ಚೆನ್ನೈ: ದಕ್ಷಿಣ ಭಾರತದ ಸ್ಟಾರ್ ನಟ ವಿಜಯ್ ಸೇತುಪತಿ ಕೃತಿ ಶೆಟ್ಟಿ ಜೊತೆ ನಟಿಸಲು ಅವಕಾಶ ಬಂದಿದ್ದು, ಅದಕ್ಕೆ ನೋ ಎಂದಿದ್ದಾರೆ.
ವಿಜಯ್ ಸೇತುಪತಿ ಯಾವ ರೀತಿಯ ಪಾತ್ರವನ್ನು ಕೊಟ್ಟರೂ ಸುಲಭವಾಗಿ ಮಾಡುವ ನಟ. ಇತ್ತೀಚೆಗೆ ಕೃತಿ ಶೆಟ್ಟಿ ಜೊತೆ ಸಟಿಸಲು ಅವಕಾಶ ಬಂದಿದ್ದು, ನನ್ನ ಮಗಳು ಎಂದು ಕೃತಿಯನ್ನು ತಿಳಿದುಕೊಂಡಿದ್ದೇನೆ. ಕೃತಿ ಜೊತೆ ರೊಮ್ಯಾನ್ಸ್ ಮಾಡಲು ನನಗೆ ಸಾಧ್ಯವಿಲ್ಲ ಎಂದು ಹೇಳಿ ಸಿನಿಮಾವನ್ನು ರಿಜೆಕ್ಟ್ ಮಾಡಿದ್ದಾರೆ. ಇದನ್ನೂ ಓದಿ:ನನ್ನ ಹೃದಯ ನಿನ್ನ ಬಳಿ ಇದೆ – ಅಭಿಮಾನಿಗಳಲ್ಲಿ ಕುತೂಹಲ ಹುಟ್ಟಿಸಿದ ಕತ್ರಿನಾ ಪೋಸ್ಟ್
ವಿಜಯ್ ನಟನೆಯ ‘ಲಾಭಂ’ ಸಿನಿಮಾ ಬಿಡುಗಡೆಗೆ ಸಿದ್ಧವಾಗಿದ್ದು, ಈ ಚಿತ್ರವನ್ನು ಪ್ರಮೋಶನ್ ಮಾಡುತ್ತಿರುವ ವೇಳೆ ಈ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಕೃತಿಯನ್ನು ನಾನು ನನ್ನ ಮಗಳು ಎಂದುಕೊಂಡಿದ್ದೇನೆ. ಒಂದು ಸಾರಿ ಮಗಳು ಎಂದ ಮೇಲೆ ಆಕೆ ಜೊತೆ ಹೇಗೆ ರೊಮ್ಯಾನ್ಸ್ ಮಾಡಲು ಸಾಧ್ಯ ಎಂದು ಪ್ರಶ್ನಿಸಿದ್ದಾರೆ. ನನಗೆ ಆಫರ್ ಕೊಟ್ಟ ಚಿತ್ರತಂಡ ನಾವು ನಟಿಸಿದ ‘ಉಪ್ಪೆನಾ’ ಸಿನಿಮಾ ನೋಡಿರಲಿಲ್ಲ. ಅದಕ್ಕೆ ಆ ರೀತಿ ಕೇಳಿದ್ದಾರೆ. ಅದಕ್ಕೆ ನಾನು ಮಾಡುವುದಿಲ್ಲ ಎಂದಿದ್ದೇನೆ. ಈಗ ಮಾತ್ರವಲ್ಲ ಇಡೀ ಜೀವನದಲ್ಲಿ ಅದು ಸಾಧ್ಯವಿಲ್ಲ. ನಾನು ಕೃತಿಗೆ ‘ಉಪ್ಪೆನಾ’ ಶೂಟಿಂಗ್ ಕೊನೆಯ ದಿನ ‘ನಾನು