ದುಬೈ: ಭಾರತ ಕ್ರಿಕೆಟ್ ತಂಡದ ಕ್ಯಾಪ್ಟನ್ ವಿರಾಟ್ ಕೊಹ್ಲಿ ಬ್ಯಾಟ್ ಹಿಡಿದು ಮೈದಾನಕ್ಕೆ ಇಳಿದರೇ, ಅವರನ್ನು ಮನುಷ್ಯನ ರೂಪದಲ್ಲಿ ಕಾಣಲು ಸಾಧ್ಯವೇ ಇಲ್ಲವೆಂದು ಬಾಂಗ್ಲಾ ಓಪನಿಂಗ್ ಬ್ಯಾಟ್ಸ್‌ಮನ್ ತಮೀಮ್ ಇಕ್ಬಾಲ್ ಅಭಿಪ್ರಾಯ ಹಂಚಿಕೊಂಡಿದ್ದಾರೆ.
ಹೌದು, ವಿರಾಟ್ ಕೊಹ್ಲಿ ಅವರ ಅಬ್ಬರದ ಬ್ಯಾಟಿಂಗ್ ಶೈಲಿಗೆ ಕ್ರಿಕೆಟ್ ದಿಗ್ಗಜರೇ ಮಾರುಹೋಗಿದ್ದಾರೆ. ತನ್ನ ಅಗ್ರೆಸ್ಸೀವ್ ಆಟದ ಮೂಲಕ ಎಲ್ಲರನ್ನೂ ತನ್ನತ್ತ ವಿರಾಟ್ ಸೆಳೆದುಕೊಂಡಿದ್ದಾರೆ.
Advertisement
Advertisement
ವಿರಾಟ್ ಬ್ಯಾಟಿಂಗ್ ಕುರಿತು ಪ್ರತಿಕ್ರಿಯಿಸಿರುವ ಇಕ್ಬಾಲ್, ನಾನು ಹಲವು ಬಾರಿ ವಿರಾಟ್ ಅವರ ಆಟವನ್ನು ನೋಡಿದ್ದೇನೆ. ಕೆಲವೊಮ್ಮೆ ವಿರಾಟ್ ಮನುಷ್ಯ ಅಂತ ನಮಗೆ ಅನ್ನಿಸುವುದೇ ಇಲ್ಲ. ಬ್ಯಾಟ್ ಹಿಡಿದು ಕ್ರಿಸ್‍ಗೆ ಬಂದರೆ, ನಿಜಕ್ಕೂ ಆತ ಮನುಷ್ಯನೇ ಆಗಿರುವುದಿಲ್ಲ. ಪ್ರತಿ ಬಾರಿಯೂ ಶತಕ ದಾಖಲಿಸುತ್ತಲೇ ಹೋಗುತ್ತಾರೆ ಎಂದು ಹೊಗಳಿದ್ದಾರೆ.
Advertisement
ಕೊಹ್ಲಿಯವರ ಪ್ರದರ್ಶನ ಅತ್ಯಂತ ರೋಚಕವೆನಿಸುತ್ತದೆ. ಎಲ್ಲಾ ದರ್ಜೆಯ ಕ್ರಿಕೆಟ್‍ಗಳಲ್ಲೂ ಅವರೇ ನಂ.1. ಅವರಿಂದ ನಾವು ಕಲಿಯುವುದು ಸಾಕಷ್ಟು ಇದೆ. ಆತನೋರ್ವ ಅದ್ಭುತ ಆಟಗಾರ. ನಾನು ನನ್ನ 12 ವರ್ಷಗಳ ಕ್ರಿಕೆಟ್ ಬದುಕಿನಲ್ಲಿ ಸಾಕಷ್ಟು ಆಟಗಾರರೊಂದಿಗೆ ಆಡಿದ್ದೇನೆ. ಅವರೆಲ್ಲರಿಗೂ ಅವರದ್ದೇ ಆದ ಬಲವಾದ ಅಂಶಗಳನ್ನು ಹೊಂದಿದ್ದರು. ಆದರೆ ಕೊಹ್ಲಿಯವರ ರೀತಿಯಲ್ಲಿ ಯಾರನ್ನು ನೋಡಿಲ್ಲ. ಅವರ ಆಟವು ಪ್ರತಿ ಪಂದ್ಯದಲ್ಲೂ ವಿಭಿನ್ನವಾಗಿರುತ್ತದೆ. ಕೊಹ್ಲಿಯ ಎಲ್ಲಾ ಆಟಗಾರರನು ಮೀರಿಸುತ್ತಾರೆ ಎಂದು ಹೇಳಿದ್ದಾರೆ.
Advertisement
ವಿರಾಟ್ ತಮ್ಮ 10,000 ರನ್ ಪೂರೈಸಲು ಕೇವಲ 81 ರನ್‍ಗಳು ಮಾತ್ರ ಬಾಕಿ ಇವೆ. ಈ ಮೊದಲು ಕ್ರಿಕೆಟ್ ದೇವರು ಸಚಿನ್ ತೆಂಡೂಲ್ಕರ್ 259 ಇನ್ನಿಂಗ್ಸ್ ಗಳಲ್ಲಿ 10,000ರನ್ ಪೂರೈಸಿದ್ದರೇ, ವಿರಾಟ್ ಕೇವಲ 204 ಇನ್ನಿಂಗ್ಸ್ ಗಳಲ್ಲಿ 10 ಸಾವಿರ ರನ್‍ಗಳ ಗಡಿಗೆ ಸಮೀಪದಲ್ಲಿದ್ದಾರೆ.
ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv