ಬೆಂಗಳೂರು: ಇರಾನ್‌ನಲ್ಲಿ (Iran) ಒಂದೆಡೆ ಪ್ರತಿಭಟನೆಯ ಕಾವು ದಿನದಿಂದ ದಿನಕ್ಕೆ ಹೆಚ್ಚುತ್ತಿದೆ. ಮತ್ತೊಂದೆಡೆ ಯುದ್ಧದ ಕಾರ್ಮೋಡ ಆವರಿಸಿದೆ. ಇದರಿಂದ ಜನ ಭಯದಲ್ಲೇ ಜೀವನ ಸಾಗಿಸುವಂತಾಗಿದೆ. ತಮ್ಮ ಭದ್ರತೆಗಾಗಿ ಇರಾನ್ ತನ್ನ ನೌಕಾ ನೆಲೆಗಳನ್ನು ಬಂದ್ ಮಾಡಿವೆ. ಇದರ ಎಫೆಕ್ಟ್ ರಾಜ್ಯದ ಮೇಲಾಗಿದ್ದು, ರಾಜ್ಯಕ್ಕೆ ಇರಾನ್‌ನಿಂದ ಆಮದು ಆಗುತ್ತಿದ್ದ ಡ್ರೈಫ್ರೂಟ್ಸ್ (Dry Fruits) ಸರಬರಾಜಿಗೆ ಬ್ರೇಕ್ ಬಿದ್ದಿದೆ.
ಇರಾನ್ ದೇಶ ಮಧ್ಯಪ್ರಾಚ್ಯ ದೇಶಗಳಲ್ಲಿಯೇ ಹಣ್ಣು, ಒಣಹಣ್ಣುಗಳ ಉತ್ಪಾದನೆಗೆ ಹೆಸರುವಾಸಿ. ಇರಾನ್ ಡ್ರೈಫ್ರೂಟ್ಸ್ ಹಾಗೂ ಮಸಾಲೆ ಪದಾರ್ಥಗಳು ಅತ್ಯಂತ ಗುಣಮಟ್ಟದ್ದಾಗಿವೆ. ಈ ಹಿನ್ನೆಲೆ ಭಾರತ ಸೇರಿದಂತೆ ವಿವಿಧ ರಾಷ್ಟ್ರಗಳು ಡ್ರೈಫ್ರೂಟ್ಸ್‌ಗಳನ್ನು ಇರಾನ್‌ನಿಂದ ಕೊಳ್ಳುತ್ತವೆ. ಆದರೆ ಕಳೆದ ಎರಡು ಮೂರು ದಿನಗಳಿಂದ ಇರಾನ್‌ನ ಬಂಡಾರ್ ಅಬ್ಬಾಸ್ ಬಂದರು ಬಂದ್ ಆಗಿದೆ. ಈ ಹಿನ್ನೆಲೆ ಭಾರತ ಸೇರಿ ಹಲವು ದೇಶಗಳಿಗೆ ಮಸಾಲೆ ಐಟಂಗಳು ಹಾಗೂ ಡ್ರೈಫ್ರೂಟ್ಸ್ ರಫ್ತು ಬಂದ್ ಆಗಿದೆ. ಇದನ್ನೂ ಓದಿ: Union Budget 2026: ರಕ್ಷಣೆಯಿಂದ ಆಟೋಮೊಬೈಲ್‌ವರೆಗೆ; ಯಾವ್ಯಾವ ವಲಯಕ್ಕೆ ನಿರೀಕ್ಷೆ ಏನು?
