CrimeDistrictsKarnatakaLatestMain PostVijayapura

ತಾಯಿಯೊಂದಿಗೆ ಮಲಗಿದ್ದಾಗ ರೆಡ್‍ಹ್ಯಾಂಡ್ ಆಗಿ ಸಿಕ್ಕಿಬಿದ್ದ ವ್ಯಕ್ತಿಯ ಕೊಲೆ!

ವಿಜಯಪುರ: ಅನೈತಿಕ ಸಂಬಂಧ ಹೊಂದಿದ್ದ ವ್ಯಕ್ತಿಯನ್ನು ಬರ್ಬರವಾಗಿ ಕೊಲೆ ಮಾಡಿದ ಘಟನೆ ವಿಜಯಪುರ (Vijayapura) ದಲ್ಲಿ ನಡೆದಿದೆ.

ತುಕಾರಾಮ ಚವ್ಹಾಣ ಕೊಲೆಯಾದ ವ್ಯಕ್ತಿ. ಈ ಘಟನೆ ವಿಜಯಪುರ ಜಿಲ್ಲೆಯ ಚಡಚಣದಲ್ಲಿ ಶುಕ್ರವಾರ ತಡರಾತ್ರಿ ನಡೆದಿದೆ.

45 ವರ್ಷದ ತಂಗೆವ್ವ ಹಾಗೂ 60 ವರ್ಷದ ತುಕಾರಾಮ ಮಧ್ಯೆ ಹತ್ತು ವರ್ಷಗಳಿಂದ ಅನೈತಿಕ ಸಂಬಂಧ (Illicit Relationship) ನಡೆಯುತ್ತಿತ್ತು. ನಡುಮಟ್ಟದ ಹಳ್ಳದಾಟಿ ಬಂದು ನಿನ್ನೆ ತಡರಾತ್ರಿ ತಂಗೆವ್ವ ಜೊತೆ ಮನೆ ಹಿಂದೆ ತುಕರಾಮ ಮಲಗಿದ್ದನು. ಈ ವೇಳೆ ತಂಗೆವ್ವ ಮಕ್ಕಳಾದ ಸದಾಶಿವ ಬಂಗಾರತಳಿ, ಸಿದ್ದು ಬಂಗಾರತಳಿ ಹಾಗೂ ಚಿಕ್ಕು ಬಂಗಾರತಳಿಯು ತುಕಾರಾಮನನ್ನು ಕೊಲೆ ಮಾಡಿ ಪರಾರಿಯಾಗಿದ್ದಾರೆ.

ತುಕರಾಮ ತಲೆಗೆ ಕೊಡಲಿಯಿಂದ ಹೊಡೆದು ಕೊಲೆಗೈಯಲಾಗಿದೆ. ಬಳಿಕ ತಾಯಿಯೊಂದಿಗೆ ಮೂವರು ಆರೋಪಿಗಳು ಪರಾರಿಯಾಗಿದ್ರು. ಇದೀಗ ಮಹಾರಾಷ್ಟ್ರದ ಕೊಲ್ಲಾಪುರ ಬಳಿ ಸದಾಶಿವ ಬಂಗಾರತಳಿ ಚಿಕ್ಕು ಬಂಗಾರತಳಿ, ಸಿದ್ದು ಬಂಗಾರತಳಿಯನ್ನು ಪೊಲೀಸರು ಬಂಧಿಸಿದ್ದಾರೆ. ಇದನ್ನೂ ಓದಿ: ಮಹಿಳೆಗೆ ಜಸ್ಟ್ ಮೆಸೇಜ್ ಮಾಡಿದ್ದಕ್ಕೆ ಟೈಲರ್ ಹತ್ಯೆ – ಐವರು ಅರೆಸ್ಟ್

ಚಡಚಣ ಪೊಲೀಸ್ ಠಾಣೆ ಪಿಎಸ್‍ಐ ಸಂಜಯ್ ತಿಪ್ಪಾರೆಡ್ಡಿ ನೇತೃತ್ವದಲ್ಲಿ ಮೂವರು ಆರೋಪಿಗನ್ನು ಬಂಧಿಸಲಾಗಿದೆ. ಆದರೆ ತಲೆಮರೆಸಿಕೊಂಡಿರೋ ತಂಗೆವ್ವ ಬಂಗಾರತಳಿಗಾಗಿ ಪೊಲೀಸರು ಹುಡುಕಾಟ ನಡೆಸುತ್ತಿದ್ದಾರೆ.

ಈ ಸಂಬಂಧ ಚಡಚಣ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

Live Tv

Leave a Reply

Your email address will not be published. Required fields are marked *

Back to top button