Connect with us

Cricket

ಅಬ್ಬಾ, ಮದ್ವೆ ನಂತರ ವಿರಾಟ್-ಅನುಷ್ಕಾ ಇಷ್ಟು ಕೋಟಿ ಬೆಲೆಯ ಅಪಾರ್ಟ್ ಮೆಂಟ್‍ನಲ್ಲಿ ವಾಸವಾಗ್ತಾರೆ!

Published

on

ಮುಂಬೈ: ತಾರಾ ಜೋಡಿಗಳಾದ ವಿರಾಟ್ ಕೊಹ್ಲಿ ಮತ್ತು ಅನುಷ್ಕಾ ಶರ್ಮಾ ಈ ವಾರದಲ್ಲಿ ಇಟಲಿಯಲ್ಲಿ ಮದುವೆ ಆಗಲಿದ್ದಾರೆ ಎಂದು ಸುದ್ದಿ ಹರಿದಾಡುತ್ತಿದೆ. ಈ ಸುದ್ದಿಯ ನಡುವೆಯೇ ವಿರಾಟ್ ಮುಂಬೈ ನಗರದಲ್ಲಿ ಮದುವೆಯ ನಂತರ ವಾಸಿಸಲು ಹೊಸ ಫ್ಲ್ಯಾಟ್ ಖರೀದಿಸಿರುವ ಮಾಹಿತಿಯೊಂದು ಹೊರಬಿದ್ದಿದೆ.

ಈಗಾಗಲೇ ವಿರಾಟ್ ಮುಂಬೈ ನಗರದ ವರ್ಲಿಯಲ್ಲಿರುವ `ಓಂಕಾರ್ 1973′ ಬಿಲ್ಡಿಂಗ್ ನಲ್ಲಿ ಹೊಸ ಫ್ಲ್ಯಾಟ್ ಮುಂಗಡವಾಗಿ ಕಾಯ್ದಿರಿಸಿದ್ದಾರೆ. ಕೊಹ್ಲಿ ಮದುವೆ ನಂತರದ ದಿನಗಳನ್ನು ಈ ಫ್ಲ್ಯಾಟ್ ನಲ್ಲಿಯೇ ಕಳೆಯಲಿದ್ದಾರೆ ಎಂದು ಹೇಳಲಾಗುತ್ತಿದೆ.

ಫ್ಲ್ಯಾಟ್ ವಿಶೇಷತೆ: ಈಗಾಗಲೇ ಕೊಹ್ಲಿ ಅಂದಾಜು 34 ಕೋಟಿ ರೂ. ನೀಡಿ ಫ್ಲ್ಯಾಟ್ ಬುಕ್ ಮಾಡಿದ್ದಾರೆ. ಓಂಕಾರ್ ಬಿಲ್ಡಿಂಗ್ ನಗರದ ಪ್ರತಿಷ್ಠತಿ ಸೆಲಬ್ರೆಟಿಗಳು ವಾಸವಾಗಿರುವ ಕಟ್ಟಡವಾಗಿದೆ. ಫ್ಲ್ಯಾಟ್ ನಿಂದಲೇ ಸಮುದ್ರದ ವಿಹಂಗಮ ನೋಟವನ್ನು ಕಣ್ತುಂಬಿಸಿಕೊಳ್ಳಬಹುದು. ಓಂಕಾರ್ ಬಿಲ್ಡಿಂಗ್ ನ 35ನೇ ಅಂತಸ್ತಿನಲ್ಲಿ 7171 ಸೆಕ್ವೇರ್ ಫೀಟ್ ವಿಸ್ತೀರ್ಣವಳ್ಳು ಫ್ಲ್ಯಾಟ್ ನ್ನು ಕೊಹ್ಲಿ ಖರೀದಿಸಿದ್ದಾರೆ.

ಇನ್ನೂ ಇದೇ ಕಟ್ಟಡದಲ್ಲಿ ಕೊಹ್ಲಿ ಗೆಳಯ ಯುವರಾಜ್ ಸಿಂಗ್ ಸಹ 29ನೇ ಅಂತಸ್ತಿನಲ್ಲಿ ಫ್ಲ್ಯಾಟ್ ಖರೀದಿಸಿದ್ದಾರೆ. ಈ ಕಟ್ಟಡದಲ್ಲಿ ಕೇವಲ ಕ್ರೀಡಾಪಟುಗಳಲ್ಲದೇ ರಾಜಕಾರಣಿಗಳು, ಉದ್ಯಮದಾರರು, ಸಿನಿಮಾ ತಾರೆಯರು ಫ್ಲ್ಯಾಟ್ ಬುಕ್ ಮಾಡಿದ್ದಾರೆ.

Click to comment

Leave a Reply

Your email address will not be published. Required fields are marked *