ಚಿಕ್ಕೋಡಿ: ನವರಾತ್ರಿ (Navratri) ಸಂದರ್ಭದಲ್ಲಿ ಆಚರಣೆ ಮಾಡುವ ದುರ್ಗಾದೌಡ್‍ನಲ್ಲಿ (Durga Daud) ಹಿಂದೂಪರ ಸಂಘಟನೆಗಳ ಕಾರ್ಯಕರ್ತರು ಕೈಯಲ್ಲಿ ತಲವಾರು ಹಿಡಿದು ನೃತ್ಯ ಮಾಡಿದ್ದಾರೆ.
Advertisement
ನಾಡಿನಾದ್ಯಂತ ನವರಾತ್ರಿ ಹಬ್ಬದ ಸಂಭ್ರಮ ಮನೆ ಮಾಡಿದೆ. ಎಲ್ಲೆಲ್ಲೂ ದುರ್ಗಾ ಮಾತೆಯ ಪೂಜೆಯನ್ನು ಅದ್ದೂರಿಯಾಗಿ ನೆರವೇರಿಸಲಾಗುತ್ತಿದೆ. ಹುಕ್ಕೇರಿ ಪಟ್ಟಣದಲ್ಲಿ ಕೇಸರಿ ಶಾಲು ಹಾಕಿಕೊಂಡು ಕೈಯಲ್ಲಿ ದುರ್ಗಾ ತಲವಾರು ಹಿಡಿದು ಯುವಕರು ಕುಣಿದು ಕುಪ್ಪಳಿಸಿರುವ ವೀಡಿಯೋ ಸೋಶಿಯಲ್ ಮೀಡಿಯಾದಲ್ಲಿ ಹರಿದಾಡುತ್ತಿದೆ. ಇದನ್ನೂ ಓದಿ: ದೆಹಲಿಯಲ್ಲಿ ನರಬಲಿ – 6 ವರ್ಷದ ಬಾಲಕನ ಕತ್ತುಸೀಳಿ ಕೊಂದ ಇಬ್ಬರು ಅರೆಸ್ಟ್
Advertisement
Advertisement
ಹುಕ್ಕೇರಿ (Hukkeri) ಪಟ್ಟಣದ ಪ್ರಮುಖ ಬೀದಿಗಳಲ್ಲಿ ದೌಡಿನಲ್ಲಿ ಕೈಯಲ್ಲಿ ತಲವಾರ ಹಿಡಿದು ಯುವಕರು ಸಾಗಿದ್ದಾರೆ. ಅಲ್ಲದೇ ನಂತರ ಚಾವಡಿಯಲ್ಲಿ ಡಾಲ್ಬಿ ಹಚ್ಚಿ ಕೈಯಲ್ಲಿ ತಲವಾರ ಹಿಡಿದು ಯುವಕರು ಕುಣಿದು ಕುಪ್ಪಳಿಸಿದ್ದಾರೆ. ಇದನ್ನೂ ಓದಿ: ಪಬ್ಲಿಕ್ ಟಿವಿ ಇಂಪ್ಯಾಕ್ಟ್ – ವಿದ್ಯುತ್ ದರ ಏರಿಕೆ, ಶೀಘ್ರವೇ ಸಿಎಂ ಜೊತೆ ಸುನಿಲ್ ಕುಮಾರ್ ಸಭೆ