ಕಿಚ್ಚ ಸುದೀಪ್ ನಟನೆಯ ‘ವಿಕ್ರಾಂತ್ ರೋಣ’ ಸಿನಿಮಾ ರಿಲೀಸ್ ಆಗಿ ಕೆಲವೇ ಗಂಟೆಗಳಲ್ಲೇ ಆನ್‌ಲೈನ್‌ನಲ್ಲಿ ಸೋರಿಕೆಯಾಗಿದೆ. ಕೆಲವು ಡಿಜಿಟಲ್ ವೇದಿಕೆಗಳಲ್ಲಿ ಸಿನಿಮಾದ ಲಿಂಕ್ ಲಭ್ಯವಾಗಿದ್ದು, ಅವುಗಳನ್ನು ಡಿಲಿಟ್ ಮಾಡಿಸುವ ಪ್ರಯತ್ನಕ್ಕೆ ಚಿತ್ರತಂಡ ಮುಂದಾಗಿದೆ. ಬಹುಕೋಟಿ ಬಜೆಟ್ ಸಿನಿಮಾಗಳು ರಿಲೀಸ್ ಆದಾಗ ಪೈರಸಿ ಆಗುವುದು ಸಾಮಾನ್ಯ. ಆದರೆ, ಅದು ಎಷ್ಟರ ಮಟ್ಟಿಗೆ ಪ್ರೇಕ್ಷಕರಿಗೆ ಖುಷಿ ಕೊಡುತ್ತದೆ ಎನ್ನುವುದೇ ಇಲ್ಲಿ ಮುಖ್ಯ.
Advertisement
ವಿಕ್ರಾಂತ್ ರೋಣ ಸಿನಿಮಾ ಆನ್‌ಲೈನ್‌ನಲ್ಲಿ ರಿಲೀಸ್ ಆಗಿದೆ ನಿಜ. ಇದು ಸಿನಿಮಾ ತಂಡಕ್ಕೂ ಅರಿವಿತ್ತು. ಹಾಗಾಗಿಯೇ ಸುದೀಪ್ ಅವರು ಪೈರಸಿ ಕುರಿತು ಮಾತನಾಡುತ್ತಾ, ಇದು ಮೊಬೈಲ್‌ನಲ್ಲಿ ನೋಡುವಂತಹ ಸಿನಿಮಾವಲ್ಲ. ಸಿಕ್ಕರೆ ಖಂಡಿತಾ ನೀವು ನೋಡಿ. ಆದರೆ, ಈ ಸಿನಿಮಾವನ್ನು ಮೊಬೈಲ್‌ನಲ್ಲಿ ನೋಡಿದ ನಂತರವೂ ನೀವು ಥಿಯೇಟರ್‌ಗೆ ಬಂದು ಮತ್ತೆ ಸಿನಿಮಾ ನೋಡುತ್ತೀರಿ. ಆ ರೀತಿಯಲ್ಲಿದೆ ಎಂದಿದ್ದರು. ಇದನ್ನೂ ಓದಿ:ನಿರ್ದೇಶಕ ಹೇಳಿದ ಮಾತು ಕೇಳದೇ ಆಸ್ಪತ್ರೆ ಸೇರಿದ ಕಿರಿಕ್ ನಟಿ ಸಂಯುಕ್ತ ಹೆಗ್ಡೆ
Advertisement
Advertisement
ನಿರ್ದೇಶಕ ಅನೂಪ್ ಭಂಡಾರಿಯವರು ಒಂದು ಪೋಸ್ಟರ್ ರಿಲೀಸ್ ಮಾಡಿ, ವಿಕ್ರಾಂತ್ ರೋಣ ಪೈರಸಿ ಆಗಿದ್ದು ಕಂಡು ಬಂದರೆ ಕೂಡಲೇ ಸೈಬರ್ ಠಾಣೆ ಅಥವಾ ಅವರೇ ಒಂದು ನಂಬರ್ ಕೊಟ್ಟಿದ್ದರು. ಆ ನಂಬರ್ ಗೆ ಮಾಹಿತಿ ಕೊಡಿ ಎಂದು ಕೇಳಿಕೊಂಡಿದ್ದರು. ಆ ಪೋಸ್ಟರ್ ಕೂಡ ಭಾರೀ ವೈರಲ್ ಆಗಿತ್ತು. ಯಾರು, ಎಷ್ಟೇ ತಡೆದರೂ ಈ ಪೈರಸಿ ಮಾತ್ರ ಇನ್ನೂ ನಿಂತಿಲ್ಲ. ಈ ಹಿಂದೆ ಸುದೀಪ್ ನಟನೆಯ ಪೈಲ್ವಾನ್ ಸಿನಿಮಾಗೂ ಪೈರಸಿಗೆ ತುತ್ತಾಗಿತ್ತು.
Advertisement
ವಿಕ್ರಾಂತ್ ರೋಣ ಸಿನಿಮಾವನ್ನು ಪೈರಸಿಯಲ್ಲಿ ನೋಡಿದರೆ ಅದನ್ನು ಆಸ್ವಾದಿಸುವುದು ಕಷ್ಟ. ಯಾಕೆಂದರೆ, ಬಹುತೇಕ ಸಿನಿಮಾ ಕತ್ತಲಿನಲ್ಲೇ ನಡೆಯುತ್ತದೆ. ಹಾಗೂ 3 ಡಿಯಲ್ಲಿ ರಿಲೀಸ್ ಆಗಿದೆ. ಆ ಖುಷಿಯೇ ಬೇರೆ ಮತ್ತು ದೃಶ್ಯ ವೈಭವವನ್ನು ಥಿಯೇಟರ್ ನಲ್ಲಿಯೇ ನೋಡಿ ಅನುಭವಿಸಬೇಕು. ಹಾಗಾಗಿ ಪೈರಸಿಯಾದರೂ, ಪ್ರೇಕ್ಷಕರು ಚಿತ್ರಮಂದಿರಕ್ಕೆ ಬಂದು ಸಿನಿಮಾ ನೋಡುತ್ತಾರೆ ಎನ್ನುವ ನಂಬಿಕೆ ಚಿತ್ರತಂಡದ್ದು.