Public TVPublic TV
  • Home
  • State
  • LIVE
  • Latest
  • Districts
    • Bagalkot
    • Belagavi
    • Ballari
    • Bengaluru City
    • Bengaluru Rural
    • Bidar
    • Chamarajanagar
    • Chikkamagaluru
    • Chikkaballapur
    • Chitradurga
    • Dakshina Kannada
    • Davanagere
    • Dharwad
    • Gadag
    • Hassan
    • Haveri
    • Kalaburagi
    • Kodagu
    • Kolar
    • Koppal
    • Mandya
    • Mysuru
    • Raichur
    • Ramanagara
    • Shivamogga
    • Tumakuru
    • Udupi
    • Uttara Kannada
    • Vijayapura
    • Yadgir
  • National
  • World
  • Cinema
    • Sandalwood
    • Bollywood
    • South cinema
    • TV Shows
  • Stories
  • Crime
  • Court
  • Sports
    • Cricket
    • Other Sports
  • Tech
    • Smartphones
    • Telecom
  • Automobile
  • Food
    • Veg
    • Non Veg
  • Videos
    • Big Bulletin
    • Entertainment Videos
    • News Videos
Reading: ಯೋಗೇಶ್‌ಗೌಡ ಕೊಲೆ ಕೇಸಲ್ಲಿ ವಿನಯ್ ಕುಲಕರ್ಣಿ ದೋಷಿ – ಇಂದು ಶಿಕ್ಷೆ ಪ್ರಮಾಣ ಪ್ರಕಟ, ಎಲ್ಲರ ಚಿತ್ತ ಕೋರ್ಟ್‌ನತ್ತ
Share
Notification Show More
Font ResizerAa
Font ResizerAa
Public TVPublic TV
  • Home
  • State
  • LIVE
  • Latest
  • Districts
  • National
  • World
  • Cinema
  • Stories
  • Crime
  • Court
  • Sports
  • Tech
  • Automobile
  • Food
  • Videos
Search
  • Home
  • State
  • LIVE
  • Latest
  • Districts
    • Bagalkot
    • Belagavi
    • Ballari
    • Bengaluru City
    • Bengaluru Rural
    • Bidar
    • Chamarajanagar
    • Chikkamagaluru
    • Chikkaballapur
    • Chitradurga
    • Dakshina Kannada
    • Davanagere
    • Dharwad
    • Gadag
    • Hassan
    • Haveri
    • Kalaburagi
    • Kodagu
    • Kolar
    • Koppal
    • Mandya
    • Mysuru
    • Raichur
    • Ramanagara
    • Shivamogga
    • Tumakuru
    • Udupi
    • Uttara Kannada
    • Vijayapura
    • Yadgir
  • National
  • World
  • Cinema
    • Sandalwood
    • Bollywood
    • South cinema
    • TV Shows
  • Stories
  • Crime
  • Court
  • Sports
    • Cricket
    • Other Sports
  • Tech
    • Smartphones
    • Telecom
  • Automobile
  • Food
    • Veg
    • Non Veg
  • Videos
    • Big Bulletin
    • Entertainment Videos
    • News Videos
Follow US
  • Privacy Policy
  • CSR-Policy
  • Terms of Service
  • Complaints Redressal
  • Terms and Conditions
  • Contact
  • Election News

Home | Districts | Bengaluru City | ಯೋಗೇಶ್‌ಗೌಡ ಕೊಲೆ ಕೇಸಲ್ಲಿ ವಿನಯ್ ಕುಲಕರ್ಣಿ ದೋಷಿ – ಇಂದು ಶಿಕ್ಷೆ ಪ್ರಮಾಣ ಪ್ರಕಟ, ಎಲ್ಲರ ಚಿತ್ತ ಕೋರ್ಟ್‌ನತ್ತ

