ದರ್ಶನ್ (Darshan) ಪರಪ್ಪನ ಅಗ್ರಹಾರದಲ್ಲಿದ್ದಾರೆ. ಅಭಿಮಾನಿಗಳೊಂದಿಗೆ ದರ್ಶನ್ ಯಾವುದೇ ರೀತಿಯಲ್ಲೂ ಸಂಕರ್ಪದಲ್ಲಿಲ್ಲ. ಆದರೆ, ದರ್ಶನ್ ಹಾಗೂ ಅಭಿಮಾನಿಗಳಿಗೆ ಸೇತುವೆಯಾಗಿರುವುದು ವಿಜಯಲಕ್ಷ್ಮಿ. ತಿಂಗಳಿಗೂ ಹೆಚ್ಚು ಸಮಯದಿಂದ ದರ್ಶನ್ ಪರಪ್ಪನ ಅಗ್ರಹಾರ ಜೈಲಿನಲ್ಲಿದ್ದಾರೆ. ಹೀಗಾಗಿ, ದರ್ಶನ್ ದರ್ಶನವಿಲ್ಲದೇ ಬೇಸರದಲ್ಲಿದ್ದ ಅಭಿಮಾನಿಗಳಿಗೆ ವಿಜಯಲಕ್ಷ್ಮಿ ಸರ್ಪ್ರೈಸ್ ಕೊಟ್ಟಿದ್ದಾರೆ.
ತಮ್ಮ ಇನ್‌ಸ್ಟಾಗ್ರಾಂ ಖಾತೆಯಲ್ಲಿ ದರ್ಶನ್ ಫೋಟೋವನ್ನ ಸ್ಟೋರಿಯಲ್ಲಿ ಪೋಸ್ಟ್ ಮಾಡಿದ್ದಾರೆ ವಿಜಯಲಕ್ಷ್ಮಿ. ಇದು ಬಹಳ ಅಪರೂಪದ ಫೋಟೋವೆನಿಸುತ್ತಿದೆ. ದರ್ಶನ್ ಇಲ್ಲಿ ನಾಯಿಯನ್ನ ಹಿಡಿದುಕೊಂಡು ಕುಳಿತಿದ್ದಾರೆ. ಈ ಫೋಟೋ ಇದೀಗ ವೈರಲ್ ಆಗುತ್ತಿದ್ದು, ಫೋಟೋವನ್ನ ಮೆಜೆಸ್ಟಿಕ್ ಚಿತ್ರದ ದರ್ಶನ್ ಫೋಟೋಗೆ ಹೋಲಿಕೆ ಮಾಡಲಾಗುತ್ತಿದೆ. ಇದನ್ನೂ ಓದಿ: ಬಿಗ್‌ಬಾಸ್‌ನಲ್ಲಿ ʻಮಾತಿನ ಮಲ್ಲಿ ಮಲ್ಲಮ್ಮನ’ ಪವಾಡ!
ಇದು ರಿಯಲ್ ಫೋಟೋವಾ..? ಅಥವಾ ಎಐ ಫೋಟೋ ಇರಬಹುದಾ ಎಂದು ಚರ್ಚೆಯಾಗುತ್ತಿದೆ. ಆದರೆ ಅಭಿಮಾನಿಗಳಿಗೆ ಮಾತ್ರ ವಿಜಯಲಕ್ಷ್ಮಿ ದರ್ಶನ್ ಫೋಟೋ ಹಂಚಿಕೊಂಡು ಖುಷಿ ಕೊಟ್ಟಿದ್ದಾರೆ.