Tuesday, 17th July 2018

Recent News

ಟೀಂ ಇಂಡಿಯಾ ಸೋತಿದ್ದಕ್ಕೆ ಕೊಹ್ಲಿ ಮದುವೆ ಬಗ್ಗೆ ಟ್ರೋಲ್

ನವದೆಹಲಿ: ಭಾನುವಾರ ಇಂಡಿಯಾ ಹಾಗೂ ಶ್ರೀಲಂಕಾ ನಡುವೆ ನಡೆದ ಏಕದಿನ ಪಂದ್ಯದಲ್ಲಿ ಭಾರತ ಸೋಲನ್ನಪ್ಪಿದ ಹಿನ್ನೆಲೆಯಲ್ಲಿ ಟೀಂ ಇಂಡಿಯಾ ನಾಯಕ ವಿರಾಟ್ ರನ್ನು ಟ್ವಿಟ್ಟರಿನಲ್ಲಿ ಟ್ರೋಲ್ ಮಾಡಿದ್ದಾರೆ.

ವಿರಾಟ್ ಕೊಹ್ಲಿ ಮದುವೆ ರದ್ದಾಗಿದೆ, ಈ ಸಂಜೆ ವಿರಾಟ್ ಟೀಂಗೆ ಸೇರ್ಪಡೆ ಆಗುತ್ತಿದ್ದಾರೆಂದು ಬಿಸಿಸಿಐ ತಿಳಿಸಿದೆ ಎಂದು ಒಬ್ಬರು ಟ್ವೀಟ್ ಮಾಡಿದ್ದಾರೆ. ವಿರಾಟ್ ತಮ್ಮ ಮದುವೆಗೆ ಟೀಂ ಇಂಡಿಯಾಗೆ ಆಮಂತ್ರಣ ನೀಡಿಲ್ಲ ಎಂದು ಟೀಂ ಇಂಡಿಯಾ ಪಂದ್ಯವನ್ನು ಸೋತಿದ್ದಾರೆ ಎಂದು ಮತ್ತೊಬ್ಬರು ಟ್ವೀಟ್ ಮಾಡಿದ್ದಾರೆ. ಇದೇ ರೀತಿ ವಿವಿಧ ಜೋಕ್‍ ಗಳ ಮೂಲಕ ವಿರಾಟ್ ಮದುವೆ ವಿಷಯ ಇಟ್ಟುಕೊಂಡು ಟ್ರೋಲ್ ಮಾಡಿದ್ದಾರೆ.

ಇದನ್ನೂ ಓದಿ: ಅಬ್ಬಾ, ಮದ್ವೆ ನಂತರ ವಿರಾಟ್-ಅನುಷ್ಕಾ ಇಷ್ಟು ಕೋಟಿ ಬೆಲೆಯ ಅಪಾರ್ಟ್ ಮೆಂಟ್‍ನಲ್ಲಿ ವಾಸವಾಗ್ತಾರೆ!

ಇದನ್ನೂ ಓದಿ: ಭಾರೀ ಲಗೇಜ್ ಗಳೊಂದಿಗೆ ಇಟಲಿಯತ್ತ ಅನುಷ್ಕಾ ಶರ್ಮಾ ಕುಟುಂಬಸ್ಥರು ಪ್ರಯಾಣ

ವಿರಾಟ್ ಕೊಹ್ಲಿ ಮತ್ತು ಅನುಷ್ಕಾ ಶರ್ಮಾ ಇದೇ ವಾರ ಇಟಲಿಯಲ್ಲಿ ದಾಂಪತ್ಯ ಜೀವನಕ್ಕೆ ಕಾಲಿಡುತ್ತಿದ್ದಾರೆ ಎಂದು ಹೇಳಲಾಗುತ್ತಿದೆ. ಆದರೆ ಇದರ ಬಗ್ಗೆ ವಿರಾಟ್ ಅಥವಾ ಅನುಷ್ಕಾ ಯಾವುದೇ ಮಾಹಿತಿ ನೀಡುತ್ತಿಲ್ಲ.

ಇದನ್ನೂ ಓದಿ: ಅನುಷ್ಕಾ ಹೊರತುಪಡಿಸಿ ವಿರಾಟ್ ಜೀವನದಲ್ಲಿದ್ದಾರೆ ಈ 6 ಸ್ಪೆಷಲ್ ವ್ಯಕ್ತಿಗಳು!

ಭಾನುವಾರ ಧರ್ಮಶಾಲಾದಲ್ಲಿ ನಡೆದ ಪಂದ್ಯದಲ್ಲಿ ಶ್ರೀಲಂಕಾ ತಂಡದ ನಾಯಕ ರುಚಿರಾ ಪೆರಾರ ಟಾಸ್ ಗೆದ್ದು ಫೀಲ್ಡಿಂಗ್ ಆಯ್ಕೆ ಮಾಡಿಕೊಂಡರು. ಮೊದಲು ಬ್ಯಾಟಿಂಗ್ ಮಾಡಿದ ಭಾರತ 38.4 ಓವರ್ ಗಳಲ್ಲಿ 112 ರನ್ ಬಾರಿಸಿ ಅಲೌಟ್ ಆಯ್ತು.

Leave a Reply

Your email address will not be published. Required fields are marked *