ಅಡಿಲೇಡ್: ಟೀಂ ಇಂಡಿಯಾ ನಾಯಕ ವಿರಾಟ್ ಕೊಹ್ಲಿ ತಮ್ಮ ಆಕ್ರಮಣಕಾರಿ ಬ್ಯಾಟಿಂಗ್ ಮೂಲಕ ಪ್ರವೃತ್ತಿ ಅಭಿಮಾನಿಗಳನ್ನು ಪಡೆದಿದ್ದು, ಆದರೆ ಆಸೀಸ್ ವಿರುದ್ಧ ಪಂದ್ಯದಲ್ಲಿ ಮಸ್ತ್ ಡಾನ್ಸ್ ಮೂಲಕ ಎಲ್ಲರ ಗಮನ ಸೆಳೆದಿದ್ದಾರೆ.
ಅಡಿಲೇಡ್ ಒವೆಲ್ ಕ್ರೀಡಾಂಗಣದಲ್ಲಿ ಆಸ್ಟ್ರೇಲಿಯಾ ವಿರುದ್ಧ ನಡೆಯುತ್ತಿರುವ ಪಂದ್ಯದ ಕ್ಷೇತ್ರ ರಕ್ಷಣೆ ಮಾಡುವ ವೇಳೆ ಕೊಹ್ಲಿ ಡಾನ್ಸ್ ಮಾಡಿದ್ದಾರೆ. ಕೊಹ್ಲಿ ಡಾನ್ಸ್ ಮಾಡುತ್ತಿರುವ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ. ಕೊಹ್ಲಿ ಆಟದ ವೇಳೆ ತಮ್ಮ ಸ್ಫೂರ್ತಿಯನ್ನು ಹೆಚ್ಚಿಸಿಕೊಳ್ಳಲು ಈ ರೀತಿ ಡಾನ್ಸ್ ಮಾಡಿದ್ದಾರೆ ಎನ್ನಲಾಗಿದೆ.
Advertisement
Advertisement
ಆಸೀಸ್ ವಿರುದ್ಧ ಟೆಸ್ಟ್ ಪಂದ್ಯದ 2ನೇ ದಿನದಾಟದ ವೇಳೆ ಇಶಾಂತ್ ಶರ್ಮಾ ಆರಂಭಿಕರ ವಿಕೆಟ್ ಪಡೆದು ಮಿಂಚಿದರು. ಈ ವೇಳೆ ಗಾಳಿಯಲ್ಲಿ ಪಂಚ್ ಮಾಡಿ ಸಂಭ್ರಮಿಸಿದ್ದ ಕೊಹ್ಲಿ ಅವರ ನಡೆ ಎಲ್ಲರ ಗಮನ ಸೆಳೆದಿತ್ತು. ಈಗ ಮತ್ತೊಮ್ಮೆ ಡಾನ್ಸ್ ಮೂಲಕ ಕೊಹ್ಲಿ ಸುದ್ದಿಯಾಗಿದ್ದಾರೆ.
Advertisement
ಪಂದ್ಯದಲ್ಲಿ ವಿರಾಟ್ ಕೊಹ್ಲಿ ಆಸೀಸ್ ನೆಲದಲ್ಲಿ ಸಾವಿರಕ್ಕೂ ಅಧಿಕ ರನ್ ಗಳಿಸಿದ ನಾಲ್ಕನೇ ಭಾರತೀಯ ಆಟಗಾರ ಎನ್ನುವ ಖ್ಯಾತಿಗೆ ಪಾತ್ರರಾಗಿದ್ದಾರೆ.ಆ ಮೂಲಕ ಸಚಿನ್, ದ್ರಾವಿಡ್, ಲಕ್ಷ್ಮಣ ಅವರ ನಂತರ ಈ ಸಾಧನೆ ಮಾಡಿದ ಆಟಗಾರ ಎನ್ನುವ ಖ್ಯಾತಿಗೆ ಪಾತ್ರರಾಗಿದ್ದಾರೆ. ಆದರೆ ಕೊಹ್ಲಿ ಸಂಭ್ರಮಾಚರಣೆಯನ್ನು ಆಸೀಸ್ ಕೋಚ್ ಟೀಕೆ ಮಾಡಿ ಮಾತನಾಡಿದ್ದಾರೆ. ಒಂದೊಮ್ಮೆ ಕೊಹ್ಲಿ ಮಾಡಿದಂತೆ ಆಸೀಸ್ ಮಾಡಿದ್ದರೆ, ಅದು ವಿಶ್ವದ ಅತ್ಯಂತ ಕೆಟ್ಟ ತಂಡವಾಗುತ್ತಿತ್ತು ಎಂದು ಹೇಳಿದ್ದಾರೆ.
Advertisement
Virat's loving it… #AUSvIND pic.twitter.com/JV0lxo4Aen
— cricket.com.au (@cricketcomau) December 8, 2018
ಉಳಿದಂತೆ ಆಸೀಸ್ ನೆಲದಲ್ಲಿ ಹೊಸ ಮೈಲುಗಲ್ಲು ನಿರ್ಮಿಸಿದ ಕೊಹ್ಲಿ, 1 ಸಾವಿರ ರನ್ ಪೂರೈಸಿದ ಆಟಗಾರ ಎಂಬ ಹೆಗ್ಗಳಿಕೆ ಪಡೆದರು. ಇದರೊಂದಿಗೆ ಈ ಸಾಧನೆ ಮಾಡಿದ ನಾಲ್ಕನೇ ಆಟಗಾರ ಎಂಬ ಹೆಗ್ಗಳಿಕೆಯನ್ನು ತಮ್ಮದಾಸಿಕೊಂಡರು. ಪಂದ್ಯ ಮೊಲದ ಇನ್ನಿಂಗ್ಸ್‍ನಲ್ಲಿ 250 ರನ್ ಗಳಿಸಿದ್ದ ಭಾರತ ಆಸೀಸ್ ತಂಡವನ್ನು 235 ರನ್ ಗಳಿಗೆ ಮೊದಲ ಇನ್ನಿಂಗ್ಸ್‍ನಲ್ಲಿ ಕಟ್ಟಿಹಾಕಲು ಯಶಸ್ವಿಯಾಗಿದ್ದು, 3ನೇ ದಿನದಾಟದ ಅಂತ್ಯಕ್ಕೆ 3 ವಿಕೆಟ್ ಕಳೆದುಕೊಂಡು 151 ರನ್ ಗಳಿಸಿದೆ. ಆ ಮೂಲಕ 166 ರನ್ ಗಳ ಮುನ್ನಡೆಯನ್ನು ಪಡೆದಿದೆ.
ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv , ಪಬ್ಲಿಕ್ ಟಿವಿ ಆ್ಯಪ್ ಡೌನ್‍ಲೋಡ್ ಮಾಡಿ: play.google.com/publictv