CrimeLatestLeading NewsMain PostNational

ದೆಹಲಿಯಲ್ಲಿ ನರಬಲಿ – 6 ವರ್ಷದ ಬಾಲಕನ ಕತ್ತುಸೀಳಿ ಕೊಂದ ಇಬ್ಬರು ಅರೆಸ್ಟ್

ನವದೆಹಲಿ: 6 ವರ್ಷದ ಬಾಲಕನ ಕತ್ತು ಸೀಳಿ ನರಬಲಿ ನೀಡಿರುವ ಘಟನೆ ದಕ್ಷಿಣ ದೆಹಲಿಯ (NewDelhi) ಲೋಧಿ ಕಾಲೊನಿಯಲ್ಲಿ ನಡೆದಿದ್ದು, ಇಬ್ಬರು ಆರೋಪಿ (Accused) ಗಳನ್ನು ಪೊಲೀಸರು (Police) ಬಂಧಿಸಿದ್ದಾರೆ.

ಬಿಹಾರ (Bihar) ಮೂಲದ ವಿಜಯ್ ಕುಮಾರ್, ಅಮರ್ ಕುಮಾರ್ ಬಂಧಿತ ಆರೋಪಿಗಳು. ಆರೋಪಿಗಳು ಮತ್ತು ಬಾಲಕನ ಪೋಷಕರು ಕಟ್ಟಡ ಕಾರ್ಮಿಕರಾಗಿ ಕೆಲಸ ಮಾಡುತ್ತಿದ್ದರು. ಒಂದೇ ಕೊಳೆಗೇರಿಯಲ್ಲಿ ವಾಸವಾಗಿದ್ದರು. ವಿಜಯ್ ಮತ್ತು ಅಮರ್ ಅಪರಾಧ ಎಸಗುವಾಗ ಮಾದಕ ವಸ್ತು ಸೇವಿಸಿದ್ದರು. ಪ್ರಸಾದ ಸೇವಿಸಿದ ಬಳಿಕ ಶ್ರೇಯಸ್ಸಾಗಲು ಹುಡುಗನನ್ನು ಕೊಂದಿರುವುದಾಗಿ ಒಪ್ಪಿಕೊಂಡಿದ್ದಾರೆ ಎಂದು ಪೊಲೀಸರು ತಿಳಿಸಿದ್ದಾರೆ. ಇದನ್ನೂ ಓದಿ: ಚರ್ಮಗಂಟು ರೋಗದಿಂದ ಮೃತಪಟ್ಟ ಜಾನುವಾರುಗಳಿಗೆ ಪರಿಹಾರ ನೀಡಲು 2 ಕೋಟಿ ರೂ. ಬಿಡುಗಡೆ: ಪ್ರಭು ಚವ್ಹಾಣ್

ಶನಿವಾರ ಊಟ ಮಾಡಿದ ನಂತರ ಭಜನೆ ಕೇಳುತ್ತಿದ್ದೆವು. ರಾತ್ರಿ 10:30ರ ಸುಮಾರಿಗೆ ಬಾಲಕ ತನ್ನ ಶೆಡ್‌ಗೆ ಹಿಂತಿರುಗುತ್ತಿದ್ದಾಗ ಆರೋಪಿಗಳು ಬಾಲಕನನ್ನು ತಮ್ಮ ಅಡುಗೆ ಸ್ಥಳಕ್ಕೆ ಕರೆದು ಮೊದಲು ತಲೆಯ ಮೇಲೆ ಹಲ್ಲೆ ನಡೆಸಿ ನಂತರ ಕತ್ತು ಸೀಳಿ ಕೊಂದಿದ್ದಾರೆ. ಬಳಿಕ ಮಗನ ಮೃತದೇಹ ಕಂಡು ಗಾಬರಿಗೊಂಡಿದ್ದಾರೆ ಎಂದು ಬಾಲಕನ ತಂದೆ ದೂರಿನಲ್ಲಿ ತಿಳಿಸಿರುವುದಾಗಿ ಉಪ ಪೊಲೀಸ್ ಆಯುಕ್ತ (ದಕ್ಷಿಣ) ಚಂದನ್ ಚೌಧರಿ ಮಾಹಿತಿ ನೀಡಿದ್ದಾರೆ. ಇದನ್ನೂ ಓದಿ: ಮಗಳ ಆಗಮನದ ಖುಷಿಯಲ್ಲಿ ಮೇಘನಾ ರಾಜ್

KILLING CRIME

ಬಳಿಕ ವಿಧಿವಿಜ್ಞಾನ (Forensic Science) ತಜ್ಞರು ಘಟನಾಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದ್ದು, ಮೃತ ದೇಹವನ್ನು ಏಮ್ಸ್ (AIIMS) ಟ್ರಾಮಾ ಕೇಂದ್ರಕ್ಕೆ ಸ್ಥಳಾಂತರಿಸಲಾಗಿದೆ. ಬಾಲಕನ ತಂದೆಯ ಹೇಳಿಕೆಯನ್ನು ಆಧರಿಸಿ ಆರೋಪಿಗಳ ವಿರುದ್ಧ ಭಾರತೀಯ ದಂಡ ಸಂಹಿತೆ (IPC) ಸೆಕ್ಷನ್ 302, 34ರ ಅಡಿಯಲ್ಲಿ ಪ್ರಕರಣ ದಾಖಲಿಸಲಾಗಿದೆ.

Live Tv

Leave a Reply

Your email address will not be published. Required fields are marked *

Back to top button