Bollywood

ನನ್ನ ಹೃದಯ ನಿನ್ನ ಬಳಿ ಇದೆ – ಅಭಿಮಾನಿಗಳಲ್ಲಿ ಕುತೂಹಲ ಹುಟ್ಟಿಸಿದ ಕತ್ರಿನಾ ಪೋಸ್ಟ್

Published

on

Share this

ಮುಂಬೈ: ನನ್ನ ಹೃದಯ ನಿನ್ನ ಬಳಿ ಇದೆ ಎಂದು ಬಾಲಿವುಡ್ ಹಾಟ್ ಬ್ಯೂಟಿ ಕತ್ರಿನಾ ಕೈಫ್ ತಮ್ಮ ಇನ್‍ಸ್ಟಾಗ್ರಾಮ್‍ನಲ್ಲಿ ಪೋಸ್ಟ್ ಮಾಡಿದ್ದಾರೆ. ಸದ್ಯ ನಟಿ ಈ ರೀತಿ ಹೇಳಿರುವುದು ಅಭಿಮಾನಿಗಳಲ್ಲಿ ಭಾರೀ ಕುತೂಹಲ ಹುಟ್ಟಿಸುವಂತೆ ಮಾಡಿದೆ.

ಕತ್ರಿನಾ ಸಿನಿಮಾ ಸುದ್ದಿಗಿಂತ ಮದುವೆ ವಿಚಾರದಲ್ಲಿ ಸಖತ್ ಸುದ್ದಿಯಾಗುತ್ತಿರುತ್ತಾರೆ. ಇಂದು ಕತ್ರಿನಾ ಇನ್‍ಸ್ಟಾದಲ್ಲಿ, ಟರ್ಕಿ… ನಿನ್ನ ಬಳಿ ನನ್ನ ಹೃದಯ ಇದೆ ಎಂದು ಬರೆದು ತಮ್ಮ ಫೊಟೋವನ್ನು ಪೋಸ್ಟ್ ಮಾಡಿದ್ದಾರೆ. ಈ ಸಾಲುಗಳನ್ನು ನೋಡಿದ ಅಭಿಮಾನಿಗಳು ನಿಮ್ಮ ಸಂಗತಿ ಯಾರು? ಎಂದು ಯಾವಾಗ ಹೇಳುತ್ತೀರಾ? ಎಂದು ಪ್ರಶ್ನೆಯನ್ನು ಕೇಳಿದ್ದಾರೆ. ಇದನ್ನೂ ಓದಿ :ಸಮಾಜ ಸಂಘಟನೆ ಗಣೇಶ ಹಬ್ಬದ ಪ್ರತೀಕ, ಪರಿಸರ ಸ್ನೇಹಿ ಗಣೇಶ ಹಬ್ಬ ಅಚರಿಸಿ: ಮಾಳವಿಕಾ ಅವಿನಾಶ್

 

View this post on Instagram

 

A post shared by Katrina Kaif (@katrinakaif)

ಕತ್ರಿನಾ ಈ ಹಿಂದೆ ವಿಕ್ಕಿ ಕೌಶಲ್ ಜೊತೆ ನಿಶ್ಚಿತಾರ್ಥವಾಗಿದೆ ಎಂದು ಸುದ್ದಿಯಾಗಿದ್ದರು. ಕತ್ರಿನಾಗೆ ಇದು ಹೊಸದಲ್ಲ. ಈ ಹಿಂದೆಯೂ ಇವರನ್ನು ಸಲ್ಮಾನ್ ಖಾನ್, ರಣಬೀರ್ ಕಪೂರ್ ಜೊತೆ ರಿಲೇಶನ್ ಶಿಪ್‍ನಲ್ಲಿ ಇದ್ದರು ಎಂದು ಹೇಳಲಾಗುತ್ತಿತ್ತು. ಆದರೆ ಈ ಕುರಿತು ಕತ್ರಿನಾ ಮಾತ್ರ ಯಾವ ರೀತಿಯ ಪ್ರತಿಕ್ರಿಯೆಯನ್ನು ನೀಡುತ್ತಿಲ್ಲ. ಇದನ್ನೂ ಓದಿ :ಬೆಳ್ಳಿ ಹುಡುಗ ಸುಹಾಸ್‍ಗೆ ಕುಟುಂಬಸ್ಥರ ಅಭಿನಂದನೆ

 

View this post on Instagram

 

A post shared by Mehmet Nuri Ersoy (@mehmetersoytr)

ಕತ್ರಿನಾ ಪ್ರಸ್ತುತ ‘ಟೈಗರ್ 3’ ಸಿನಿಮಾದ ಶೂಟಿಂಗ್‍ನಲ್ಲಿ ಬ್ಯುಸಿಯಾಗಿದ್ದು, ಶೂಟಿಂಗ್‍ಗಾಗಿ ರಷ್ಯಾಗೆ ತೆರಳಿದ್ದಾರೆ. ಈ ವೇಳೆ ತೆಗೆದ ಕೆಲವು ಫೊಟೋಗಳನ್ನು ಸೋಶಿಯಲ್ ಮೀಡಿಯಾದಲ್ಲಿ ಹಂಚಿಕೊಂಡಿದ್ದಾರೆ. ಈ ಚಿತ್ರದಲ್ಲಿ ಸಲ್ಮಾನ್ ಖಾನ್ ನಟಿಸುತ್ತಿದ್ದು, ಇವರಿಬ್ಬರೂ ಮತ್ತೆ ತೆರೆಮೇಲೆ ಮೋಡಿಮಾಡಲು ಬರುತ್ತಿದ್ದಾರೆ. ಇವರಿಬ್ಬರ ಜೋಡಿಯನ್ನು ನೋಡಲು ಅಭಿಮಾನಿಗಳು ತುಂಬಾ ಕಾತುರದಿಂದ ಕಾಯುತ್ತಿದ್ದಾರೆ. ಇದನ್ನೂ ಓದಿ :ನಿಗದಿತ ಅವಧಿಯ ಒಳಗೆ ವಿಮಾನ ನಿಲ್ದಾಣ ಕಾಮಗಾರಿ ಪೂರ್ಣವಾಗುತ್ತೆ: ಸಿ.ಸಿ.ಪಾಟೀಲ್

ಈ ಸಿನಿಮಾದ ಬಜೆಟ್ ಕೂಡ ಹೈ ಇದ್ದು, ನಿರ್ಮಾಪಕರು ಸಹ ಚಿತ್ರದಲ್ಲಿ ಯಾವುದೇ ರೀತಿಯ ರಾಜಿಯಾದೆ ಶೂಟಿಂಗ್ ಅನ್ನು ಹೆಚ್ಚು ವಿದೇಶದಲ್ಲಿ ಮಾಡುತ್ತಿದ್ದಾರೆ. ಈಗ ಈ ಚಿತ್ರತಂಡ ಟರ್ಕಿಯಲ್ಲಿದೆ.

Click to comment

Leave a Reply

Your email address will not be published. Required fields are marked *

Advertisement
Advertisement
Public TV We would like to show you notifications for the latest news and updates.
Dismiss
Allow Notifications