Bengaluru City

ಯೋಗೇಶ್‌ಗೌಡ ಕೊಲೆ ಕೇಸಲ್ಲಿ ವಿನಯ್ ಕುಲಕರ್ಣಿ ದೋಷಿ – ಇಂದು ಶಿಕ್ಷೆ ಪ್ರಮಾಣ ಪ್ರಕಟ, ಎಲ್ಲರ ಚಿತ್ತ ಕೋರ್ಟ್‌ನತ್ತ

Public TV
Last updated: April 16, 2026 7:30 am
Public TV
Share
2 Min Read
Vinay Kulkarni 3
SHARE

– 2 ವರ್ಷಕ್ಕಿಂತ ಹೆಚ್ಚು ಅವಧಿಯ ಶಿಕ್ಷೆಗೆ ಗುರಿಯಾದರೆ ಶಾಸಕತ್ವ ಅನರ್ಹ

ಧಾರವಾಡ: ಗ್ರಾಮೀಣ ಕ್ಷೇತ್ರದ ಕಾಂಗ್ರೆಸ್ ಶಾಸಕ, ಮಾಜಿ ಸಚಿವ ವಿನಯ್ ಕುಲಕರ್ಣಿ (Vinay Kulkarni) ಯೋಗೇಶ್‌ಗೌಡ (Yogesh Gowda) ಕೊಲೆ ಕೇಸಲ್ಲಿ ಅಪರಾಧಿಯಾಗಿದ್ದಾರೆ. ಈ ಸಂಬಂಧ ನ್ಯಾಯಾಲಯ ಇಂದು (ಏ.16) ಶಿಕ್ಷೆ ಪ್ರಮಾಣ ಪ್ರಕಟಿಸಲಿದೆ.

10 ವರ್ಷಗಳ ನಿರಂತರ ತನಿಖೆ, ವಿಚಾರಣೆ ಬಳಿಕ ಜನಪ್ರತಿನಿಧಿಗಳ ಕೋರ್ಟ್ ಕೊಲೆ, ಕ್ರಿಮಿನಲ್ ಸಂಚು, ಸಾಕ್ಷ್ಯನಾಶ, ಮಾರಕಾಸ್ತ್ರಗಳಿಂದ ಹಲ್ಲೆ, ಅಕ್ರಮ ಕೂಟ ಆರೋಪದಡಿ ದೋಷಿ ಎಂದು ಆದೇಶಿಸಿದೆ. ಅದರಂತೆ ಪ್ರಕರಣ ಸಂಬಂಧ ಇಂದು ಶಿಕ್ಷೆ ಪ್ರಮಾಣವನ್ನು ಪ್ರಕಟ ಮಾಡಲಿದೆ. ಆರೋಪಿಗಳಿಗೆ ಮರಣದಂಡನೆ ಅಥವಾ ಜೀವಾವಧಿ ಶಿಕ್ಷೆಯೋ ಅನ್ನೋದು ಕೋರ್ಟ್ ಆದೇಶದತ್ತ ಚಿತ್ತ ನೆಟ್ಟಿದೆ. ಇದನ್ನೂ ಓದಿ: ಯೋಗೇಶ್‌ ಗೌಡ ಹತ್ಯೆ ಕೇಸ್‌ – ಕಾಂಗ್ರೆಸ್‌ ಶಾಸಕ ವಿನಯ್‌ ಕುಲಕರ್ಣಿ ದೋಷಿ

