– ಏನ್ ಬೇಕಾದ್ರೂ ಮಾಡ್ಕೊಳಿ ಅಂತ ಮಹಿಳೆಯರಿಗೆ ಆವಾಜ್
ನವದೆಹೆಲಿ: ದೆಹಲಿಯ ಮೆಟ್ರೋ ನಿಲ್ದಾಣದ (Delhi Metro Station) ಲಿಫ್ಟ್‌ನಲ್ಲಿ ವೃದ್ಧನೊಬ್ಬ ಮೂತ್ರ ವಿಸರ್ಜಿಸಿ ಮುಜುಗರ ಉಂಟು ಮಾಡಿರುವ ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದೆ. ವ್ಯಕ್ತಿಯ ಅಸಭ್ಯ ನಡೆ ಕಂಡು ನೆಟ್ಟಿಗರು ಕ್ಯಾಕರಿಸಿ ಉಗಿದಿದ್ದಾರೆ.
View this post on Instagram
ಹೌದು. ದೆಹಲಿ ಮೆಟ್ರೋ ನಿಲ್ದಾಣದಲ್ಲಿ ನಡೆಯುವ ವಿಚಿತ್ರ ಘಟನೆಗಳು ಆಗಾಗ್ಗೆ ಸೋಷಿಯಲ್ ಮೀಡಿಯಾದಲ್ಲಿ ಸದ್ದು ಮಾಡುತ್ತಲೇ ಇರುತ್ತವೆ. ಅಂತಹದ್ದೇ ಘಟನೆ ಈಗ ಕಲ್ಕಾಜಿ ಮೆಟ್ರೋ ನಿಲ್ದಾಣದಲ್ಲಿ ನಡೆದಿದೆ. ವೃದ್ಧ ವ್ಯಕ್ತಿಯೊಬ್ಬ ಮೆಟ್ರೋ ನಿಲ್ದಾಣದ ಲಿಫ್ಟ್‌ನಲ್ಲಿ ಮಹಿಳೆಯರ ಮುಂದೆಯೇ ಮೂತ್ರ ವಿಸರ್ಜನೆ ಮಾಡಿದ್ದಾನೆ. ಇದನ್ನೂ ಓದಿ: ವಿಜಯ್ ಸಿಎಂ ಆದ್ರೆ ನನಗೇಕೆ ಅಸೂಯೆ? ನಾನ್ ಅಷ್ಟೊಂದು ಚೀಪ್ ಅಲ್ಲ – ಟೀಕೆಗಳಿಗೆ ತಲೈವಾ ತಿರುಗೇಟು
ಇದನ್ನು ಗಮನಿಸಿದ ಮಹಿಳೆಯೊಬ್ಬರು ಆತನನ್ನ ಪ್ರಶ್ನೆ ಮಾಡಿದ್ದಾರೆ. ಅದಕ್ಕೆ ವೃದ್ಧ ನಾನು ಮೂತ್ರ ವಿಸರ್ಜನೆ ಮಾಡಿದ್ದೇನೆ. ಏನ್ ಬೇಕಾದ್ರೂ ಮಾಡ್ಕೋಳಿ ಅಂತ ಆವಾಜ್ ಹಾಕಿದ್ದಾನೆ. ಘಟನೆ ವಿಡಿಯೋ ವೈರಲ್ ಆಗ್ತಿದ್ದಂತೆ ಎಚ್ಚೆತ್ತ ದೆಹಲಿ ಮೆಟ್ರೋ ಪೊಲೀಸರು ಕ್ರಮ ಕೈಗೊಳ್ಳಲು ಮುಂದಾಗಿದ್ದಾರೆ. ಇದನ್ನೂ ಓದಿ: ಹಾರ್ಮುಜ್ ದಾಟಿ ಸುರಕ್ಷಿತವಾಗಿ ಭಾರತಕ್ಕೆ ಬಂತು 20,000 ಟನ್ LPG ಟ್ಯಾಂಕರ್

ಅಂದಹಾಗೆ ಮೇ 15 ರ ರಾತ್ರಿ 9:40 ರ ಸುಮಾರಿಗೆ ಈ ಘಟನೆ ನಡೆದಿದೆ ಎಂದು ಮೆಟ್ರೋ ಡಿಸಿಪಿ ಬಿ. ಭರತ್ ರೆಡ್ಡಿ ತಿಳಿಸಿದ್ದಾರೆ. ಜಾಮಿಯಾ ನಗರ ಮೆಟ್ರೋ ನಿಲ್ದಾಣದಿಂದ ಫರಿದಾಬಾದ್‌ಗೆ ಪ್ರಯಾಣಿಸುತ್ತಿದ್ದ ವೃದ್ಧ ಕಲ್ಕಾಜಿ ನಿಲ್ದಾಣದಲ್ಲಿ ಮೆಟ್ರೋ ಮಾರ್ಗ ಬದಲಿಸಬೇಕಿತ್ತು. ಈ ಸಂದರ್ಭದಲ್ಲಿ ವೃದ್ಧನಿಗೆ ಮೂತ್ರ ವಿಸರ್ಜನೆಗೆ ಅರ್ಜೆಂಟ್ ಆಗಿದೆ. ಹತ್ತಿರದಲ್ಲಿ ಶೌಚಾಲಯಕ್ಕಾಗಿ ಹುಡುಕಾಡಿದ್ದಾರೆ. ತಕ್ಷಣಕ್ಕೆ ಯಾವುದೇ ಶೌಚಾಲಯ ಸಿಗದಿದ್ದ ಕಾರಣ ಲಿಫ್ಟ್‌ನಲ್ಲಿ ಬಾಟಲಿ ಬಳಸಿ ಮೂರ್ತ ವಿಸರ್ಜನೆ ಮಾಡಿದ್ದಾನೆ. ಈ ವೇಳೆ ಕೆಲಸ ಮಹಿಳೆಯರು ಅದನ್ನ ವಿಡಿಯೋ ಮಾಡಿದ್ದಾರೆ ಎಂದು ಪೊಲೀಸರು ತಿಳಿಸಿದ್ದಾರೆ.
ಪೊಲೀಸರ ತನಿಖೆ ವೇಳೆ, ವೃದ್ಧ ವ್ಯಕ್ತಿ ಅನಾರೋಗ್ಯ ಸಮಸ್ಯೆಯಿಂದ ಬಳಲುತ್ತಿದ್ದರು. ಆದ್ದರಿಂದ ಮೂತ್ರ ವಿಸರ್ಜನೆ ಕಂಟ್ರೋಲ್ ಮಾಡಲು ಆಗಿಲ್ಲ. ಆತ ಎಲ್ಲೇ ಹೋದ್ರೂ ತಮ್ಮೊಂದಿಗೆ ಅದಕ್ಕಾಗಿ ಬಾಟಲ್ ಕೊಂಡೊಯ್ಯುತ್ತಾರೆ ಎಂದು ತೀಳಿದುಬಂದಿದೆ. ಇದನ್ನೂ ಓದಿ: ಹೊತ್ತಿ ಉರಿದ ತಿರುವನಂತಪುರಂ To ದೆಹಲಿ ರಾಜಧಾನಿ ಎಕ್ಸ್‌ಪ್ರೆಸ್ ರೈಲಿನ ಎಸಿ ಕೋಚ್ – ತಪ್ಪಿದ ಭಾರೀ ಅನಾಹುತ

