ವಿಜಯಪುರ: ಅಪ್ರಾಪ್ತೆಯನ್ನ ಅಪಹರಿಸಿ ಅತ್ಯಾಚಾರವೆಸಗಿದ ಆರೋಪ ಕೇಳಿಬಂದ ಹಿನ್ನೆಲೆಯಲ್ಲಿ ಪೊಲೀಸರು ವ್ಯಕ್ತಿಯೊಬ್ಬನನ್ನು ಬಂಧಿಸಿದ್ದಾರೆ.
ಶಿವಯ್ಯ ಜಂಬಯ್ಯ ರುದ್ರಸ್ವಾಮಿಮಠ (32) ಬಂಧಿತ ವ್ಯಕ್ತಿ. ಮುದ್ದೇಬಿಹಾಳ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಅತ್ಯಾಚಾರ ಎಸಗಿರುವ ಆರೋಪ ಕೇಳಿಬಂದಿದೆ. ಅಪ್ರಾಪ್ತೆ ಬಹಿರ್ದೆಸೆಗೆ ಹೋದಾಗ ಅಪಹರಿಸಿ ಅತ್ಯಾಚಾರ ಎಸಗಿದ್ದಾನೆ ಎಂಬ ಆರೋಪಿಸಲಾಗಿದೆ.
Advertisement
Advertisement
ಮಂಗಳವಾರ ಬೆಳಗ್ಗೆ ಅಪ್ರಾಪ್ತೆ ಬಹಿರ್ದೆಸೆಗೆ ಹೋದಾಗ ತನ್ನ ಸಹಚರರೊಂದಿಗೆ ಅಪಹರಿಸಿದ್ದ. ಬಳಿಕ ಬಾಲಕಿ ಮೇಲೆ ಅತ್ಯಾಚಾರ ಎಸಗಿ, ಆಕೆಯ ಮೈಮೇಲಿದ್ದ ಚಿನ್ನದ ಒಡವೆಗಳನ್ನು ದೋಚಿದ್ದರು. ಇತ್ತ ಸಂಜೆಯಾದರೂ ಮಗಳು ಮನೆಗೆ ಬರಲಿಲ್ಲವಲ್ಲ ಎಂದು ಪಾಲಕರು ಎಲ್ಲ ಕಡೆ ಹುಡುಕಾಟ ನಡೆಸಿದ್ದಾರೆ. ಸಂಜೆ ಆಕೆ ಮನೆಗೆ ಬಂದು ವಿಷಯ ತಿಳಿಸಿದಾಗಲೇ ಅತ್ಯಾಚಾರ ವಿಚಾರ ಬಯಲಾಗಿದೆ.
Advertisement
ಈ ಸಂಬಂಧ ಮುದ್ದೇಬಿಹಾಳ ಪೊಲೀಸ್ ಠಾಣೆಯಲ್ಲಿ ಪೋಕ್ಸೋ ಕಾಯ್ದೆ ಅಡಿ ಪ್ರಕರಣ ದಾಖಲಾಗಿದೆ. ಇದನ್ನೂ ಓದಿ: ರಾಜಧಾನಿಯಲ್ಲಿ ಶೂಟೌಟ್- ಬೈಕ್ ಸವಾರನ ಮೇಲೆ ಕಾರು ಚಾಲಕನಿಂದ ಗುಂಡಿನ ದಾಳಿ