2016ರಲ್ಲಿ ಧಾರವಾಡ ಜಿಲ್ಲಾ ಪಂಚಾಯತ್ ಸದಸ್ಯ ಯೋಗೇಶ್ ಗೌಡ ಕೊಲೆಯಾಗಿತ್ತು. ಪ್ರಕರಣದಲ್ಲಿ ವಿನಯ್ ಕುಲಕರ್ಣಿ ಸೇರಿ ಒಟ್ಟು 21 ಮಂದಿ ಮೇಲೆ ಆರೋಪ ಕೇಳಿ ಬಂದಿತ್ತು. ಪ್ರಕರಣವನ್ನು ಬಿಜೆಪಿ ಸರ್ಕಾರ ಸಿಬಿಐಗೆ ಒಪ್ಪಿಸಿತ್ತು. ಇಂಚಿಂಚು ತನಿಖೆ ನಡೆಸಿದ್ದ ಸಿಬಿಐ ಚಾರ್ಜ್ಶೀಟ್ ಸಲ್ಲಿಸಿತ್ತು. ಇದೀಗ ಎ15 ವಿನಯ್ ಕುಲಕರ್ಣಿ ಸೇರಿ 17 ಮಂದಿಯನ್ನು ಕೋರ್ಟ್ ಅಪರಾಧಿಗಳು ಅಂತ ಹೇಳಿದೆ. ಉಳಿದ ಸೋಮಶೇಖರ್ ನ್ಯಾಮಗೌಡ ಹಾಗೂ ವಾಸುದೇವ್ ನಿಲೇಕಣಿಯನ್ನ ಕೋರ್ಟ್ ಖುಲಾಸೆಗೊಳಿಸಿದೆ. ಇನ್ನು ಇಬ್ಬರು ನಿರ್ದೋಷಿಗಳನ್ನು ಬಿಟ್ಟು ಉಳಿದವರನ್ನು ಸಿಬಿಐ ವಶಕ್ಕೆ ಪಡೆದಿದ್ದಾರೆ. ಬಳಿಕ ಬೌರಿಂಗ್ ಆಸ್ಪತ್ರೆಯಲ್ಲಿ 17 ಅಪರಾಧಿಗಳ ವೈದ್ಯಕೀಯ ಪರೀಕ್ಷೆ ನಡೆಸಿ ಪರಪ್ಪನ ಅಗ್ರಹಾರಕ್ಕೆ ಶಿಫ್ಟ್ ಮಾಡಿದ್ದಾರೆ.

ಇನ್ನು, ವಿನಯ್ ಕುಲಕರ್ಣಿ ಸಹೋದರ ವಿಜಯ್ ಕುಲಕರ್ಣಿ ಬಗ್ಗೆ ತನಿಖೆ ನಡೆಸಲೂ ರಿಜಿಸ್ಟ್ರಾರ್‌ಗೆ ಕೋರ್ಟ್ ಸೂಚನೆ ನೀಡಿದೆ. ಅದರ ಜೊತೆಗೆ ಇಂದು ಎಲ್ಲಾ ಆರೋಪಿಗಳು ಕೋರ್ಟ್‌ಗೆ ಹಾಜರಾಗಲಿದ್ದು, ಜಡ್ಜ್ ಶಿಕ್ಷೆ ಪ್ರಮಾಣ ಪ್ರಕಟಿಸಲಿದ್ದಾರೆ. ತೀರ್ಪು ಪ್ರಕಟವಾಗುತ್ತಿದ್ದಂತೆ ಶಾಸಕ ವಿನಯ್ ಕುಲಕರ್ಣಿ ಕುಟುಂಬಸ್ಥರು ಕೋರ್ಟ್ ಹಾಲ್‌ನಲ್ಲಿಯೇ ಬಿಕ್ಕಿ-ಬಿಕ್ಕಿ ಕಣ್ಣೀರು ಹಾಕಿದ್ದಾರೆ. ಮೂವರು ಮಕ್ಕಳ ಕಣ್ಣೀರು ನೋಡಿ ದುಃಖಿತರಾದ ವಿನಯ್ ಕುಲಕರ್ಣಿ ತಾವೂ ಕಣ್ಣೀರಿಡುತ್ತಾ ಸಮಾಧಾನ ಮಾಡಿದರು.ಇದನ್ನೂ ಓದಿ: ಜೈಲಿಗೆ ವಿನಯ್‌ ಕುಲಕರ್ಣಿಯನ್ನು ಕರೆತರುತ್ತಿದ್ದ ಬಸ್ಸಿನಲ್ಲಿ ಬೆಂಕಿ

