ತೆಲುಗಿನಲ್ಲಿ ಬಿಗ್ ಚಾನ್ಸ್ ಗಿಟ್ಟಿಸಿಕೊಂಡ ಆಶಿಕಾ ರಂಗನಾಥ್

Public TV
1 Min Read
ashika ranganath 2

ನ್ನಡದ ನಟಿ ಆಶಿಕಾ ರಂಗನಾಥ್ (Ashika Ranganath) ಕನ್ನಡದ ಜೊತೆಗೆ ತೆಲುಗು ಸಿನಿಮಾಗಳಲ್ಲಿ ಬ್ಯುಸಿಯಾಗಿದ್ದಾರೆ. ಜ್ಯೂ.ಎನ್‌ಟಿಆರ್ ಸಹೋದರ ಕಲ್ಯಾಣ್ ರಾಮ್ ಅಭಿನಯದ ‘ಅಮಿಗೋಸ್’ ಸಿನಿಮಾ ಮೂಲಕ ತೆಲುಗಿಗೆ ಎಂಟ್ರಿ ಕೊಟ್ಟಿದ್ದರು. ಬಳಿಕ ‘ನಾ ಸಾಮಿ ರಂಗ’ ಚಿತ್ರದಲ್ಲಿ ಅಕ್ಕಿನೇನಿ ನಾಗಾರ್ಜುನ್ ಜೋಡಿಯಾಗಿ ನಟಿಸಿದ್ದರು. ಈಗ ಮೆಗಾಸ್ಟಾರ್ ಚಿರಂಜೀವಿ (Megastar Chiranjeevi) ಜೊತೆ ನಟಿಸುವ ಅವಕಾಶ ತಮ್ಮದಾಗಿಸಿಕೊಂಡಿದ್ದಾರೆ.

ashika ranganath 4

ಚಿರಂಜೀವಿ ಅಭಿನಯಿಸುತ್ತಿರುವ ‘ವಿಶ್ವಂಭರ’ (Vishambhara) ಚಿತ್ರದಲ್ಲಿ ಚುಟು ಚುಟು ಚೆಲುವೆ ಪ್ರಮುಖ ಪಾತ್ರದಲ್ಲಿ ಬಣ್ಣ ಹಚ್ಚಲಿದ್ದಾರೆ. ಅವರ ಪಾತ್ರದ ಬಗ್ಗೆ ಪ್ರೇಕ್ಷಕರಲ್ಲಿ ನಿರೀಕ್ಷೆ ಹೆಚ್ಚಿದೆ.

ಮೆಗಾಸ್ಟಾರ್ ಚಿರಂಜೀವಿಗೆ ನಾಯಕಿಯಾಗಿ ತ್ರಿಷಾ ಕೃಷ್ಣನ್ ನಟಿಸಲಿದ್ದಾರೆ. ಯು.ವಿ ಕ್ರಿಯೇಷನ್ ಬ್ಯಾನರ್ ನಡಿ ವಿಕ್ರಮ್, ವಂಶಿ ಹಾಗೂ ಪ್ರಮೋದ್ ಚಿತ್ರ ನಿರ್ಮಾಣ ಮಾಡುತ್ತಿದ್ದಾರೆ. ಬಿಂಬಿಸಾರ ಚಿತ್ರ ನಿರ್ದೇಶಿಸಿದ್ದ ವಸಿಷ್ಠ ವಿಶ್ವಂಭರ ಚಿತ್ರಕ್ಕೆ ಆ್ಯಕ್ಷನ್ ಕಟ್ ಹೇಳಿದ್ದಾರೆ.

ಆಸ್ಕರ್ ವಿಜೇತ ಎಂ.ಎಂ ಕೀರವಾಣಿ ಅವರು ಈ ಸಿನಿಮಾಗೆ ಸಂಗೀತ ಮಾಡುತ್ತಿದ್ದಾರೆ. ಚೋಟಾ ಕೆ ನಾಯ್ಡು ಛಾಯಾಗ್ರಹಣ, ರಾಮ ಲಕ್ಷ್ಮಣ ಸಾಹಸ ನಿರ್ದೇಶನ ‘ವಿಶ್ವಂಭರ’ ಚಿತ್ರಕ್ಕಿದೆ. 2025ರ ಸಂಕ್ರಾಂತಿ ಹಬ್ಬಕ್ಕೆ ಸಿನಿಮಾ ಬಿಡುಗಡೆಯಾಗಲಿದೆ.

Share This Article