Connect with us

Bollywood

ಅನುಷ್ಕಾ ಹೊರತುಪಡಿಸಿ ವಿರಾಟ್ ಜೀವನದಲ್ಲಿದ್ದಾರೆ ಈ 6 ಸ್ಪೆಷಲ್ ವ್ಯಕ್ತಿಗಳು!

Published

on

ನವದೆಹಲಿ: ಟೀಂ ಇಂಡಿಯಾದ ರನ್ ಮಷೀನ್ ವಿರಾಟ್ ಕೊಹ್ಲಿ ಜೀವನದಲ್ಲಿ ಗೆಳತಿ ಅನುಷ್ಕಾ ಶರ್ಮಾರನ್ನು ಹೊರತುಪಡಿಸಿ 6 ಜನರಿಗೆ ಹೆಚ್ಚಿನ ಮಹತ್ವವನ್ನು ನೀಡುತ್ತಾರೆ. ತಮ್ಮ ಬಿರುಸಿನ ಹೊಡೆತಗಳ ಮೂಲಕ ಕೋಟ್ಯಾಂತರ ಅಭಿಮಾನಿಗಳನ್ನು ವಿರಾಟ್ ಹೊಂದಿದ್ದಾರೆ. ಆದರೆ ಅವರ ಜೀವನದಲ್ಲಿ ಕೊಹ್ಲಿ ಈ 6 ಜನರಿಗೆ ಮಾತ್ರ ಅತೀ ಪ್ರಾಮುಖ್ಯತೆಯನ್ನು ನೀಡುತ್ತಾರೆ.

1. ತಂದೆ-ತಾಯಿ: ಪ್ರೇಮ್ ಕೊಹ್ಲಿ ಮತ್ತು ಸರೋಜ್ ಕೊಹ್ಲಿ ಅವರ ಮುದ್ದಿನ ಮಗ ವಿರಾಟ್. ತನ್ನ ಯಶಸ್ಸಿಗೆ ಬೆನ್ನೆಲುಬಾಗಿರುವ ಪೋಷಕರನ್ನ ವಿರಾಟ್ ಎಲ್ಲರಿಗಿಂತ ಎತ್ತರದ ಸ್ಥಾನದಲ್ಲಿರಿಸಿ ಗೌರವಿಸುತ್ತಾರೆ. ವಿರಾಟ್ ತಂದೆ ಪ್ರೇಮ್ ಕೊಹ್ಲಿ ಪೆಶಾವರದಲ್ಲಿ ವಕೀಲರಾಗಿ ಕಾರ್ಯನಿರ್ವಹಿಸುತ್ತಿದ್ದರು. 2006ರಲ್ಲಿ ಪಾರ್ಶ್ವ ವಾಯುವಿನಿಂದಾಗಿ ಪ್ರೇಮ್ ಕೊಹ್ಲಿ ಸಾವನ್ನಪ್ಪಿದ್ದರು. ವಿರಾಟ್ ತಮ್ಮ ತಂದೆ-ತಾಯಿಯನ್ನು ತಮ್ಮ ಯಶಸ್ಸಿನ ಸ್ಫೂರ್ತಿ ಎಂದು ತಿಳಿದಿದ್ದಾರೆ.

2. ಅಕ್ಕ-ಅಣ್ಣ: ಪ್ರೇಮ್ ಕೊಹ್ಲಿ ಮತ್ತು ಸರೋಜ್ ಕೊಹ್ಲಿ ದಂಪತಿಯ ಕೊನೆಯ ಹಾಗು ಮೂರನೇ ಮಗ ವಿರಾಟ್. ಅಕ್ಕ ಭಾವನಾ ಮತ್ತು ಅಣ್ಣ ವಿಕಾಸ್ ಇಬ್ಬರನ್ನು ವಿರಾಟ್ ಅತ್ಯಂತ ಗೌರವದಿಂದ ಕಾಣುತ್ತಾರೆ. ಈ ಇಬ್ಬರನ್ನು ವಿರಾಟ್ ತಮ್ಮ ಮಾರ್ಗದರ್ಶಕರ ಸ್ಥಾನದಲ್ಲಿ ಇರಿಸಿದ್ದಾರೆ.