ಇಂದು 2 ವರ್ಷಕ್ಕಿಂತ ಹೆಚ್ಚು ಅವಧಿ ಶಿಕ್ಷೆಗೆ ಗುರಿಯಾದರೆ ಜನಪ್ರತಿನಿಧಿಗಳ ಕಾಯ್ದೆಯ ಸೆಕ್ಷನ್ 8(4)ರ ಪ್ರಕಾರ ತಕ್ಷಣದಿಂದ ವಿನಯ್ ಕುಲಕರ್ಣಿ ಶಾಸಕತ್ವ ಅನರ್ಹಗೊಳ್ಳಲಿದೆ. ವಿನಯ್ ಕುಲಕರ್ಣಿಗೆ ಮೇಲ್ಮನವಿ ಸಲ್ಲಿಸಲು ಅವಕಾಶವೂ ಇದೆ. 90 ದಿನಗಳ ಕಾಲಾವಕಾಶ ಇದ್ದು, ಅಷ್ಟರಲ್ಲಿ ಮೇಲಿನ ನ್ಯಾಯಾಲಯ ಶಿಕ್ಷೆಗೆ ತಡೆ ಕೊಟ್ಟರೆ ಶಾಸಕತ್ವ ಅನರ್ಹತೆಯಿಂದ ಬಚಾವ್ ಆಗಬಹುದು. ಶಾಸಕತ್ವ ಅನರ್ಹಗೊಂಡರೆ ಮುಂದಿನ 6 ವರ್ಷಗಳ ಕಾಲ ಚುನಾವಣೆಗೆ ಸ್ಪರ್ಧಿಸುವಂತಿಲ್ಲ.

ಕೋರ್ಟ್‌ನಿಂದ ತೀರ್ಪು ಹೊರಬಿದ್ದ ಬೆನ್ನಲ್ಲೇ ಯೋಗೇಶ್ ಗೌಡ ಆಪ್ತ ಬಸವರಾಜ್ ಕೊರವರ್ ಸಂತಸ ವ್ಯಕ್ತಪಡಿದ್ರು. ಸತತ 10 ವರ್ಷಗಳ ಹೋರಾಟ, ಶ್ರಮ, ನೋವಿಗೆ ಸಿಕ್ಕ ಜಯವಿದು. ದುಡ್ಡಿನ ದರ್ಪ, ಅಧಿಕಾರದ ಅಹಂನಲ್ಲಿ ಮೆರೆಯುತ್ತಿದ್ದವರಿಗೆ ಕೋರ್ಟ್ ತಕ್ಕ ಶಾಸ್ತಿ ಮಾಡಿದೆ. ಇಲ್ಲಿ ಕಾನೂನಿಗಿಂತ ಯಾರೂ ದೊಡ್ಡವರಿಲ್ಲ. ಯೋಗೇಶ್ ಗೌಡ ಕೊಲೆ ಕೇಸ್‌ನಲ್ಲಿ ಕೊನೆಗೂ ಜಯ ಸಿಕ್ಕಿದೆ ಎಂದರು.ಇದನ್ನೂ ಓದಿ: ವಿನಯ್‌ ಕುಲಕರ್ಣಿ ಶಾಸಕ ಸ್ಥಾನಕ್ಕೆ ಕುತ್ತು?

TAGGED:crimedharwadVinay Kulkarniyogesh gowdaಜನಪ್ರತಿನಿಧಿಗಳ ನ್ಯಾಯಾಲಯಧಾರವಾಡಯೋಗೇಶ್‌ಗೌಡ ಕೊಲೆವಿನಯ್ ಕುಲಕರ್ಣಿ
Share This Article
Facebook Whatsapp Whatsapp Telegram

