ಬೆಂಗಳೂರು: ಕೆಲ ವಿದ್ಯಾರ್ಥಿನಿಯರಿಗೆ (Student) ಲೇಡಿ ವಾರ್ಡನ್ (Warden) ನಿತ್ಯ ಕಿರುಕುಳ ಕೊಡುತ್ತಿರುವ ಆರೋಪ ಬೆಂಗಳೂರಿನ ಹಿಂದುಳಿದ ವರ್ಗಗಳ ಕಲ್ಯಾಣ ಇಲಾಖೆಯ ಬಾಲಕಿಯರ ಹಾಸ್ಟೆಲ್‍ನಲ್ಲಿ ಕೇಳಿಬಂದಿದೆ.
ಬೆಂಗಳೂರಿನ (Bengaluru) ಆರ್‌ಆರ್ ನಗರದಲ್ಲಿರುವ ಹಿಂದುಳಿದ ವರ್ಗಗಳ ಕಲ್ಯಾಣ ಇಲಾಖೆಯ ಬಾಲಕಿಯರ ಹಾಸ್ಟೆಲ್‍ನಲ್ಲಿ ವಾರ್ಡನ್ ಟಾರ್ಚರ್‌ಗೆ ವಿದ್ಯಾರ್ಥಿನಿಯರು ಬೇಸತ್ತಿದ್ದಾರೆ. ಅಲ್ಲಿನ ವಾರ್ಡನ್, ರಾತ್ರಿ ಹೊತ್ತಲ್ಲಿ ವಿದ್ಯಾರ್ಥಿನಿಯರು (Student) ಓದ್ಕೊಳ್ಳುವ ಟೈಮ್‍ನಲ್ಲಿ ಲೈಟ್ ಆಫ್ ಮಾಡುತ್ತಾರೆ. ರಾತ್ರಿ 9 ಘಂಟೆಯಿಂದ 11 ಘಂಟೆಯ ತನಕ ಹಾಸ್ಟೆಲ್‍ಗೆ (Hostel) ವಿದ್ಯುತ್ ಸಂಪರ್ಕ ಕಡಿತ ಮಾಡುತ್ತಾರೆ ಎಂಬ ಆರೋಪಗಳು ಕೇಳಿ ಬಂದಿವೆ. ಹೀಗಾಗಿ ವಿದ್ಯಾರ್ಥಿನಿಯರು ಮೊಬೈಲ್ ಟಾರ್ಚ್ ಆನ್ ಮಾಡಿಕೊಂಡು ವ್ಯಾಸಂಗ ಮಾಡುತ್ತಿದ್ದಾರೆ. ವಿದ್ಯಾರ್ಥಿನಿಯರ ಈ ಆರೋಪಕ್ಕೆ ಸ್ಪಷ್ಟನೆ ಕೊಡದ ವಾರ್ಡನ್ ಹಾಸ್ಟೆಲ್‍ನಲ್ಲಿಲ್ಲ.
Advertisement
Advertisement
ಈ ಹಾಸ್ಟೆಲ್‍ನಲ್ಲಿ 100ಕ್ಕೂ ಹೆಚ್ಚು ವಿದ್ಯಾರ್ಥಿನಿಗಳಿದ್ದಾರೆ. ವಾರ್ಡನ್, ವಿದ್ಯಾರ್ಥಿನಿಗಳಿಂದಲೇ ಟಾಯ್ಲೆಟ್ ರೂಂ ಕ್ಲೀನ್ ಮಾಡಿಸ್ತಾರಂತೆ. ರೂಂ ಕ್ಲೀನ್ ಮಾಡಲ್ಲ ಅಂದ್ರೆ ಟಾರ್ಗೆಟ್ ಮಾಡಿ, ಟಾರ್ಚರ್ ನೀಡ್ತಾರೆ ಅಂತ ವಿದ್ಯಾರ್ಥಿನಿಗಳು ಆರೋಪಿಸಿದ್ದಾರೆ. ಇನ್ನೂ ಕಾಲೇಜು ಮುಗಿಸಿ ಹಾಸ್ಟೆಲ್‍ನಿಂದ ಹೊರ ಹೋಗುವಾಗ ವಾರ್ಡನ್‍ಗೆ ದುಬಾರಿ ಕೊಡುಗೆಗಳು ನೀಡಬೇಕಂತೆ. ಕಾಲೇಜು ಮುಗಿಸಿಕೊಂಡು, ಸಂಜೆ ಹೊತ್ತಲ್ಲಿ ಹಾಸ್ಟೆಲ್‍ಗೆ ಬರೋದು ಲೇಟಾದರೆ, ಇತರೆ ವಿದ್ಯಾರ್ಥಿನಿಗಳ ಮುಂದೆಯೇ ಅವಮಾನ ಮಾಡ್ತಾರೆ ಅಂತ ವಿದ್ಯಾರ್ಥಿನಿಗಳು ದೂರಿದ್ದಾರೆ. ಇದನ್ನೂ ಓದಿ: ಬಿಜೆಪಿಗೆ ಸೇರ್ತಾರಾ ಸುಮಲತಾ ಅಂಬರೀಶ್?
Advertisement
Advertisement
ಘಟನೆಯ ಬಗ್ಗೆ ಇಲಾಖೆಯ ಮೇಲಾಧಿಕಾರಿಗಳ ಗಮನಕ್ಕೂ ವಿದ್ಯಾರ್ಥಿನಿಗಳು ತಂದಿದ್ದಾರೆ. ಆದರೆ ಇವರೆಗೂ ಯಾವುದೇ ಪ್ರಯೋಜನವಾಗಿಲ್ಲ. ಇನ್ನೂ ಕೆಲ ವಿದ್ಯಾರ್ಥಿನಿಯರು ಲೇಡಿ ವಾರ್ಡನ್ ಟಾರ್ಚರ್ ಬಗ್ಗೆ ಮಾತನಾಡಲು ಭಯಪಡುತ್ತಿದ್ದಾರೆ. ಇದನ್ನೂ ಓದಿ: ಪಂಚರತ್ನ ಯಾತ್ರೆಯಲ್ಲಿ ಭಾಗಿಯಾಗಿದ್ದ ಜೆಡಿಎಸ್ ಅಭ್ಯರ್ಥಿ ನಿಧನ
Live Tv
[brid partner=56869869 player=32851 video=960834 autoplay=true]
Join our Whatsapp group by clicking the below link
https://chat.whatsapp.com/E6YVEDajTzH06LOh77r25k