ಕೊಲಂಬಿಯಾ: ಚಿಂಪಾಂಜಿಯೊಂದು ಮೂರು ಹುಲಿ ಮರಿಗಳನ್ನು ಮುದ್ದಾಗಿ ನೋಡಿಕೊಳ್ಳುತ್ತಿರುವ ಪರಿ ನೋಡಿದ್ರೆ ಅಮ್ಮ ತನ್ನ ಮಕ್ಕಳನ್ನು ನೋಡಿಕೊಳ್ಳುವ ರೀತಿಯೇ ನೆನಪಾಗುತ್ತೆ. ಮನುಷ್ಯರನ್ನೆ ಹೋಲುವ ಈ ಚಿಂಪಾಂಜಿಗಳು ತಮ್ಮ ಮಕ್ಕಳನ್ನು ತುಂಬಾ ಜವಾಬ್ದಾರಿಯಿಂದ ನೋಡಿಕೊಳ್ಳುತ್ತೆ. ಆದರೆ ಇಲ್ಲೊಂದು ಚಿಂಪಾಂಜಿ ತನ್ನ ಸ್ವಂತ ಮಕ್ಕಳತ್ತೆ ಹುಲಿಗಳನ್ನು ನೋಡಿಕೊಳ್ಳುವ ಕ್ಯೂಟ್ ವೀಡಿಯೋ ಸೋಶಿಯಲ್ ಮೀಡಿಯಾದಲ್ಲಿ ಫುಲ್ ವೈರಲ್ ಆಗಿದೆ.
Advertisement
ಈ ಚಿಂಪಾಂಜಿ ಹೆಣ್ಣಲ್ಲ ಗಂಡು. 3 ಮರಿ ಹುಲಿಗಳಿಗೆ ಪ್ರೀತಿಯಿಂದ ಆಹಾರ ನೀಡಿ ಆಟವಾಡುತ್ತ ತನ್ನ ಸಮಯವನ್ನು ಎಂಜಾಯ್ ಮಾಡಿಕೊಂಡು ಕಳೆಯುತ್ತಿರುವ ಸುಂದರ ವೀಡಿಯೋ ನೋಡಿದವರಿಗೆ ಸಂತೋಷವಾಗದೆ ಇರಲು ಸಾಧ್ಯವೇ ಇಲ್ಲ. ಈ ವೀಡಿಯೋ ನೆಟ್ಟಿಗರನ್ನು ಭಾವುಕರನ್ನಾಗಿಸಿದೆ. ದಕ್ಷಿಣ ಕೆರೊಲಿನಾದ ಮಿರ್ಟಲ್ ಬೀಚ್ ಸಫಾರಿಯಲ್ಲಿ ಈ ಮುದ್ದಾದ ವೀಡಿಯೋವನ್ನು ಸೆರೆಯಿಡಿಯಲಾಗಿದೆ. ಇದನ್ನೂ ಓದಿ: ಹಲಸಿನ ಹಣ್ಣಿಗಾಗಿ ಗಜರಾಜನ ಸರ್ಕಸ್ – ಕೊನೆಗೆ ಏನಾಯ್ತು ನೋಡಿ
Advertisement
Any suitable caption for this beautiful clip?…. pic.twitter.com/NBWQzXSnf7
— Dr.Samrat Gowda IFS (@IfsSamrat) June 30, 2022
Advertisement
ಈ ಸ್ಟೋರಿಯಲ್ಲಿ ಮತ್ತೊಂದು ಟ್ವಿಸ್ಟ್ ಎಂದರೇ ದಕ್ಷಿಣ ಕೆರೊಲಿನಾದಲ್ಲಿ ಈ ಮೂರು ಹುಲಿ ಮರಿಗಳನ್ನು ದತ್ತು ತೆಗೆದುಕೊಂಡಿದ್ದು, ಅವುಗಳಿಗೆ ‘ಬಾಡಿಗೆ ತಾಯಿ’ಯಾಗಿ ಈ ಚಿಂಪಾಂಜಿಯನ್ನು ನೇಮಕ ಮಾಡಲಾಗಿದೆ. ಆ ಕೆಲಸವನ್ನು ಚಿಂಪಾಂಜಿ ಬಹಳ ಅಚ್ಚುಕಟ್ಟಾಗಿ ನಿಭಾಯಿಸುತ್ತಿದೆ.
Advertisement
ವೀಡಿಯೋದಲ್ಲಿ ಏನಿದೆ?
ಚಿಂಪಾಂಜಿ ಮುದ್ದಾಗಿರುವ ಹುಲಿ ಮರಿಗಳೊಂದಿಗೆ ಆಟವಾಡುತ್ತ ಆಹಾರ ನೀಡುವುದು. ತಾಯಿಯಂತೆಯೇ, ಚಿಂಪಾಂಜಿ ಮರಿ ಹುಲಿಗಳಿಗೆ ಬಾಟಲಿಯಿಂದ ಹಾಲು ಉಣಿಸುವುದನ್ನು ಕಾಣಬಹುದು. ನಂತರ ಅವುಗಳನ್ನು ಅಪ್ಪಿಕೊಳ್ಳುವುದು ಮತ್ತು ಮುದ್ದಾಡುವುದನ್ನು ಕಾಣಬಹುದು. ಇದನ್ನೂ ಓದಿ: ಸಾವಿನ ದವಡೆಯಿಂದ ಹದ್ದುವನ್ನು ಕಾಪಾಡಿದ ಮೀನುಗಾರ
ನೆಟ್ಟಿಗರ ಕಾಮೆಂಟ್
ಚಿಂಪಾಂಜಿಯ ದಯೆ ಮತ್ತು ಸಹಾನುಭೂತಿಯ ಗೆಸ್ಚರ್ ನೆಟ್ಟಿಗರ ಮನಸ್ಸನ್ನು ಗೆದ್ದಿದೆ. ಪ್ರಾಣಿಗಳು ಮನುಷ್ಯರಿಗಿಂತ ಉತ್ತಮವಾಗಿವೆ ಎಂದು ಹಲವರು ಪ್ರತಿಕ್ರಿಯಿಸಿದ್ದಾರೆ. ಒಬ್ಬರು, ಪ್ರೀತಿಯು ಜೀವನದ ಪ್ರತಿಯೊಂದು ರೂಪವನ್ನು ಬಂಧಿಸುವ ಮತ್ತು ರಕ್ಷಿಸುವ ಶಕ್ತಿಯಾಗಿದೆ. ನಾವೆಲ್ಲರೂ ಮನುಷ್ಯರನ್ನು ಮಾತ್ರವಲ್ಲದೆ ದೇವರ ಇತರ ಸೃಷ್ಟಿಗಳನ್ನೂ ಸಹ ಕಾಳಜಿ ವಹಿಸಲು ಪ್ರಾರಂಭಿಸಿದರೆ, ನಾವು ಖಂಡಿತವಾಗಿಯೂ ಜೀವನವನ್ನು ಉಳಿಸಿಕೊಳ್ಳಲು ಸಹಾಯ ಮಾಡಬಹುದು ಎಂದು ಕಾಮೆಂಟ್ ಮಾಡಿದ್ದಾರೆ.