ಕ್ಯಾನ್ಬೆರಾ: ಶಾರ್ಕ್‍ಗೆ ಆಹಾರ ಹಾಕುವಾಗ ಅದು ಮಹಿಳೆಯನ್ನು ಎಳೆಯಲು ಪ್ರಯತ್ನಿಸಿದ್ದು, ಮಹಿಳೆ ಸ್ವಲ್ಪದರಲ್ಲೇ ಪಾರಾದ ಘಟನೆ ಆಸ್ಟ್ರೇಲಿಯಾದಲ್ಲಿ ನಡೆದಿದೆ.
ಮೆಲ್ಸಿನಾ(34) ಶಾರ್ಕ್ ದಾಳಿಯಿಂದ ಪಾರಾದ ಮಹಿಳೆ. ಮೆಲ್ಸಿನಾ ರಜೆ ಕಳೆಯಲು ದುಗಾಂಗ್ ಬೇಗೆ ಬಂದಿದ್ದಳು. ಆಗ ಅಲ್ಲಿ ಟ್ವಾನಿ ನರ್ಸ್ ಶಾರ್ಕ್‍ಗೆ ಮೆಲ್ಸಿನಾ ತನ್ನ ನಾಲ್ಕು ಜನ ಸ್ನೇಹಿತರ ಜೊತೆ ಸೇರಿ ತನ್ನ ಕೈಯಾರೆ ಆಹಾರ ಹಾಕುತ್ತಿದ್ದಳು.
Advertisement
ಮಲ್ಸಿನಾ ಹಾಗೂ ಆಕೆಯ ಸ್ನೇಹಿತರು ಆಹಾರ ನೀಡುವಾಗ ಶಾರ್ಕ್‍ಗಳು ಅವರ ವಿಹಾರ ನೌಕೆ ಹತ್ತಿರ ಬಂದಿದೆ. ಆ ವೇಳೆ ಮಲ್ಸಿನಾ ತನ್ನ ಕೈಯಾರೇ ಆಹಾರ ಹಾಕುವಾಗ ಶಾರ್ಕ್‍ವೊಂದು ತಕ್ಷಣ ಆಕೆ ಕೈ ಬೆರಳನ್ನು ಹಿಡಿದು ನೀರಿನೊಳಗೆ ಎಳೆಯಲು ಪ್ರಯತ್ನಿಸಿತ್ತು. ಆಗ ಸ್ನೇಹಿತರು ಆಕೆಯನ್ನು ಮೇಲೆಳೆದು ಪ್ರಾಣಾಪಾಯದಿಂದ ಪಾರು ಮಾಡಿದ್ದಾರೆ.
Advertisement
ಶಾರ್ಕ್ ನನ್ನ ಬೆರಳನ್ನು ಹಿಡಿದಾಗ ಆ ಅಪಾರ ಒತ್ತಡದಿಂದ ಬೆರಳಿನ ಮೂಳೆ ಚೂರು ಚೂರು ಆಯ್ತು ಎಂದುಕೊಂಡೆ. ಆದರೆ ಯಾವುದೇ ಹಾನಿ ಆಗಿಲ್ಲ ಎಂದು ಮೆಲ್ಸಿನಾ ಅವರು ಮಾಧ್ಯಮವೊಂದಕ್ಕೆ ಪ್ರತಿಕ್ರಿಯಿಸಿದ್ದಾಳೆ.
Advertisement
ಸದ್ಯ ಮಲ್ಸಿನಾಗೆ ಫ್ರಾಕ್ಚರ್ ಹಾಗೂ ಟೋರ್ನ್ ಲಿಗಾಮೆಂಟ್ ಆಗಿದ್ದು, ತನ್ನ ರಜೆಯನ್ನು ಪೂರ್ಣಗೊಳಿಸಿ ಪರ್ತ್ ಹಿಂತಿರುಗುವುದಾಗಿ ಹೇಳಿದ್ದಾಳೆ. ಅಲ್ಲದೇ ತನ್ನ ಬೆರಳು ಶೀಘ್ರದಲ್ಲೇ ಸರಿ ಹೋಗುವುದಾಗಿ ಹೇಳಿಕೊಂಡಿದ್ದಾಳೆ.
Advertisement
ಶಾರ್ಕ್ ನನ್ನ ಮೇಲೆ ದಾಳಿ ನಡೆಸಿಲ್ಲ. ನನ್ನ ಚಿಕ್ಕ ಬೇಜವಾಬ್ದಾರಿಯಿಂದ ಈ ಘಟನೆ ನಡೆದಿದೆ ಎಂದು ಮೆಲ್ಸಿನಾ ತಿಳಿಸಿದ್ದಾಳೆ. ಸದ್ಯ ಶಾರ್ಕ್ ಮೆಲ್ಸಿನಾ ಮೇಲೆ ದಾಳಿ ಮಾಡಿರುವ ವಿಡಿಯೋವನ್ನು ಆಕೆಯ ಸ್ನೇಹಿತರು ಸೆರೆ ಹಿಡಿದಿದ್ದು, ಈ ವಿಡಿಯೋ ಈಗ ಸಾಮಾಜಿಕ ಜಾಲತಾಣದಲ್ಲಿ ಸಾಕಷ್ಟು ವೈರಲ್ ಆಗಿದೆ.