ನವದೆಹಲಿ: ಪುಲ್ವಾಮ ದಾಳಿಗೆ ಪ್ರತ್ಯುತ್ತರ ನೀಡಲು ಗಡಿ ನಿಯಂತ್ರಣ ರೇಖೆ ದಾಟಿ ಭಾರತೀಯ ವಾಯುಪಡೆ ಪಾಕ್ ಆಕ್ರಮಿತ ಕಾಶ್ಮೀರದಲ್ಲಿ ಉಗ್ರರ ನೆಲೆಗಳ ಮೇಲೆ ವೈಮಾನಿಕ ದಾಳಿ ಮಾಡಿದಕ್ಕೆ ಇಡೀ ದೇಶವೇ ಹೆಮ್ಮೆ ಪಡುತ್ತಿದೆ. ಅಲ್ಲದೆ ಈ ಸರ್ಜಿಕಲ್ ಸ್ಟ್ರೈಕ್ 2.0 ನಡೆದ ಮೇಲಾದರೂ ತಪ್ಪನ್ನು ತದ್ದಿಕೊಂಡು ಸುಧಾರಿಸಿಕೊಳ್ಳಿ ಇಲ್ಲವಾದರೆ ಹೇಗೆ ನಿಮ್ಮನ್ನು ಸುಧಾರಿಸಬೇಕು ಅಂತ ನಮಗೆ ಗೊತ್ತು ಎಂದು ಟೀಂ ಇಂಡಿಯಾದ ಮಾಜಿ ಕ್ರಿಕೆಟಿಗ ವೀರೇಂದ್ರ ಸೆಹ್ವಾಗ್ ಹೇಳಿದ್ದಾರೆ.
Advertisement
ಇಂದು ಮುಂಜಾನೆ ಭಾರತೀಯ ವಾಯುಪಡೆಯ 12 ಮಿರಾಜ್-2000 ಯುದ್ಧ ವಿಮಾನಗಳು ನಡೆಸಿದ ದಾಳಿಯಲ್ಲಿ 200ಕ್ಕೂ ಹೆಚ್ಚು ಉಗ್ರರು ಮಣ್ಣಾಗಿದ್ದಾರೆ. ಪುಲ್ವಾಮ ಕೃತ್ಯಕ್ಕೆ ಸೇಡು ತೀರಿಸಿಕೊಂಡಿರುವ ಭಾರತೀಯ ಸೇನೆಯನ್ನು ದೇಶದೆಲ್ಲೆಡೆ ಹಾಡಿ ಹೊಗಳುತ್ತಿದ್ದಾರೆ. ಹಾಗೆಯೇ ಈ ಬಗ್ಗೆ ವಾಯುಪಡೆಯ ಸಾಹಸವನ್ನು ಶ್ಲಾಘಿಸಿ ವೀರೇಂದ್ರ ಸೆಹ್ವಾಗ್ ತಮ್ಮದೇ ಕ್ರಿಕೆಟ್ ಶೈಲಿಯಲ್ಲಿ ಟ್ವೀಟ್ ಮಾಡಿ ಭಾರತೀಯ ಸೇನೆಗೆ ಅಭಿನಂದನೆ ತಿಳಿಸಿದ್ದಾರೆ. ಇದನ್ನೂ ಓದಿ:ಕವಿತೆ ಬರೆದು ವಾಯುಪಡೆಗೆ ಗೌರವ ಸಲ್ಲಿಸಿ #AlwaysReady ಎಂದ ಭಾರತೀಯ ಸೇನೆ!
Advertisement
The boys have played really well. #SudharJaaoWarnaSudhaarDenge #airstrike
— Virender Sehwag (@virendersehwag) February 26, 2019
Advertisement
ನಮ್ಮ ಹುಡುಗರು ನಿಜಕ್ಕೂ ಉತ್ತಮ ಆಟ ಆಡಿದ್ದಾರೆ ಎಂದು ಬರೆದು, ಸುಧಾರಿಸಿಕೊಳ್ಳಿ ಇಲ್ಲವೇ ನಾವು ಸುಧಾರಿಸುತ್ತೇವೆ ಎಂದು ಹ್ಯಾಶ್‍ಟ್ಯಾಗ್ ಹಾಕಿ ಟ್ವೀಟ್ ಮಾಡಿದ್ದಾರೆ. ಅಲ್ಲದೆ ಈ ಸರ್ಜಿಕಲ್ ಸ್ಟ್ರೈಕ್ 2.0 ಬಗ್ಗೆ ಟೀಂ ಇಂಡಿಯಾದ ಕ್ರಿಕೆಟ್ ಆಟಗಾರ ಗೌತಮ್ ಗಂಭೀರ್ ಕೂಡ ಜೈ ಹಿಂದ್ ಐಎಎಫ್ ಎಂದು ಬರೆದು ಟ್ವೀಟ್ ಮಾಡಿದ್ದಾರೆ.
Advertisement
JAI HIND, IAF ???????? @IAF_MCC @adgpi #IndiaStrikesAgain #IndiaStrikesBack #IndiaStrikes
— Gautam Gambhir (@GautamGambhir) February 26, 2019
ಭಾರತೀಯ ಸೇನೆಯ ಈ ಪ್ರತ್ಯುತ್ತರ ದಾಳಿಗೆ ಇಡೀ ದೇಶವೇ ಮೆಚ್ಚುಗೆ ವ್ಯಕ್ತಪಡಿಸಿದ್ದು, ಎಲ್ಲೆಡೆ ಪಟಾಕಿ ಸಿಡಿಸಿ, ಸಿಹಿ ಹಂಚುವ ಮೂಲಕ ವಿಜಯೋತ್ಸವವನ್ನು ಆಚರಿಸಲಾಗುತ್ತಿದೆ.
ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv , ಪಬ್ಲಿಕ್ ಟಿವಿ ಆ್ಯಪ್ ಡೌನ್‍ಲೋಡ್ ಮಾಡಿ: play.google.com/publictv