ನಿನ್ನ ತಂದೆ ಎಂದು ತಿಳಿದುಕೋ’ ಎಂದು ಹೇಳಿದ್ದೆ. ಆ ವೇಳೆ ನನ್ನ ಮಗನಿಗೆ 15 ವರ್ಷ ಮತ್ತೆ ಕೃತಿಗೆ 16 ವರ್ಷ ಆಕೆ ನನ್ನ ಮಗಳಿದ್ದಂತೆ ಎಂದು ಹೇಳಿದ್ದಾರೆ. ಇದನ್ನೂ ಓದಿ: ಮತ್ತೆ ಒಂದಾದ ‘ಮುಂಗಾರು ಮಳೆ’ ಚಿತ್ರತಂಡ
ಈ ಹಿಂದೆ ವಿಜಯ್ ಸೇತುಪತಿ ಮತ್ತು ಕೃತಿ ಶೆಟ್ಟಿ ‘ಉಪ್ಪೆನಾ’ ಸಿನಿಮಾದಲ್ಲಿ ತಂದೆ-ಮಗಳ ಪಾತ್ರದಲ್ಲಿ ನಟಿಸಿದ್ದರು. ಇದಕ್ಕೆ ಅಭಿಮಾನಿಗಳಿಂದ ಭಾರೀ ಮೆಚ್ಚುಗೆ ವ್ಯಕ್ತವಾಗಿತ್ತು. ಅದಕ್ಕೆ ವಿಜಯ್ ಕೃತಿಯನ್ನು ನಾನು ಮಗಳು ಎಂದು ಭಾವಿಸಿದ್ದೇನೆ ಆಕೆ ಜೊತೆ ರೊಮ್ಯಾನ್ಸ್ ಮಾಡಲು ಆಗುವುದಿಲ್ಲ ಎಂದು ಆ ಸಿನಿಮಾ ಆಫರ್ ಅನ್ನು ಕೈಬಿಟ್ಟಿದ್ದಾರೆ.
ಪ್ರಸ್ತುತ ವಿಜಯ್ ಕೈಯಲ್ಲಿ ಹಲವು ಸಿನಿಮಾಗಳಿದ್ದು, ಇವರು 12ಕ್ಕೂ ಹೆಚ್ಚು ಸಿನಿಮಾದಲ್ಲಿ ತೊಡಗಿಕೊಂಡಿದ್ದಾರೆ. ಈ ಮೂಲಕ ಅತಿ ಹೆಚ್ಚು ಬ್ಯುಸಿ ಇರುವ ನಟರ ಸಾಲಿನಲ್ಲಿ ಮುಂಚೂಣಿಯಲ್ಲಿದ್ದಾರೆ. ‘ಅನಬೆಲ್ ಸೇತುಮತಿ’ ಚಿತ್ರದ ತಾಪ್ಸಿ ಪನ್ನು ಜೊತೆಯಾಗಿ ನಟಿಸಿರುವ ಇವರ ಸಿನಿಮಾ ಸೆ.17 ರಂದು ಡಿಸ್ನಿ ಪ್ಲಸ್ ಹಾಟ್ ಸ್ಟಾರ್ ನಲ್ಲಿ ಬಿಡುಗಡೆಯಾಗುತ್ತಿದೆ. ಇದನ್ನೂ ಓದಿ: ಬಿಜೆಪಿ ಈ ದೇಶದ ಬಗ್ಗೆ ಚಿಂತನೆ ಮಾಡುವ ಏಕೈಕ ಪಕ್ಷ: ಎ.ನಾರಾಯಣಸ್ವಾಮಿ
‘ಲಾಬಮ್’ ಚಿತ್ರದಲ್ಲಿ ವಿಜಯ್ ಗೆ ಜೋಡಿಯಾಗಿ ಶ್ರುತಿ ಹಾಸನ್ ಮುಖ್ಯ ಪಾತ್ರದಲ್ಲಿ ಕಾಣಿಸಿಕೊಂಡಿದ್ದು, ಈ ಚಿತ್ರ ಸೆ.9 ರಂದು ಬಿಡುಗಡೆಯಾಗುತ್ತಿದೆ.