ಲಂಡನ್: ಸೌಥಾಂಪ್ಟನ್ ರೋಸ್ ಬಾಲ್ ಕ್ರೀಡಾಂಗಣದಲ್ಲಿ ನಡೆಯುತ್ತಿರುವ ಇಂಗ್ಲೆಂಡ್ ವಿರುದ್ಧದ 4ನೇ ಟೆಸ್ಟ್ ಪಂದ್ಯದಲ್ಲಿ ವಿರಾಟ್ ಕೊಹ್ಲಿ ವೇಗವಾಗಿ 4 ಸಾವಿರ ರನ್ ಪೂರೈಸಿದ ನಾಯಕ ಎಂಬ ದಾಖಲೆ ಬರೆದಿದ್ದಾರೆ.
ಕೊಹ್ಲಿ 39 ಪಂದ್ಯ, 65 ಇನ್ನಿಂಗ್ಸ್ ಗಳಲ್ಲಿ 4 ಸಾವಿರ ರನ್ ಪೂರೈಸಿದ್ದಾರೆ. ಈ ಹಿಂದೆ ವೆಸ್ಟ್ ಇಂಡೀಸ್ ಬ್ರಿಯಾನ್ ಲಾರಾ 40 ಪಂದ್ಯ, 71 ಇನ್ನಿಂಗ್ಸ್ ಗಳಲ್ಲಿ 4 ಸಾವಿರ ರನ್ ಪೂರೈಸಿದ್ದರು. ಉಳಿದಂತೆ ಪಟ್ಟಿಯಲ್ಲಿ ಆಸೀಸ್ ಮಾಜಿ ನಾಯಕ ರಿಕಿ ಪಾಂಟಿಂಗ್ (42 ಪಂದ್ಯ, 75 ಇನ್ನಿಂಗ್ಸ್), ಗ್ರೇಗ್ ಚಾಪೆಲ್ (45 ಪಂದ್ಯ, 80 ಇನ್ನಿಂಗ್ಸ್), ಅಲಾನ್ ಬಾರ್ಡರ್ (49 ಪಂದ್ಯ, 83 ಇನ್ನಿಂಗ್ಸ್) ಕ್ರಮವಾಗಿ ಸ್ಥಾನ ಪಡೆದಿದ್ದಾರೆ.
Advertisement
Fastest to 4000 Test runs as captain:
65 KOHLI
71 Lara
75 Ponting
80 Chappell
83 Border#ENGvIND
— Bharath Seervi (@SeerviBharath) September 2, 2018
Advertisement
ಇನ್ನು 4ನೇ ಇನ್ನಿಂಗ್ಸ್ ನಲ್ಲಿ 58 ರನ್ ಗಳಿಸಿ ಔಟಾದ ಕೊಹ್ಲಿ ಈ ಟೂರ್ನಿಯಲ್ಲಿ 544 ರನ್ ಪೂರೈಸಿದರು. ಈ ಮೂಲಕ ವಿದೇಶಿ ನೆಲದಲ್ಲಿ ನಡೆದ ಟೂರ್ನಿಯೊಂದರಲ್ಲಿ 500 ಪ್ಲಸ್ ರನ್ ಸಿಡಿಸಿದ ಟೀಂ ಇಂಡಿಯಾ ನಾಯಕ ಎಂಬ ಹೆಗ್ಗಳಿಕೆಯನ್ನು ಪಡೆದರು. ಅಲ್ಲದೇ ಇಂಗ್ಲೆಂಡ್ ನೆಲದಲ್ಲಿ ಈ ಸಾಧನೆ ಮಾಡಿದ ಮೊದಲ ಏಷ್ಯನ್ ಆಟಗಾರ ಎಂಬ ಹೆಗ್ಗಳಿಕೆಯನ್ನು ಪಡೆದರು. ಇದನ್ನು ಓದಿ : ಟೆಸ್ಟ್‌ನಲ್ಲಿ ಸಚಿನ್ ಸಾಧನೆ ಹಿಂದಿಕ್ಕಿದ ಕೊಹ್ಲಿ
Advertisement
ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv
Advertisement
Kohli and Rahane add a crucial 101 run partnership but the India captain falls for 58 shortly before tea, the visitors reaching the break on 126/4, needing 119 to win.
Who do you think is on top?#ENGvIND LIVE ➡️ https://t.co/VUru4XV87u pic.twitter.com/Ih0hZhKT6n
— ICC (@ICC) September 2, 2018
500+ runs for Kohli in the series:
– 3rd Indian to do so in England
– 1st Asian captain in England
– 1st Indian captain away from home#EngvInd
— Bharath Seervi (@SeerviBharath) September 2, 2018