ಮುಂಬೈ: ಟಿ20 ವಿಶ್ವಕಪ್‍ಗಾಗಿ (T20 World Cup) ಇದೀಗ ಆಸ್ಟ್ರೇಲಿಯಾದಲ್ಲಿರುವ (Australia) ತಂಡಗಳ ಪೈಕಿ ಭಾರತ (India) ತಂಡದಲ್ಲಿ 150ಕ್ಕೂ ಹೆಚ್ಚಿನ ವೇಗದಲ್ಲಿ ಬಾಲ್ ಎಸೆಯುವ ಬೌಲರ್ ಇಲ್ಲ. ಅತ್ತ ಇಂಗ್ಲೆಂಡ್‍ನಲ್ಲಿ (England) ಪ್ರಧಾನಿಯೇ ಇಲ್ಲ ಎಂದು ಟೀಂ ಇಂಡಿಯಾದ ಮಾಜಿ ಆಟಗಾರ ವಾಸಿಮ್ ಜಾಫರ್ (Wasim Jaffer) ವ್ಯಂಗ್ಯವಾಡಿದ್ದಾರೆ.
Advertisement
ಟ್ವಿಟ್ಟರ್‌ನಲ್ಲಿ ಭಾರತ, ಶ್ರೀಲಂಕಾ, ನ್ಯೂಜಿಲೆಂಡ್, ಪಾಕಿಸ್ತಾನ ಮತ್ತು ಇಂಗ್ಲೆಂಡ್ ತಂಡದ ಕುರಿತಾಗಿ ವ್ಯಂಗ್ಯವಾಡಿರುವ ಜಾಫರ್, ಭಾರತ ತಂಡದಲ್ಲಿ ಗಂಟೆಗೆ 150ಕ್ಕೂ ಹೆಚ್ಚು ವೇಗದಲ್ಲಿ ಬೌಲಿಂಗ್ ಮಾಡುವ ಬೌಲರ್ ಇಲ್ಲ. ಪಾಕಿಸ್ತಾನ ತಂಡದಲ್ಲಿ ಮ್ಯಾಚ್ ಫಿನಿಶರ್ ಕೊರತೆ ಕಾಡುತ್ತಿದೆ. ಇದನ್ನೂ ಓದಿ: ಎರಡು ಬಾರಿಯ ಚಾಂಪಿಯನ್ ವೆಸ್ಟ್ ಇಂಡೀಸ್ ಟಿ20 ವಿಶ್ವಕಪ್ ಟೂರ್ನಿಯಿಂದಲೇ ಔಟ್
Advertisement
Was doing a SWOT analysis for T20 WC participating teams and realised:
India don't have a 150K+ bowler.
Pak don't have a seasoned finisher.
NZ don't have a great record in Aus.
SL don't have an experienced squad.
England don't have a Prime Minister. #T20worldcup22 #LizTruss
— Wasim Jaffer (@WasimJaffer14) October 20, 2022
Advertisement
ನ್ಯೂಜಿಲೆಂಡ್ ತಂಡ ಆಸ್ಟ್ರೇಲಿಯಾ ನೆಲದಲ್ಲಿ ಉತ್ತಮ ಸಾಧನೆ ಮಾಡಿಲ್ಲ. ಶ್ರೀಲಂಕಾ ತಂಡಕ್ಕೆ ಅನುಭವವಿಲ್ಲ. ಅತ್ತ ಇಂಗ್ಲೆಂಡ್‍ನಲ್ಲಿ ಪ್ರಧಾನಿಯೇ ಇಲ್ಲ ಎಂದು ಟ್ವೀಟ್ ಮಾಡಿದ್ದಾರೆ. ಇದನ್ನೂ ಓದಿ: ಗ್ರೀನ್‍ಗೆ ಸಿಕ್ತು ಟಿ20 ವಿಶ್ವಕಪ್ ಗ್ರೀನ್ ಸಿಗ್ನಲ್
Advertisement
ಇದೀಗ ಜಾಫರ್ ಮಾಡಿರುವ ಟ್ವೀಟ್ ಸಾಮಾಜಿಕ ಜಾಲತಾಣದಲ್ಲಿ ಸದ್ದು ಮಾಡುತ್ತಿದೆ. ಅತ್ತ ಇಂಗ್ಲೆಂಡ್‍ನ ಬ್ರಿಟನ್‍ನಲ್ಲಿ ರಾಜಕೀಯ ಬಿಕ್ಕಟ್ಟು ಎದುರಾಗಿದ್ದು, ಪ್ರಧಾನಿ ಲಿಜ್ ಟ್ರಸ್ ಅವರು ತಮ್ಮ ಸ್ಥಾನಕ್ಕೆ ರಾಜೀನಾಮೆ ನೀಡಿದ್ದಾರೆ.
Live Tv
[brid partner=56869869 player=32851 video=960834 autoplay=true]