ರಂಜಾನ್ ಹಬ್ಬದ ಹೊಸ್ತಿಲಿನಲ್ಲಿ ಅತೀ ಹೆಚ್ಚಾಗಿ ಡ್ರೈಫ್ರೂಟ್ಸ್ ಸೇಲ್ ಆಗುತ್ತವೆ. ಪವಿತ್ರ ರಂಜಾನ್ ತಿಂಗಳಲ್ಲಿ ಮುಸ್ಲಿಮರು ಕಟ್ಟುನಿಟ್ಟಾಗಿ ಉಪವಾಸ ಮಾಡುತ್ತಾರೆ. ಈ ಸಮಯದಲ್ಲಿ ಡ್ರೈ ಪ್ರೂಟ್ಸ್ ಅತ್ಯಂತ ಸಹಾಯಕವಾಗಿವೆ. ಈ ವರ್ಷ ರಂಜಾನ್ ಮಾಸ ಫೆಬ್ರವರಿ 17-18ರಿಂದ ಆರಂಭವಾಗುತ್ತಿದೆ. ಈಗ ಡ್ರೈಫ್ರೂಟ್ಸ್ ಪೂರೈಕೆ ಸ್ಥಗಿತವಾಗಿದ್ದು, ವ್ಯಾಪಾರಿಗಲ್ಲಿ ಆತಂಕ ಮೂಡಿಸಿದೆ. ಇದನ್ನೂ ಓದಿ: ತಂದೆ-ತಾಯಿ ಮಾರಾಟ ಮಾಡಿದ್ದ 6 ತಿಂಗಳ ಮಗು ಪತ್ತೆ; ಐವರು ಆರೋಪಿಗಳು ಅರೆಸ್ಟ್
ಇನ್ನೂ ಇರಾನ್ ನಿಂದ ರಾಜ್ಯಕ್ಕೆ ಪ್ರತಿ ತಿಂಗಳು ಸುಮಾರು 200 ಟನ್‌ನಷ್ಟು ಡ್ರೈಫ್ರೂಟ್ಸ್ ಸಪ್ಲೈ ಆಗುತ್ತಿತ್ತು. ಅದರಲ್ಲೂ ಬೆಂಗಳೂರಿಗೆ ಬರುತ್ತಿದ್ದ ಪ್ರಮುಖ ಡ್ರೈಫ್ರೂಟ್ಸ್‌ಗಳೆಂದರೆ ಮುಸ್ಲಿಮರು ಹೆಚ್ಚಾಗಿ ಬಳಸುವ ಮುಜಪತಿ ಖರ್ಜೂರ, ಗಸಗಸೆ, ನೆಟಾಲ್ ಒಣದ್ರಾಕ್ಷಿ, ಪಿಸ್ತಾ, ಪೈನಾಬೀಜ, ಮಾರ್ಮಾ ಬಾದಾಮಿ, ಯಾಲಕ್ಕಿ ಸಪ್ಲೈ ಆಗುತ್ತಿಲ್ಲ. ಇದರಿಂದ ಡಿಮ್ಯಾಂಡ್ ಹೆಚ್ಚಾಗಿದ್ದು, ಇವುಗಳ ಬೆಲೆ ಗಗನಕ್ಕೇರಲಿದೆ. ಈಗಾಗಲೇ ಪಿಸ್ತಾ ಸೇರಿದಂತೆ ಹಲವು ಡ್ರೈಫ್ರೂಟ್ಸ್ ಬೆಲೆಗಳು ನಿಧಾನವಾಗಿ ಏರಿಕೆಯಾಗುತ್ತಿವೆ. ಇದನ್ನೂ ಓದಿ: ತಂದೆಗೆ ಚಾಕು ಇರಿದು ತಲೆಗೆ ಗುಂಡು ಹಾರಿಸಿಕೊಂಡು ಆತ್ಮಹತ್ಯೆಗೆ ಶರಣಾದ ಅಪ್ರಾಪ್ತ ಮಗ
ಹೆಸರು – ಹಳೆಯ ದರ (ಕೆ.ಜಿಗೆ) – ಹೊಸ ದರ (ಕೆ.ಜಿಗೆ)
* ಬಾದಾಮಿ – 880 ರೂ. – 1,200 ರೂ.
* ಪಿಸ್ತಾ – 1,400 ರೂ. – 2,000 ರೂ.
* ಫೈನ್ ಬೀಜಗಳು – 10,000 ರೂ. – 12,000 ರೂ.
* ದ್ರಾಕ್ಷಿ – 600 ರೂ. – 1,000 ರೂ.
* ಖರ್ಜೂರ – 350 ರೂ. – 500 ರೂ.

