ಅರ್ಧಶತಕ ಸಿಡಿಸಿ ಮಗಳಿಗೆ ಸಮರ್ಪಿಸಿದ ಕೊಹ್ಲಿ

Public TV
1 Min Read
VIRAT KOHLI AND ANSHKA SHARMA

ಕೇಪ್‍ಟೌನ್: ಟೀಂ ಇಂಡಿಯಾದ ಮಾಜಿ ನಾಯಕ ವಿರಾಟ್ ಕೊಹ್ಲಿ ದಕ್ಷಿಣ ಆಫ್ರಿಕಾ ವಿರುದ್ಧ ಮೂರನೇ ಏಕದಿನ ಪಂದ್ಯದಲ್ಲಿ ಅರ್ಧಶತಕ ಸಿಡಿಸಿ ಆ ಅರ್ಧಶತಕವನ್ನು ಮಗಳು ವಮಿಕಾಗೆ ಸಮರ್ಪಿಸಿದ್ದಾರೆ.

VAMIKA 2

ವಿರಾಟ್ ಕೊಹ್ಲಿ ಹಲವು ದಿನಗಳಿಂದ ರನ್ ಬರ ಅನುಭವಿಸುತ್ತಿದ್ದರು. ಬಳಿಕ ಇಂದಿನ ಪಂದ್ಯದಲ್ಲಿ ಉತ್ತಮವಾಗಿ ಬ್ಯಾಟ್‍ಬೀಸಿ ಅರ್ಧಶತಕ ಸಿಡಿಸಿ ಮಿಂಚಿದರು. ಅರ್ಧಶತಕ ಸಿಡಿಸುತ್ತಿದ್ದಂತೆ ಗ್ಯಾಲರಿಯಲ್ಲಿ ಪಂದ್ಯ ವೀಕ್ಷಿಸುತ್ತಿದ್ದ ಅನುಷ್ಕಾ ಶರ್ಮಾ ಚಪ್ಪಾಳೆ ತಟ್ಟಿ ಪ್ರೋತ್ಸಾಹಿಸಿದರು. ಈ ವೇಳೆ ಪುತ್ರಿ ವಮಿಕಾ ಕಿರುನಗೆ ಬೀರುತ್ತಾ ಕೊಹ್ಲಿಯನ್ನು ನೋಡಿದಳು. ಕೊಹ್ಲಿ ತನ್ನ ಬ್ಯಾಟ್‍ನ್ನು ಮಗುವನ್ನು ಎತ್ತಿ ಆಡಿಸಿದಂತೆ ಮಾಡಿ ನನ್ನ ಅರ್ಧಶತಕ ನನ್ನ ಮಗಳಿಗೆ ಎಂಬಂತೆ ಸನ್ನೆ ಮಾಡಿ ಸಂಭ್ರಮಿಸಿದರು. ಇದನ್ನೂ ಓದಿ: ಐಪಿಎಲ್ ಹರಾಜಿಗೆ ಆಟಗಾರರ ಪಟ್ಟಿ ಪ್ರಕಟ – ಶಾರೂಕ್ ಖಾನ್, ಅವೇಶ್ ಖಾನ್ ಬೆಲೆ ಕಂಡು ದಂಗಾದ ಕ್ರಿಕೆಟ್‌ ಪ್ರಿಯರು

VAMIKA 3

ಕೊಹ್ಲಿ ಈ ರೀತಿ ಸಂಭ್ರಮಿಸಿದ ವೀಡಿಯೋ ಇದೀಗ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗುತ್ತಿದೆ. ಕೊಹ್ಲಿ ಈ ಪಂದ್ಯದಲ್ಲಿ 65 ರನ್ (84 ಎಸೆತ, 5 ಬೌಂಡರಿ) ಸಿಡಿಸಿ ಔಟ್ ಆದರು. ಇದನ್ನೂ ಓದಿ: ಪಂತ್ ಸಿಕ್ಸರ್‌ಗೆ ಕೊಹ್ಲಿ ಡ್ಯಾನ್ಸ್ – ವೀಡಿಯೋ ವೈರಲ್

ಕೊಹ್ಲಿ ಪುತ್ರಿ ವಮಿಕಾಗೆ ಜನವರಿ 11 ರಂದು 1 ವರ್ಷವಾಗಿದೆ. 2021 ಜನವರಿ 11 ರಂದು ವಮಿಕಾ ಹುಟ್ಟಿದ್ದಳು. ಈ ವರ್ಷ ಕೊಹ್ಲಿ ಆಫ್ರಿಕಾದಲ್ಲಿ ಮಗಳ ಮೊದಲ ವರ್ಷದ ಹುಟ್ಟುಹಬ್ಬವನ್ನು ಆಚರಿಸಿದ್ದರು. ಇಷ್ಟು ದಿನಗಳ ಕಾಲ ಫೋಟೋದಲ್ಲಿ ಮಗಳ ಮುಖ ಕಾಣಿಸಿಕೊಳ್ಳದಂತೆ ಅನುಷ್ಕಾ ಶರ್ಮಾ ಮತ್ತು ಕೊಹ್ಲಿ ಗೌಪ್ಯತೆ ಕಾಪಾಡಿಕೊಂಡಿದ್ದರು. ಇಂದು ವಮಿಕಾ ಮುಖ ಮೊದಲ ಬಾರಿಗೆ ಕ್ಯಾಮೆರಾ ಕಣ್ಣಿನಲ್ಲಿ ಸುಂದರವಾಗಿ ಸೆರೆಯಾಗಿ ವೈರಲ್ ಆಗಿದೆ.

Share This Article
Leave a Comment

Leave a Reply

Your email address will not be published. Required fields are marked *