ಶರ್ಮಾ, ಇಲ್ಲಿನ 100ಕ್ಕೂ ಹೆಚ್ಚು ಜನರನ್ನು ಮತಾಂತರ ಮಾಡಲಾಗಿದೆ. ಕಳೆದ 3 ವರ್ಷಗಳಿಂದಲೂ ಇದು ನಡೆಯುತ್ತಲೇ ಇದೆ. ಅವರು ಮತಾಂತರಗೊಳ್ಳಲಿ ಅಂತಲೇ ಜನರಿಗೆ ಪಡಿತರ ಹಾಗೂ ಹಣದ ಸಹಾಯ ನೀಡಲಾಗಿದೆ. ನಂತರ ಮತಾಂತರಕ್ಕೆ ಒತ್ತಾಯಿಸಿದ್ದಾರೆ ಎಂದು ಆಕ್ಷೇಪ ವ್ಯಕ್ತಪಡಿಸಿದ್ದಾರೆ.