Cinema news

Deepika Padukone Ranveer Singh
2ನೇ ಮಗುವಿನ ನಿರೀಕ್ಷೆಯಲ್ಲಿ ದೀಪಿಕಾ ಪಡುಕೋಣೆ, ರಣವೀರ್‌ ಸಿಂಗ್‌ ದಂಪತಿ
Bollywood Cinema Latest Top Stories
darshan ex manager mallikarjun 2 1
ದರ್ಶನ್‌, ಧ್ರುವ ಸರ್ಜಾ ನಡುವೆ ಮನಸ್ತಾಪಕ್ಕೆ ಕಾರಣ ಯಾರು? – ಮಲ್ಲಿಕಾರ್ಜುನ್‌ ಹೇಳಿದ್ದೇನು?
Bengaluru City Cinema Latest Sandalwood Top Stories
darshan ex manager mallikarjun 2
ಕೇಸ್‌ ಒಂದ್ರಲ್ಲಿ ದರ್ಶನ್‌ ಸರ್‌ ಸಿಕ್ಕಾಕೊಂಡಾಗ ಬಹಳ ಬೇಜಾರಾಯ್ತು: ಮಾಜಿ ಮ್ಯಾನೇಜರ್‌ ಮಲ್ಲಿಕಾರ್ಜುನ್‌ ಮಾತು
Bengaluru City Cinema Latest Sandalwood Top Stories
darshan ex manager mallikarjun
8 ವರ್ಷ ನಾಪತ್ತೆಯಾಗಿದ್ದ ದರ್ಶನ್‌ ಮಾಜಿ ಮ್ಯಾನೇಜರ್‌ ದಿಢೀರ್‌ ಪ್ರತ್ಯಕ್ಷ – ನಡೆದಿದ್ದೇನು ಅಂತ ಎಳೆಎಳೆಯಾಗಿ ಬಿಚ್ಚಿಟ್ಟ ಮಲ್ಲಿ
Bengaluru City Cinema Latest Main Post Sandalwood

You Might Also Like

K.S.Somashekhar
Kolar

ರಾಜ್ಯಸಭಾ ಕಾರ್ಯದರ್ಶಿಯಾಗಿ ಕೋಲಾರದ ಸೋಮಶೇಖರ್‌ ನೇಮಕ – ಪ್ರತಿಷ್ಠಿತ ಸ್ಥಾನಕ್ಕೇರಿದ ಕರ್ನಾಟಕದ ಮೊದಲ ಅಧಿಕಾರಿ

Public TV
By Public TV
3 minutes ago
Bidar youth dies after heavy hotness
Bidar

ಬಿಸಿಲಿನ ಝಳಕ್ಕೆ ಕುಸಿದು ಬಿದ್ದು ಯುವಕ ಸಾವು

Public TV
By Public TV
7 minutes ago
SS Kashi
Bengaluru City

ಮಂಗಳೂರು ಕಮಿಷನರ್ ವಿರುದ್ಧ ಡಿಜಿಪಿಗೆ ದೂರು ನೀಡಿದ ಎಸ್ಪಿ ಕಾಶಿ

Public TV
By Public TV
24 minutes ago
Iranian flagged cargo ship
Latest

ಹಾರ್ಮುಜ್‌ನಲ್ಲಿ ಗುಂಡಿನ ಮೊರೆತ – ಇರಾನ್‌ ಹಡಗಿನ ಮೇಲೆ ಅಮೆರಿಕ ದಾಳಿ

Public TV
By Public TV
32 minutes ago
Jammu Kashmir Udhampur Bus Overturn
Latest

ನಿಯಂತ್ರಣ ತಪ್ಪಿ ಕಂದಕಕ್ಕೆ ಉರುಳಿದ ಬಸ್ – 15 ಮಂದಿ ದುರ್ಮರಣ, ಹಲವರಿಗೆ ಗಾಯ

Public TV
By Public TV
37 minutes ago
Dowry Harassment Belagavi Housewife Suicide
Belgaum

ವರದಕ್ಷಿಣೆ ಕಿರುಕುಳ – ಗೃಹಿಣಿ ಆತ್ಮಹತ್ಯೆ, ಪತಿ ಅರೆಸ್ಟ್

Public TV
By Public TV
2 hours ago
Public TVPublic TV
Follow US
© Public TV. Design Company - Knowtable. All Rights Reserved.
  • Privacy Policy
  • CSR-Policy
  • Terms of Service
  • Complaints Redressal
  • Terms and Conditions
  • Contact
  • Election News
Welcome Back!

Sign in to your account

Username or Email Address
Password

Lost your password?