3. ಸೋದರಳಿಯ: ಮೈದಾನದಲ್ಲಿ ರನ್ ಗಳ ಸುರಿಮಳೆ ಸುರಿಸುವ ವಿರಾಟ್ ಅತ್ಯಂತ ಕಟ್ಟು ನಿಟ್ಟಿನ ಸಿಪಾಯಿಯಂತೆ ಕಾಣುತ್ತಾರೆ. ಆದರೆ ಮನೆಯಲ್ಲಿ ತಮ್ಮ ಸೋದರಳಿಯನೊಂದಿಗೆ ಹೊಸ ರೂಪದಲ್ಲಿ ಕಾಣಸಿಗುತ್ತಾರೆ. ಮುದ್ದಾಗಿರುವ ಅಳಿಯನೊಂದಿಗೆ ತಾವು ಸಹ ಚಿಕ್ಕ ಹುಡುಗನಂತೆಯೇ ಇರುತ್ತಾರೆ.

4. ಬಾಲ್ಯದ ಕೋಚ್: ಇನ್ನು ಕ್ರಿಕೆಟ್ ಮೂಲಕವೇ ಹೆಸರು ಮಾಡಿರುವ ವಿರಾಟ್ ತಮ್ಮ ಬಾಲ್ಯದ ಕೋಚ್ ರಾಜ್‍ಕುಮಾರ್ ಶರ್ಮಾರನ್ನು ಇಂದಿಗೂ ಮರೆತಿಲ್ಲ. ರಾಜ್‍ಕುಮಾರ್ ಶರ್ಮಾ ಅವರನ್ನು ಕೇವಲ ಕೋಚ್ ಅಂತ ಕಾಣದೇ ಮನೆಯ ಸದಸ್ಯರಂತೆ ಕಾಣುತ್ತಾರೆ.

ಈ ಮೇಲಿನ ಆರು ಜನರು ವಿರಾಟ್ ಜೀವನದಲ್ಲಿ ಎಷ್ಟು ಪ್ರಮುಖರೋ ಅಷ್ಟೇ ಮಹತ್ವದ ಪ್ರೀತಿಯ ಸ್ಥಾನವನ್ನು ಗೆಳತಿ ಅನುಷ್ಕಾ ಶರ್ಮಾರಿಗೆ ನೀಡಿದ್ದಾರೆ. ಖಾಸಗಿಯಾಗಿ ಭಾಗವಹಿಸುವ ಹೆಚ್ಚಿನ ಕಾರ್ಯಕ್ರಮಗಳಲ್ಲಿ ವಿರಾಟ್ ಜೊತೆ ಅನುಷ್ಕಾ ಕಾಣಿಸುತ್ತಾರೆ. ಅನುಷ್ಕಾ ಮತ್ತು ವಿರಾಟ್ ಇಬ್ಬರು ಆಪ್ತ ಕುಟುಂಬ ಸದಸ್ಯರ ಸಮ್ಮುಖದಲ್ಲಿ ಇಟಲಿಯಲ್ಲಿ ಮದುವೆ ಆಗಲಿದ್ದಾರೆ ಎಂಬ ಸುದ್ದಿಯೊಂದು ಕೇಳಿ ಬರುತ್ತಿದೆ. ಈ ಸುದ್ದಿಗೆ ಪುಷ್ಠಿ ನೀಡುವಂತೆ ಅನುಷ್ಕಾ ಶರ್ಮಾ ಕುಟುಂಬಸ್ಥರು ಗುರುವಾರ ಮುಂಬೈ ವಿಮಾನ ನಿಲ್ದಾಣದಿಂದ ಭಾರೀ ಲಗೇಜ್ ಗಳೊಂದಿಗೆ ಇಟಲಿಯತ್ತ ಪ್ರಯಾಣ ಬೆಳೆಸಿದ್ದಾರೆ.

Click to comment

Leave a Reply

Your email address will not be published. Required fields are marked *