ನವದೆಹಲಿ: ಸೇತುವೆಯ ಕೆಳಗೆ ವಿಮಾನ ಸಿಕ್ಕಿ ಹಾಕಿಕೊಂಡಿದ್ದು, ಈ ವೀಡಿಯೋ ಸೋಶಿಯಲ್ ಮೀಡಿಯಾದಲ್ಲಿ ಭಾರೀ ವೈರಲ್ ಆಗಿದೆ.
ದೆಹಲಿ ವಿಮಾನ ನಿಲ್ದಾಣದ ಬಳಿ ರೆಕ್ಕೆಗಳಿಲ್ಲದ ವಿಮಾನವು ದೆಹಲಿ-ಗುರುಗ್ರಾಮ್ ಹೆದ್ದಾರಿಯ ಬ್ರಿಡ್ಜ್ ಕೆಳಗೆ ಸಿಲುಕಿಕೊಂಡಿದ್ದು, ನಂತರ ಈ ವಿಮಾನವನ್ನು ಬೇರೆ ಕಂಡೆ ಸಾಗಿಸಲಾಯಿತು ಎಂದು ತಿಳಿದುಬಂದಿದೆ. ಚಿತ್ರದಲ್ಲಿ ಕಂಡು ಬಂದಂತೆ ಈ ವಿಮಾನದಿಂದ ಎಲ್ಲ ಕಡೆ ಟ್ರಾಫಿಕ್ ಆಗಿಲ್ಲ ಎಂದು ತಿಳಿಯುತ್ತೆ. ಹೆದ್ದಾರಿಯ ಒಂದು ಬದಿಯಲ್ಲಿ ವಾಹನಗಳು ಹಾದು ಹೋಗುವುದನ್ನು ನಾವು ಕಾಣಬಹುದು. ಒಂದು ಕಡೆ ಮಾತ್ರ ವಿಮಾನ ಸಿಕ್ಕಿಕೊಂಡಿದ್ದು, ಆ ಜಾಗದಲ್ಲಿ ಮಾತ್ರ ಟ್ರಾಫಿಕ್ ಆಗಿದೆ. ಇದನ್ನೂ ಓದಿ: ಹಳ್ಳದ ಕಂಟಕ – ಶಾಲೆಯನ್ನೇ ತೊರೆದ ವಿದ್ಯಾರ್ಥಿಗಳು!
Advertisement
Advertisement
ಈ ವೀಡಿಯೋವನ್ನು ಸೋಶಿಯಲ್ ಮೀಡಿಯಾದಲ್ಲಿ ಸಾವಿರಕ್ಕೂ ಹೆಚ್ಚು ಬಾರಿ ಶೇರ್ ಮಾಡಲಾಗಿದ್ದು, ಜನರು ಇದನ್ನು ನೋಡಿ ಆಶ್ಚರ್ಯ ವ್ಯಕ್ತಪಡಿಸಿದ್ದಾರೆ. ಏರ್ ಇಂಡಿಯಾ ಈ ಕುರಿತು ಮಾಧ್ಯಮಕ್ಕೆ ಮಾಹಿತಿ ನೀಡಿದ್ದು, ಸೇತುವೆಯಲ್ಲಿ ಸಿಕ್ಕಿಕೊಂಡ ವಿಮಾನದ ನೋಂದಣಿ ರದ್ದುಗೊಳಿಸಿ ಮಾರಾಟ ಮಾಡಲಾಗಿದೆ. ಈ ವಿಮಾನವನ್ನು ಶನಿವಾರ ರಾತ್ರಿ ಸಾಗಿಸುತ್ತಿದ್ದಾಗ ಈ ಘಟನೆ ಸಂಭವಿಸಿದೆ ಎಂದು ತಿಳಿಸಿದೆ.
Advertisement
ಇದು ಏರ್ ಇಂಡಿಯಾದ ಪತ್ತೆಹಚ್ಚಿದ ಈ ವಿಮಾನ ಸ್ಕ್ರ್ಯಾಪ್ ಮಾಡಿದ ವಿಮಾನವಾಗಿದ್ದು, ಅದನ್ನು ಮಾರಾಟ ಮಾಡಲಾಗಿದೆ. ಅದು ಅಲ್ಲದೇ ಈ ವಿಮಾನದೊಂದಿಗೆ ಏರ್ ಇಂಡಿಯಾ ಯಾವುದೇ ರೀತಿಯ ಸಂಬಂಧವನ್ನು ಹೊಂದಿಲ್ಲ ಎಂದು ತಿಳಿದುಬಂದಿದೆ. ಇದನ್ನೂ ಓದಿ: ಅತ್ಯಾಚಾರಕ್ಕೆ ನಿರಾಕರಿಸಿದ ಗೃಹಿಣಿಗೆ ಪೆಟ್ರೋಲ್ ಸುರಿದು ಬೆಂಕಿ ಹಚ್ಚಿದ ಪಾಪಿ
Advertisement
#WATCH An @airindiain plane ✈️ (not in service) got stuck under foot over bridge. Can anyone confirm the date and location?
The competition starts now???? pic.twitter.com/pukB0VmsW3
— Ashoke Raj (@Ashoke_Raj) October 3, 2021
ಈ ವಿಮಾನ ದೆಹಲಿ ವಿಮಾನ ನಿಲ್ದಾಣಕ್ಕೆ ಸೇರಿಲ್ಲ. ಅದು ಅಲ್ಲದೇ ಈ ವಿಮಾನವನ್ನು ರೆಕ್ಕೆಗಳಿಲ್ಲದೇ ಸಾಗಿಸಲಾಗುತ್ತಿತ್ತು. ಇದನ್ನು ನೋಡಿದರೆ ಸ್ಕ್ರ್ಯಾಪ್ ಮಾಡಿದ ರೀತಿ ಕಾಣಿಸುತ್ತಿದ್ದು, ಚಾಲಕನ ತಪ್ಪಿನಿಂದ ಈ ಘಟನೆ ಸಂಭವಿಸಿದೆ ಎಂದು ಅಧಿಕಾರಿಗಳು ಸ್ಪಷ್ಟಪಡಿಸಿದ್ದಾರೆ.
ಈ ರೀತಿಯ ರಸ್ತೆಯಲ್ಲಿ ಸಿಲುಕಿರುವ ವಿಮಾನವನ್ನು ನೋಡಿ ದಾರಿಹೋಕರು ಗೊಂದಲಕ್ಕೀಡಾಗಿ ಆಶ್ಚರ್ಯ ಪಟ್ಟಿಕೊಂಡಿದ್ದು, ಇದೇ ಮೊದಲಲ್ಲ. ಈ ಹಿಂದೆ 2019ರಲ್ಲಿ ಕೈಬಿಟ್ಟ ಇಂಡಿಯಾ ಪೋಸ್ಟ್ ವಿಮಾನವನ್ನು ಸಾಗಿಸುತ್ತಿದ್ದ ಟ್ರಕ್ ಪಶ್ಚಿಮ ಬಂಗಾಳದ ದುರ್ಗಾಪುರದಲ್ಲಿ ಸೇತುವೆಯ ಕೆಳಗೆ ಸಿಲುಕಿಕೊಂಡಿತ್ತು.