ನೆಲಮಂಗಲ: ಶಾಸಕರೇ ನಿಮ್ಮ ಪಾದಪೂಜೆ ಮಾಡ್ತೀವಿ ದಯಮಾಡಿ ರಸ್ತೆ ಮಾಡಿಕೊಡಿ ಎಂದು ಬೆಂಗಳೂರು ಹೊರವಲಯದ ನೆಲಮಂಗಲ ತಾಲೂಕಿನ ತೊರಪಾಳ್ಯ ಗ್ರಾಮದ ಗ್ರಾಮಸ್ಥರು, ವಿನೂತನವಾಗಿ ಪ್ರತಿಭಟನೆ ಮಾಡಿದ್ದಾರೆ.
Advertisement
ಇಂದು ನೆಲಮಂಗಲ ತಾಲೂಕಿನ ತೊರಪಾಳ್ಯ ಗ್ರಾಮಸ್ಥರು ರಸ್ತೆಯಲ್ಲಿ ಹೂ ಗಿಡ ನೆಟ್ಟು ಪೂಜೆ ಮಾಡುವ ಮೂಲಕ ಪ್ರತಿಭಟನೆ ಮಾಡಿದ್ದಾರೆ. ನೆಲಮಂಗಲ ತಾಲೂಕಿನಿಂದ ಕೇವಲ 7 ಕಿಮೀ ದೂರದಲ್ಲಿರುವ ಈ ಗ್ರಾಮಕ್ಕೆ, ಇಂದಿಗೂ ಸಹ ರಸ್ತೆಯಿಲ್ಲದೆ ಜನರು ಪರದಾಡುತ್ತಿದ್ದಾರೆ. ಇತ್ತೀಚೆಗೆ ಸುರಿಯುತ್ತಿರುವ ಭಾರಿ ಮಳೆಯಿಂದ ರಸ್ತೆ ಸಂಪೂರ್ಣ ಕೆಸರು ಗದ್ದೆಯಂತಾಗಿದ್ದು ಗ್ರಾಮಸ್ಥರು ಓಡಾಡಲು ಕೂಡ ಕಷ್ಟವಾಗಿದೆ ಈ ಹಿನ್ನೆಲೆಯಲ್ಲಿ ಶಾಸಕರು ಕೂಡಲೇ ರಸ್ತೆ ಮಾಡಿಸಿಕೊಡುವಂತೆ ಮನವಿ ಮಾಡಿಕೊಂಡಿದ್ದಾರೆ. ಇದನ್ನೂ ಓದಿ: ಮಂಕಿ ಕ್ಯಾಪ್ ಧರಿಸಿ ವೃದ್ಧೆಯ ಚಿನ್ನದ ಸರ ಎಗರಿಸಿ ಖದೀಮ ಪರಾರಿ
Advertisement
Advertisement
ಈ ಬಗ್ಗೆ ಪಬ್ಲಿಕ್ ಟಿವಿ ಜೊತೆ ಮಾತನಾಡಿದ ಗ್ರಾಮಸ್ಥರು, ನಾವು ನಮ್ಮ ಮೊಮ್ಮಕ್ಕಳನ್ನು ಕಂಡರೂ ನಮ್ಮೂರಿನ ರಸ್ತೆಗೆ ಡಾಂಬರು ಕಾಣಲಿಲ್ಲ. ಈ ರಸ್ತೆಯಲ್ಲಿ ಗುಂಡಿಗಳೇ ಹೆಚ್ಚು ಮಳೆ ಬಂದಾಗಲಂತೂ ನಿತ್ಯ ನರಕ ದರ್ಶನವಾಗುತ್ತದೆ. ಕೂಡಲೇ ನೆಲಮಂಗಲ ಶಾಸಕ ಶ್ರೀನಿವಾಸಮೂರ್ತಿ ಸಾಹೇಬರು ಇತ್ತ ಗಮನವರಿಸಿ ಗ್ರಾಮಸ್ಥರ ನೆರವಿಗೆ ನಿಂತು ರಸ್ತೆ ಅಭಿವೃದ್ಧಿ ಮಾಡಿಕೊಡಿ ಎಂದು ಮನವಿ ಮಾಡಿಕೊಂಡರು. ಇದನ್ನೂ ಓದಿ: ಫೇಸ್ ಕ್ರೀಮ್ನಲ್ಲಿ ಚಿನ್ನ ಸಾಗಾಟ ಮಾಡಿ ಪೊಲೀಸರ ಬಲೆಗೆ ಬಿದ್ದ
Advertisement